ತುಂಗಭದ್ರಾ ತೀರದ ಜನರೇ ಎಚ್ಚರ! ನಿನ್ನೆಗಿಂತ ಇಂದು ಹೊರಹರಿವಿನ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ

author-image
AS Harshith
Updated On
ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?
Advertisment
  • ತುಂಗಭದ್ರಾ ಡ್ಯಾಂನ 19ನೇ ಚೈನ್​ ಲಿಂಕ್​ ಗೇಟ್​​ ಕಟ್​
  • ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ.. ಇಂದೇನು ಕತೆ?
  • ನಿನ್ನೆ ಎಷ್ಟು ನೀರನ್ನು ಹೊರಹರಿಸಲಾಗಿದೆ ಗೊತ್ತಾ? ಇಂದು ಎಷ್ಟು ನೀರು ಹೊರಹರಿಸಲು ಪ್ಲಾನ್​?

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ, ನಿನ್ನೆ ಈಡಿ ದಿನ ಒಂದು ಲಕ್ಷ ಕ್ಯೂಸೆಕ್ ನೀರು ಹೊರ ಹರಿಸಲಾಗಿತ್ತು. ಅದಕ್ಕಿಂತಲೂ ಅಧಿಕ ನೀರನ್ನು ಹೊರಗಡೆ ಬಿಡೋದಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ. ರಿಪೇರಿಗಾಗಿ ಡ್ಯಾಂ ನೀರು ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆಯೇ ಇಂದು ಒಂದೂವರೇ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಚಿಂತಿಸಿದ್ದಾರೆ. ಅದಕ್ಕಾಗಿ ಟಿಬಿ ಬೋರ್ಡ್ ನೀರಿನ ಹೊರಹರಿವಿನ ಪ್ರಮಾಣ ಏರಿಕೆ ಮಾಡಲಿದೆ.

publive-image

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿದ್ಧೇಶ್ವರನಾಥನ ಸನ್ನಿಧಿಯಲ್ಲಿ ಕಾಲ್ತುಳಿತ.. 7 ಜನರು ಸಾವು, 35 ಮಂದಿಗೆ ಗಂಭೀರ ಗಾಯ

ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆಯೊಳಗೆ ಒಂದೂವರೇ ಲಕ್ಷ ಕ್ಯೂಸೆಕ್ ನೀರು ಹೊರ ಹರಿವು ಏರಿಕೆ ಮಾಡಲಾಗಿದೆ. ಮಾತ್ರವಲ್ಲದೆ ತುಂಗಭದ್ರಾ ನದಿ ಪಾತ್ರದ ಜನರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

ಇನ್ನು ಡ್ಯಾಂ ಕ್ರೆಸ್ಟ್​ ಗೇಟ್​ ರಿಪೇರಿಗೆ 105 TMC ಸಾಮರ್ಥ್ಯದ ಡ್ಯಾಂನಲ್ಲಿ 60 ಕ್ಯೂಸೆಕ್​ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment