newsfirstkannada.com

ಇನ್ಮುಂದೆ ಕಾಡು ಪ್ರಾಣಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿದರೆ ಅರೆಸ್ಟ್​

Share :

Published March 16, 2024 at 2:30pm

Update March 16, 2024 at 2:33pm

    ಆನೆ, ಹುಲಿ ಮತ್ತು ವನ್ಯಜೀವಿಗಳ ಫೋಟೋ, ಸೆಲ್ಫಿ ಕ್ಲಿಕ್ಕಿಸುವಂತಿಲ್ಲ

    ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡರೂ ಶಿಕ್ಷೆ ಖಚಿತ

    ವನ್ಯಜೀವಿ ಕಾಯ್ಡೆಯಡಿ ಇಂಥಾ ನಿರ್ಧಾರವನ್ನು ತೆಗೆದುಕೊಂಡ ಸರ್ಕಾರ

ಒಡಿಶಾ: ಆನೆ, ಹುಲಿ, ಮತ್ತು ಇತರೆ ವನ್ಯಜೀವಿಗಳೊಂದಿಗೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅಂತವರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ.

1972 ವನ್ಯಜೀವಿ ಕಾಯ್ದೆಯಡಿಯಲ್ಲಿ ಒಡಿಶಾ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆ ಮೂಲಕ ವನ್ಯ ಜೀವಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸುವವರಿಗೆ ಎಚ್ಚರಿಕೆ ನೀಡಿದೆ.

ಇನ್ನು ವನ್ಯಜೀವಿ ಕಾಯ್ದೆಯಡಿ ಅವುಗಳೊಂದಿಗೆ ಫೋಟೋ ಅಥವಾ ಸೆಲ್ಫಿ ಕ್ಲಿಕ್ಕಿಸುವುದು ಅವುಗಳ ನಿಯಮಿತ ಜೀವನ ಚಕ್ರಕ್ಕೆ ಅಡ್ಡಿಯಾಗುತ್ತದೆ. ಈ ಕಾರಣಕ್ಕೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಅಂತಹ ಫೋಟೋ ಹಂಚಿಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಇಂತಹ ಚಟುವಟಿಕೆಗಳಿಂದ ದೂರವಿರಲು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡಲು ಮುಂದಾಗಿದ್ದಾರೆ. ಜೊತೆಗೆ ಅನುಕೂಲದಂತೆ ಸಹಾಯವಾಣಿಯನ್ನು ಪ್ರದರ್ಶಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಕಾಡು ಪ್ರಾಣಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿದರೆ ಅರೆಸ್ಟ್​

https://newsfirstlive.com/wp-content/uploads/2024/03/Animal-Selfie.jpg

Load More