/newsfirstlive-kannada/media/post_attachments/wp-content/uploads/2025/07/SMG-MANTRAVADI-1.jpg)
ಜಗತ್ತು ಅದೆಷ್ಟೇ ಆಧುನಿಕತೆಯತ್ತ ದಾಪುಗಾಲಿಡ್ತಿದ್ರೂ ಕೆಲವರು ಮಾತ್ರ ನಾವಿರೋದೇ ಹೀಗೆ ಸ್ವಾಮಿ ಅಂತಾರೆ. ಮೌಢ್ಯತೆಯ ಮುಸುಕಿನಲ್ಲಿ ಭದ್ರಾವತಿ ತಾಲೂಕು ಮುಳುಗಿದಂತೆ ಕಾಣ್ತಿದೆ. ದೆವ್ವ ಬಿಡಿಸ್ತೀನಿ ಅನ್ನೋ ನೆಪದಲ್ಲಿ ಮಂತ್ರವಾದಿ ಮಾಡಿರೋ ಹುಚ್ಚಾಟಕ್ಕೆ ಇಡೀ ಶಿವಮೊಗ್ಗ ಬೆಚ್ಚಿ ಬಿದ್ದಿದೆ.
ಮೂಢನಂಬಿಕೆಗೆ ಮಹಿಳೆ ಬಲಿ
ದೆವ್ವ ಬಿಡಿಸುವಂತಹ ಮಹಿಳಾ ಮಂತ್ರವಾದಿಯ ಹೊಡೆತಕ್ಕೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ನಡೆದಿದೆ. ಜಂಬರಘಟ್ಟ ಗ್ರಾಮ ಗೀತಾ (35) ಮೃತಪಟ್ಟ ಮಹಿಳೆ. ಗೀತಾಗೆ ದೆವ್ವ ಹಿಡಿದಿದೆ ಎಂದು ಹೇಳಿ ಅದನ್ನು ಬಿಡಿಸಲು ಆಶಾ ಎಂಬ ಮಹಿಳೆ ಮುಂದಾಗಿದ್ದಾಳೆ.
ದೆವ್ವ ಬಿಡಿಸುವ ಸಂದರ್ಭದಲ್ಲಿ ಮಹಿಳೆಗೆ ಕೋಲಿನಿಂದ ಆಶಾ ಹೊಡೆದಿದ್ದಾಳೆ. ಇದರಿಂದ ತೀವ್ರವಾದ ಅಸ್ವಸ್ಥಕ್ಕೆ ಗುರಿಯಾಗಿದ್ದ ಮಹಿಳೆ ಬೆಳಗ್ಗೆ ಜೀವ ಬಿಟ್ಟಿದ್ದಾಳೆ. ಆದ್ರೆ ಕೆಲ ದಿನಗಳಿಂದ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕರೆದೊಯ್ಯದೇ ಮಂತ್ರವಾದಿ ಬಳಿ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು.. ಗರ್ಭಿಣಿ ಆದ್ಮೇಲೆ ಪ್ರೇಮಿ ಪರಾರಿ, ಸಂತ್ರಸ್ತೆ ಏಕಾಂಗಿ..
ಮೃತ ಗೀತಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನ ಆಸ್ಪತ್ರೆಗೆ ಕೊಂಡೊಯ್ಯದೇ ಮೊನ್ನೆ ರಾತ್ರಿ ಆಶಾ ಎಂಬ ಮಂತ್ರವಾದಿ ಬಳಿ ಕರೆದೊಯ್ಯಲಾಗಿತ್ತು. ಮೈಮೇಲೆ ದೆವ್ವ ಬಂದಿದೆ ಅಂತ ಮಂತ್ರವಾದಿ ಆಶಾ.. ಕೋಲಿಂದ.. ನಿಂಬೆ ಹಣ್ಣಿನಿಂದ.. ಕೈಯಿಂದ ಥಳಿಸಿದ್ದಾರೆ. ಇದೇ ವೇಳೆ ಅಸ್ವಸ್ಥಗೊಂಡಿದ್ದ ಗೀತಾ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ.
ಸ್ಥಳೀಯರು ಹೇಳಿದ್ದೇನು?
ಈ ಮೊದಲು ಗೀತಮ್ಮ ಚೆನ್ನಾಗಿಯೇ ಇದ್ದರು. ಅವರಿಗೆ ಯಾವುದೇ ಕಾಯಿಲೆ, ಕಸಾಲೆ ಇರಲಿಲ್ಲ. ಎರಡು ದಿನಗಳಿಂದ ಯಾಕೋ ಹುಷಾರಿಲ್ಲ ಎಂದಿದ್ದರಂತೆ. ಅಷ್ಟಕ್ಕೇ ಆಕೆಯ ಮಗ ಈ ನಕಲಿ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಗೆ ಹೋದಾಗ ಚೆನ್ನಾಗಿ ಹೊಡೆದಿದ್ದಾಳೆ. ಅವಳು ತನಗೆ ಚೌಡಮ್ಮ ಬರುತ್ತಾಳೆ ಎಂದು ತಿರುಗುತ್ತಾಳೆ. ಆಕೆಗೆ ಹಾಗೆ ಹೇಳಿಕೊಂಡು ತಿರುಗೋಕೆ ಹತ್ತಿ ಸರಿಯಾಗಿ 15 ದಿನ ಕೂಡ ಆಗಿರಲಿಲ್ಲ. ಆಕೆ ಹೇಳ್ತಿರೋದು ಸುಳ್ಳು ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲಿಸಿ ಕೇಸ್​ ದಾಖಲಿಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಗೀತಾಳ ಶವದ ಮರಣೋತ್ತರ ಪರೀಕ್ಷೆ ನಡೆದಿದೆ. ಗೀತಾಳ ಸಾವು ಸಾಕಷ್ಟು ಚರ್ಚೆಗೆ ಎಡೆಮಾಡಿ ಕೊಟ್ಟಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಆಶಾಳನ್ನು ಬಂಧಿಸಿದ್ದಾರೆ. ಕಾಯಿಲೆಗಳೇನಾದ್ರೂ ಇದ್ರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ಅದು ಬಿಟ್ಟು ಹೀಗೆ ಮಂತ್ರವಾದಿಗಳ ಬಳಿ ಹೋಗಿ ಅಮಾಯಕ ಜೀವಗಳನ್ನು ಬಲಿ ಕೊಡಬೇಡಿ.
ಇದನ್ನೂ ಓದಿ: ಅಮೆರಿಕ ಪ್ರವಾಸಕ್ಕೆ ಹೋಗಿ ಜೀವ ಬಿಟ್ಟರು.. ತಂದೆ, ತಾಯಿ ಇಬ್ಬರು ಮಕ್ಕಳು ಸಜೀವ ದಹನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ