Advertisment

ಸಾಲಗಾರರ ಕಾಟ.. ಡೆತ್​ನೋಟ್​ನಲ್ಲಿ​ ಹೆಸರುಗಳನ್ನ ಬರೆದಿಟ್ಟು ವ್ಯಕ್ತಿ ನಾಪತ್ತೆ

author-image
Bheemappa
Updated On
ಸಾಲಗಾರರ ಕಾಟ.. ಡೆತ್​ನೋಟ್​ನಲ್ಲಿ​ ಹೆಸರುಗಳನ್ನ ಬರೆದಿಟ್ಟು ವ್ಯಕ್ತಿ ನಾಪತ್ತೆ
Advertisment
  • ಅವಶ್ಯಕತೆಗಾಗಿ ಕೆಲವರಿಂದ ಸಾಲ ಪಡೆದುಕೊಂಡಿದ್ದ ವ್ಯಕ್ತಿ
  • ವ್ಯಕ್ತಿ ಬರೆದ ಡೆತ್​ನೋಟ್​ನಲ್ಲಿ ಯಾರ, ಯಾರ ಹೆಸರಿವೆ?
  • ವ್ಯಕ್ತಿ ಎಲ್ಲಿದ್ದರೋ, ಬದುಕಿದ್ದರೋ, ಮೃತಪಟ್ಟರೋ ತಿಳಿದಿಲ್ಲ

ಮೈಸೂರು: ಸಾಲಗಾರರ ಕಾಟ ತಡೆಯಲಾರದೇ ವ್ಯಕ್ತಿಯೊಬ್ಬರು ಹೆದರಿ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ನಡೆದಿದೆ.

Advertisment

ಇದನ್ನೂ ಓದಿ:RCB ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್​.. ಐಪಿಎಲ್​​ನ ಈ ಟೀಮ್​ಗೆ ರಾಹುಲ್​ ದ್ರಾವಿಡ್​ ಹೆಡ್​ ಕೋಚ್?

ಕುಟ್ಟುವಾಡಿ ಗ್ರಾಮದ ಆಟೋ ಡ್ರೈವರ್ ಪ್ರಸಾದ್ (37) ನಾಪತ್ತೆಯಾಗಿರುವ ವ್ಯಕ್ತಿ. ಇವರು ಜೀವನಕ್ಕಾಗಿ ಆಟೋ ಓಡಿಸಿಕೊಂಡು ಇದ್ದರು. ಇದೇ ವೇಳೆ ಅವಶ್ಯಕತೆಗಾಗಿ ಕೆಲವರಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದನು. ಬಳಿಕ ಪಡೆದ ಸಾಲವನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ಸಾಲ ಕೊಟ್ಟವರು ಹಣ ಕೊಡುವಂತೆ ಕೇಳಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್​ ಟಾರ್ಗೆಟ್​; FIR ದಾಖಲು

Advertisment

ಇದರಿಂದ ಹೆದರಿದ ವ್ಯಕ್ತಿ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸದ್ಯ ಇವರು ಎಲ್ಲಿದ್ದರೋ, ಬದುಕಿದ್ದರೋ, ಸಾವನ್ನಪ್ಪಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ ಡೆತ್​ನೋಟ್​​ನಲ್ಲಿ ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಎನ್ನುವರು ಕಾರಣ ಎಂದು ಉಲ್ಲೇಖ ಮಾಡಿದ್ದಾನೆ. ಸದ್ಯ ವ್ಯಕ್ತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಪ್ರಸಾದ್ ಪತ್ತೆಗಾಗಿ ಬಿಳಿಕೆರೆ ಪೊಲೀಸರು ಶೋಧ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment