ಶಾಪಿಂಗ್​ ಮಾಲ್​ಗಳಲ್ಲಿ ಬಟ್ಟೆ ಟ್ರಯಲ್ ಮಾಡುವವರೇ ಎಚ್ಚರ ಎಚ್ಚರ.. ಈ ಸೋಂಕು ನಿಮಗೂ ತಾಕಬಹುದು

author-image
Veena Gangani
Updated On
ಶಾಪಿಂಗ್​ ಮಾಲ್​ಗಳಲ್ಲಿ ಬಟ್ಟೆ ಟ್ರಯಲ್ ಮಾಡುವವರೇ ಎಚ್ಚರ ಎಚ್ಚರ.. ಈ ಸೋಂಕು ನಿಮಗೂ ತಾಕಬಹುದು
Advertisment
  • ಇಷ್ಟವಾಗೋ ಬಟ್ಟೆಗಳನ್ನು ಟ್ರಯಲ್ ನೋಡೋ ಮುನ್ನ ಎಚ್ಚರ
  • ನೀವು ಮಾಲ್​​ಗಳಿಗೆ ಹೋಗಿ ಬಟ್ಟೆ ಖರೀದಿ ಮಾಡ್ತಾ ಇದ್ದೀರಾ?
  • ಮಾಲ್​ಗಳಿಗೆ ಹೋಗಿ ಬಟ್ಟೆ ಖರೀದಿ ಮಾಡೋರೇ ಸ್ಟೋರಿ ಓದಿ

ಬಟ್ಟೆ ಎಂದರೆ ಯಾರಿಗೆ ತಾನೇ ಇಷ್ಟ ಹೇಳಿ. ಈಗಂತೂ ದಿನ ದಿನ ಹೊಸ ಹೊಸ ಬಟ್ಟೆಯನ್ನು ಖರೀದಿಸುವ ಜನರಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ಮಾಲ್​ಗಳಿಗೆ ಹೋಗಿ ತಮಗಿಷ್ಟವಾಗುವ ಬಟ್ಟೆಗಳನ್ನು ಆಯ್ಕೆ ಮಾಡಿ ಟ್ರಯಲ್​ ರೂಮ್​ಗೆ ಹೋಗುತ್ತಾರೆ.

ಇದನ್ನೂ ಓದಿ:ನಟ ಸುಶಾಂತ್ ಸಿಂಗ್‌ ಸಾವಿಗೆ ಕಾರಣ ಹೇಳಿದ ಸಿಬಿಐ! ಕಾಣದ ಕೈಗಳ ಕೈವಾಡಕ್ಕೆ ಸಾಕ್ಷಿಯಿಲ್ಲ ಎಂದ ತನಿಖಾ ಸಂಸ್ಥೆ!

publive-image

ಆದ್ರೆ, ಇಲ್ಲಿ ನೀವು ಗಮನಿಸಬೇಕಾದ ಅಂಶವೇ ಬಟ್ಟೆ. ಹೌದು, ಪ್ರತಿನಿತ್ಯ ಮಾಲ್​ಗಳಿಗೆ ನೂರಾರು ಸಂಖ್ಯೆಯಲ್ಲಿ ಜನರು ಹೋಗ್ತಾನೇ ಇರುತ್ತಾರೆ. ಆದ್ರೆ ಹೋದವರು ಸುಮನ್ನೆ ಇರ್ತಾರಾ? ಇಲ್ಲ, ಹಾಗೇ ಒಂದು ಬಟ್ಟೆಯನ್ನು ಟ್ರಯಲ್​ ಮಾಡಿ ನೋಡ್ತಾರೆ. ಜೊತೆಗೆ ಇಷ್ಟವಾದರೇ ಖರೀದಿ ಮಾಡ್ತಾರೆ, ಇಲ್ಲವಾದರೇ ಅದನ್ನು ಅಲ್ಲಿಯೇ ಬಿಟ್ಟು ಹೋಗ್ತಾರೆ.

publive-image

ಉದಾಹರಣೆಗೆ ಸೋಂಕಿತ, ಅಥವಾ ಚರ್ಮದ ಅಲರ್ಜಿಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಹೀಗೆ ಮಾಲ್​ಗೆ ಹೋದಾಗ ಆತನಿಗೆ ಇಷ್ಟವಾಗುವ ಬಟ್ಟೆಯನ್ನು ಟ್ರಯಲ್​ ಮಾಡಿ ನೋಡ್ತಾನೆ. ಹೀಗೆ ಇಷ್ಟವಾಗದೇ ಇದ್ದಾಗ ಆ ಬಟ್ಟೆಯನ್ನು ಹಾಗೇಯೇ ಅಲ್ಲಿಯೇ ಬಿಟ್ಟು ಹೋಗ್ತಾನೆ ಅಂದು ಅಂದುಕೊಳ್ಳಿ. ಆಗ ಮತ್ತೊಬ್ಬ ವ್ಯಕ್ತಿ ಬಂದು ಅದೇ ಬಟ್ಟೆಯನ್ನು ಧರಿಸಿಕೊಂಡಿದ್ದೇ ಆದ್ರೆ ಆ ಸೋಂಕು ಆತನಿಗೆ ತಗುಲಿ ಬಿಡುತ್ತದೆ. ಇದರಿಂದ ಆತ ದೀರ್ಘಕಾಲದ ಕಾಯಿಲೆಗೂ ತುತ್ತಾಗುವ ಸಾಧ್ಯತೆ ಇರುತ್ತದೆ.

publive-image

ಅಲ್ಲದೇ ಮಾಲ್​ನಲ್ಲಿ ಬೇರೆ ಬೇರೆ ಅಂತ ಸಾಕಷ್ಟು ಕಂಪನಿಯ ಬಟ್ಟೆಗಳು ಇರುತ್ತವೆ. ಕೆಲವು ಡ್ರೆಸ್ ಕಂಪನೀಸ್ ಅವರು ಬ್ಯಾಕ್ಟಿರಿಯಲ್ ಸೋಂಕುಗಳು ತಟ್ಟಬಾರದು ಅಂತ ಆ ಬಟ್ಟೆಗೆ ಕೆಮಿಕಲ್ ಅನ್ನು ಸೇರಿಸಿರುತ್ತಾರೆ. ಅದೇ ಬಟ್ಟೆ ನಿಮ್ಮ ದೇಹಕ್ಕೆ ತಾಕಿದ ಕೂಡಲೇ ಆ ಸೋಂಕು ನಿಮಗೆ ತಾಗಿ ಬಿಡುತ್ತದೆ. ಹೀಗಾಗಿ ಆದಷ್ಟು ಹೊರಗಿನಿಂದ ಯಾವುದಾದರೂ ಡ್ರೆಸ್ ತಗೊಂಡು ಬಂದಾಗ ಅದನ್ನ ಮೊದಲು ಬಿಸಿ ನೀರಿನಲ್ಲಿ ತೊಳೆದು ಹಾಕಿಕೊಂಡರೇ ಉತ್ತಮ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment