/newsfirstlive-kannada/media/post_attachments/wp-content/uploads/2025/03/PARK-NEW-RULE2.jpg)
ಬೆಂಗಳೂರು: ಜಾಗಿಂಗ್ ಮಾಡೋಕೆ ಪಾರ್ಕ್ ಹೋಗೋರು ಈ ಸುದ್ದಿ ಓದಲೇಬೇಕು. ಯಾಕಂದ್ರೆ ಈ ಪಾರ್ಕ್‌ನಲ್ಲಿ ಜಾಗಿಂಗ್ಗೆ ನಿಷೇಧ ಹೇರಲಾಗಿದೆ. ವಾಕ್ ಮಾಡೋಕೂ ತನ್ನದೇ ಆದ ರೂಲ್ಸ್ ಮಾಡಿದೆ. ಬಿಬಿಎಂಪಿ ಪಾರ್ಕ್‌ನಲ್ಲಿ ಈ ರೀತಿಯ ರೂಲ್ಸ್ ಮಾಡಿದ್ದರ ಹಿಂದೆ ಅದೊಂದು ಕಹಾನಿ ಕೂಡ ಇದೆ. ಟ್ರಾಫಿಕ್ ಜಂಜಾಟ, ರಣ ಬಿಸಿಲಿಗೆ ಬೆಂಗಳೂರಿಗರು ರೋಸಿ ಹೋಗಿದ್ದಾರೆ. ಜನರಿಗೆ ಆರೋಗ್ಯ ಸಮಸ್ಯೆ ಕಾಡ್ತಿದೆ. ಹೊಟ್ಟೆ ಬೊಜ್ಜು ಕರಗಿಸೋಕೆ ಜನರು ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ನಲ್ಲಿ ಜಾಗಿಂಗ್ ಮಾಡೋದು ಸಾಮಾನ್ಯ. ಆದ್ರೆ ಈ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ ಹೇರಲಾಗಿದ್ದು, ವಾಕಿಂಗ್ಗೂ ರೂಲ್ಸ್ ಮಾಡಲಾಗಿದೆ.
ಇದನ್ನೂ ಓದಿ:ಬೇವಿನ ಮರಕ್ಕೆ ಕಾರು ಭೀಕರ ಡಿಕ್ಕಿ; ವಿಜಯಪುರದಲ್ಲಿ ಮೂವರು ಸಾವು, ಓರ್ವ ಗಂಭೀರ
Clock Wise Directionನಲ್ಲಿ ವಾಕ್ ಮಾಡುವಂತೆ ನಿಯಮ!
ಇಂದಿರಾನಗರದಲ್ಲಿರುವ ಬಿಬಿಎಂಪಿ ಪಾರ್ಕ್‌ನಲ್ಲಿ ಇದೀಗ ಪ್ರತ್ಯೇಕ ರೂಲ್ಸ್ ಮಾಡಲಾಗಿದೆ. ಪಾರ್ಕ್ ನಲ್ಲಿ "No Jogging,Walk Clock Wise Direction,No Gamming Activities"ಎಂದು ಬೋರ್ಡ್ ಹಾಕಲಾಗಿದೆ. ವಿಚಾರ ಏನಂದ್ರೆ ಈ ಪಾರ್ಕ್‌ನಲ್ಲಿ ಹೆಣ್ಣುಮಕ್ಕಳು ವಾಕ್ ಮಾಡುವಾಗ ಕೆಲ ಪುರುಷರು ಕೆಟ್ಟ ಉದ್ದೇಶದಿಂದಲೇ ವಿರುದ್ಧ ದಿಕ್ಕಿನಲ್ಲಿ ವಾಕ್ ಮಾಡ್ತಿದ್ರಂತೆ. ಹೆಣ್ಣು ಮಕ್ಕಳು ಮುಖಕ್ಕೆ ನೇರವಾಗಿ ವಾಕಿಂಗ್ ಮಾಡುವುದರಿಂದ, ವಾಕಿಂಗ್ ಮಾಡ್ತಿದ್ದ ಹೆಣ್ಣಮಕ್ಕಳಿಗೆ ಇರುಸು ಮುರುಸು ಆಗ್ತಿತ್ತು. ಈ ಬಗ್ಗೆ ಸೋಶೀಯಲ್ ಮೀಡಿಯಾದಲ್ಲೂ ಕೂಡ ಕೆಲವರು ಅಳಲು ತೋಡ್ಕೊಂಡಿದ್ರು. ಎದುರು ಬದುರಾಗಿ ವಾಕ್ ಮಾಡೋದಕ್ಕೆ ನಿಷೇಧ ಹೇರಿದ್ದು, ಇದೀಗ ಪಾರ್ಕ್‌ನಲ್ಲಿ Clock Wise Directionನಲ್ಲಿ ಮಾತ್ರ ವಾಕ್ ಮಾಡುವಂತೆ ನಿಯಮ ಮಾಡಲಾಗಿದೆ. ಹೊಸ ನಿಯಮದಿಂದ ಹೆಣ್ಣುಮಕ್ಕಳು ಫುಲ್ ಖುಷ್ ಆಗಿದ್ದಾರೆ.
ಈ ಪಾರ್ಕ್ಗೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದು, ಹಿರಿಯರು ವಾಕ್ ಮಾಡುವಾಗ, ಬೇರೆಯವರು ಜಾಗಿಂಗ್ ಮಾಡಿದ್ರೆ ಸಮಸ್ಯೆಯಾಗುತ್ತೆ ಅನ್ನೋ ಕಾರಣಕ್ಕೆ ಜಾಗಿಂಗ್ ಮಾಡೋದಕ್ಕೂ ನಿಷೇಧ ಹೇರಲಾಗಿದೆ. ಪಾರ್ಕ್‌ನಲ್ಲಿ ಬಂದು ಕಾರ್ಡ್ ಆಡ್ತಾರೆ ಅನ್ನೋ ಕಾರಣಕ್ಕೆ ಪಾರ್ಕಿಂಗ್ನಲ್ಲಿ ಗೇಮಿಂಗ್ ಆ್ಯಕ್ಟಿವಿಟೀಸ್ ನಿಷೇಧ ಹೇರಲಾಗಿದೆ. ಸದ್ಯ ಬಿಬಿಎಂಪಿ ಹಾಗೂ ಇಂದಿರಾನಗರದ Social Amenities Association (ಸಾಮಾಜಿಕ ಸೌಕರ್ಯಗಳ ಸಂಘ) ಮಾತುಕತೆ ಮಾಡಿ ಈ ರೀತಿಯ ನಿಯಮ ಮಾಡಿದ್ದು, ಹೊಸ ರೂಲ್ಸ್ನಿಂದ ಪಾರ್ಕ್‌ನಲ್ಲಿ ನೆಮ್ಮದಿಯಾಗಿ ವಾಕ್ ಮಾಡ್ಬೋದು ಅನ್ನೋದು ಸ್ಥಳೀಯರ ಅಭಿಪ್ರಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ