/newsfirstlive-kannada/media/post_attachments/wp-content/uploads/2024/11/JOBS_KPSC-1.jpg)
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವಂತ ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗೆ ಅಬಕಾರಿ ಇಲಾಖೆ ಅರ್ಜಿಗಳನ್ನು ಆಹ್ವಾನ ಮಾಡಲಿದೆ. ಹೀಗಾಗಿ ಅಭ್ಯರ್ಥಿಗಳು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಂಡರೇ ಉತ್ತಮ.
ಅಬಕಾರಿ ಇಲಾಖೆಯ ಆಯುಕ್ತರಿಗೆ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಆದೇಶದ ಪ್ರತಿ ನೀಡುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಇನ್ನು ಎರಡ್ಮೂರು ತಿಂಗಳಲ್ಲಿ ಅಥವಾ ಇದೇ ತಿಂಗಳ ಕೊನೆಯಲ್ಲಿ ಈ ಉದ್ಯೋಗಳಿಗೆ ಅರ್ಜಿ ಕರೆಯಲಾಗುತ್ತದೆ. ಇದಕ್ಕಾಗಿ ಕಾದು ಕುಳಿತಿರುವ ಉದ್ಯೋಗಾಕಾಂಕ್ಷಿಗಳು ದಾಖಲೆ ಸೇರಿದಂತೆ ಹುದ್ದೆಗೆ ಬೇಕಾಗುವುದನ್ನು ಮೊದಲೇ ಸಿದ್ಧ ಪಡಿಸಿಕೊಳ್ಳಬೇಕು.
ಇದನ್ನೂ ಓದಿ:ರೈಲ್ವೆ ಇಲಾಖೆಯಿಂದ ಗುಡ್ನ್ಯೂಸ್; ಬೃಹತ್ ಮಟ್ಟದಲ್ಲಿ ಉದ್ಯೋಗ ನೇಮಕಾತಿ.. SSLC ಮುಗಿಸಿದ್ರೆ ಸಾಕು
ಎಷ್ಟು ಹುದ್ದೆಗಳು, ಯಾವ್ಯಾವ ಕೆಲಸಗಳು ಎಂದು ನೋಡುವುದಾದರೆ ಅಬಕಾರಿ ಪೇದೆ ಹುದ್ದೆ 942, ಅಬಕಾರಿ ಉಪ ನಿರೀಕ್ಷಕರ 265 ಹುದ್ದೆಗಳನ್ನು (ಕಲ್ಯಾಣ ಕರ್ನಾಟಕ ವೃಂದ ಸೇರಿದೆ) ತುಂಬಲಾಗುತ್ತದೆ. ಒಟ್ಟು ಸೇರಿ 1,207 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕವಾಗಿ ವೇತನ ಶ್ರೇಣಿ ಆರಂಭದಲ್ಲಿ ಅಬಕಾರಿ ಉಪ ನಿರೀಕ್ಷಕರಿಗೆ 30,350 ಹಾಗೂ ಪೇದೆ ಕೆಲಸಕ್ಕೆ 21,400 ರೂಪಾಯಿಗಳನ್ನು ನೀಡಲಾಗುತ್ತದೆ.
ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಅಬಕಾರಿ ಉಪ ನಿರೀಕ್ಷಕ ಹುದ್ದೆಗೆ ಪದವಿ ಹಾಗೂ ಪೇದೆ ಕೆಲಸಕ್ಕೆ ದ್ವಿತಿಯ ಪಿಯುಸಿ ಅನ್ನು ನಿಗದಿ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಗೆ ಬಂದರೆ ಪರೀಕ್ಷೆ, ದೈಹಿಕ ಸಾಮರ್ಥ್ಯ, ಮೆಡಿಕಲ್ ಪರೀಕ್ಷೆ ಇರುತ್ತದೆ. ಇನ್ನು ಈ ಉದ್ಯೋಗಗಳ ಹೆಚ್ಚಿನ ಮಾಹಿತಿ ಇಲಾಖೆ ಅಧಿಸೂಚನೆ ರಿಲೀಸ್ ಮಾಡಿದ ಬಳಿಕ ಎಲ್ಲವೂ ತಿಳಿದು ಬರಲಿದೆ. ಅದು ಏನೇ ಇರಲಿ, ಸರ್ಕಾರ ಅನುಮತಿ ಕೊಟ್ಟಿದ್ದರಿಂದ ಅರ್ಜಿ ಕರೆಯುವುದಂತು ಪಕ್ಕಾ ಆಗಿದೆ. ಆದ್ದರಿಂದ ಉದ್ಯೋಗ ಆಕಾಂಕ್ಷಿಗಳು ಎಲ್ಲ ತರಹದ ಪೂರ್ವ ತಯಾರಿಯಲ್ಲಿ ತೊಡಗಿಕೊಂಡರೇ ಬದುಕಿಗೆ ಮುಂದೆ ಒಂದು ದಾರಿ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ