newsfirstkannada.com

ವಿದ್ಯುತ್ ದರ ಹೆಚ್ಚಳದ ವಿರುದ್ಧ ಸಿಡಿದೆದ್ದ ಜನರು; 100 ಯುನಿಟ್ ಮೇಲ್ಪಟ್ಟು ಬಳಕೆ ಮಾಡಿದ್ರೆ ಎಷ್ಟು ರೂಪಾಯಿ ಗೊತ್ತಾ?

Share :

12-06-2023

  ರಾಜ್ಯದ ಜನರಿಗೆ ವಿದ್ಯುತ್​ ಶಾಕ್​

  100 ಯುನಿಟ್​ಗೆ ಎಷ್ಟು ಗೊತ್ತಾ?

  ಸಿಎಂ ಕೊಟ್ಟ ಸ್ಪಷ್ಟೀಕರಣ ಏನು?

ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳದ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಎರಡು ಮೂರು ತಿಂಗಳ ಬಿಲ್ ಒಮ್ಮೆಲೆ ಬಂದಿದ್ದು ಕಂಡು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ, ವಿದ್ಯುಚ್ಛಕ್ತಿ ಕಂಪನಿ ಪ್ರಕಟಣೆ ಹೊರಡಿಸಿದ್ದು, ಕೆಲ ಸ್ಪಷ್ಟೀಕರಣ ನೀಡಿದೆ. ಜೊತೆಗೆ ಸಿಎಂ ಕೂಡ ಇದು ಹಿಂದಿನ ಸರ್ಕಾರದ ನಿರ್ಧಾರ ಅಂತ ಹೇಳಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್​​​ ಕೊಟ್ಟ ಗ್ಯಾರಂಟಿಗಳಿಗೆ ಈಗ ಭರಪೂರ ಚಾಲನೆ ಸಿಕ್ತಿದೆ. ನಿನ್ನೆಯಷ್ಟೇ ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ಮಾಡಲಾಗಿದ್ದು, ಸ್ತ್ರೀ ಪ್ರಯಾಣಿಕರಿಗೆ ಶಕ್ತಿ ತುಂಬಲಾಗಿದೆ. ಆದರೆ ಇನ್ನೊಂದ್ಕಡೆ ವಿದ್ಯುಚ್ಛಕ್ತಿ ದರ ಎರಾಽಬಿರಿಽ ಏರಿಕೆ ಆಗಿದ್ದು, ಗ್ರಾಹಕರ ತಲೆ ಗಿರ್ಽ ಅಂತಿದೆ. ಕಳೆದ ಮೇ 12 ರಂದು ವಿದ್ಯುತ್ ದರವನ್ನ ಯೂನಿಟ್​ಗೆ 70 ಪೈಸೆ ಏರಿಕೆ ಮಾಡಲಾಗಿದೆ. ಜೂನ್​ ತಿಂಗಳಿಂದ 2 ಸ್ತರಗಳಲ್ಲಿ ಗ್ರಾಹಕರಿಗೆ ವಿದ್ಯುತ್​​ ಯೂನಿಟ್​​ ದರ ಫಿಕ್ಸ್​ ಮಾಡಿದೆ.

100 ಯುನಿಟ್ ಮೇಲ್ಪಟ್ಟು ಬಳಕೆ ಮಾಡಿದರೆ 7 ರೂಪಾಯಿ

ಜೂನ್ ತಿಂಗಳಿನಲ್ಲಿ ವಿದ್ಯುತ್ ಬಳಕೆಯ ಬಿಲ್‌ನಲ್ಲಿ ಪರಿಷ್ಕತ ಶುಲ್ಕವನ್ನ ನಮೂದಿಸಲಾಗಿದೆ ಅಂತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸ್ಪಷ್ಟಪಡಿಸಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್​ನಿಂದ ಪೂರ್ವನ್ವಯವಾಗಲಿದೆ. ಹೀಗಾಗಿ ಬಿಲ್‌ನಲ್ಲಿ ಆ ತಿಂಗಳ ಹಿಂಬಾಕಿಯನ್ನ ನೀಡಲಾಗಿದೆ. ಹಾಗೆಯೇ ಆದೇಶದ ಪ್ರಕಾರ 2 ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹಿಸಲಾಗ್ತಿದೆ.

ಹೇಗಿದೆ ವಿದ್ಯುತ್​​ ಶಾಕ್​?

ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್‌ಗೆ ಪ್ರತಿ ಯೂನಿಟ್ ದರ 4.75 ರೂ ವಿಧಿಸಲಾಗಿದೆ. 100 ಯೂನಿಟ್‌ ಮೀರಿದ್ದಲ್ಲಿ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶೇಣಿ ದರ ಪ್ರತಿ ಯೂನಿಟ್‌ಗೆ 7 ರೂ.ನಂತೆ ಅನ್ವಯವಾಗಲಿದೆ ಎಂದು ತಿಳಿಸಿದೆ. ದರ ಪರಿಷ್ಕರಣೆ ಆದೇಶದಲ್ಲಿ ನಿಗದಿತ ಶುಲ್ಕದಲ್ಲಿ 1 ರಿಂದ 50 ಕಿಲೋ ವ್ಯಾಟ್ ವಿದ್ಯುತ್ ಲೋಡ್‌ಗೆ 110 ರೂ ಹಾಗೂ 50 ಕಿಲೋ ವ್ಯಾಟ್​ಗಿಂತಲೂ ಮೇಲ್ಪಟ್ಟ ವಿದ್ಯುತ್‌ ಲೋಡ್‌ಗೆ 210 ರೂ ವಿದ್ಯುತ್ ದರ ನಿಗದಿಪಡಿಸಲಾಗಿದೆ.

ಏಪ್ರಿಲ್ ತಿಂಗಳ ಹೆಚ್ಚಳ ಜೂನ್ ತಿಂಗಳಿನಲ್ಲಿ ವಸೂಲಿ

2022ರ ನವೆಂಬರ್​ನಲ್ಲಿ ವಿದ್ಯುತ್ ದರ ಪರಿಷ್ಕರಣೆ ಮನವಿಯನ್ನ ಪುರಸ್ಕರಿಸಲಾಗಿದೆ. ಇದೀಗ ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್​ಗೆ 70 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈ ಮೊತ್ತವನ್ನು ಜೂನ್ ತಿಂಗಳಲ್ಲಿ ಸಂಗ್ರಹಿಸಲಾಗ್ತಿದೆ ಅಂತ ಬೆಸ್ಕಾಂ ಎಂಡಿ ತಿಳಿಸಿದ್ದಾರೆ. ಈ ಪ್ರಕಾರ 110 ಯೂನಿಟ್ ಬಳಸಿದವರಿಗೆ ₹770 ಬಿಲ್ ಬಂದಿದೆ. ಅಂದರೆ ಏಕಾಏಕಿ ₹223.50 ಹೆಚ್ಚಳ ಆಗಿದೆ.

ಈ ಕುರಿತು ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾವು ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಮಾಡಿದ್ದೇವೆ ಎಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.. ವಿದ್ಯುತ್ ದರ ಹೆಚ್ಚಳದ ಬಗ್ಗೆ ಏಪ್ರಿಲ್ 1ಕ್ಕೆ ತೀರ್ಮಾನವಾಗಿತ್ತು ಅಂತ ಹೇಳಿದ್ದಾರೆ.. ಅಲ್ಲದೆ, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಾರೆ, ವಿದ್ಯುಚ್ಛಕ್ತಿ ಮಂಡಳಿ ಮತ್ತು ಸಿಎಂ ಅದೆಷ್ಟೇ ಸ್ಪಷ್ಟೀಕರಣ ಕೊಟ್ರೂ, ಬೆಲೆ ಅಂತೂ ದುಪ್ಪಟ್ಟು ಏರಿಕೆ ಆಗಿದೆ ಅನ್ನೋದು ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯುತ್ ದರ ಹೆಚ್ಚಳದ ವಿರುದ್ಧ ಸಿಡಿದೆದ್ದ ಜನರು; 100 ಯುನಿಟ್ ಮೇಲ್ಪಟ್ಟು ಬಳಕೆ ಮಾಡಿದ್ರೆ ಎಷ್ಟು ರೂಪಾಯಿ ಗೊತ್ತಾ?

https://newsfirstlive.com/wp-content/uploads/2023/06/Electric-Bill.jpg

Load More