/newsfirstlive-kannada/media/post_attachments/wp-content/uploads/2024/11/rajasthana2-1.jpg)
ರಾಜಸ್ಥಾನದ ಜುನ್ ಜುನ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರು ರೋಗಿಯನ್ನು ಪರೀಕ್ಷಿಸಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಹೀಗಾಗಿ ಆತನ ಶವವನ್ನು ಚಿತೆಯ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಏಕಾಏಕಿ ಎದ್ದು ಕುಳಿತು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಇದನ್ನೂ ಓದಿ: ಮೆಗಾ ಹರಾಜಿನಲ್ಲಿ ಟೇಲರ್ ಮಗ.. ದೊಡ್ಡ ಅದೃಷ್ಟದ ನಿರೀಕ್ಷೆಯಲ್ಲಿ ಯುವ ಪ್ರತಿಭೆ
ಹೌದು, ಜುನ್ ಜುನ್ ಜಿಲ್ಲೆಯ 45 ವರ್ಷದ ರೋಹಿತಾಸ್ ಮೂಗ ಹಾಗೂ ಕಿವುಡನಾಗಿದ್ದ. ಒಂದು ದಿನ ರೋಹಿತಾಸ್ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಬಿ.ಡಿ.ಕೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೋಹಿತಾಸ್ನನ್ನು ಪರೀಕ್ಷಿಸಿದ ವೈದ್ಯರು ಈತ ಚಿಕಿತ್ಸೆ ಫಲಿಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಬಳಿಕ ಎರಡೂವರೆ ಗಂಟೆ ಕಾಲ ಶವವನ್ನು ಆಸ್ಪತ್ರೆಯ ಫ್ರೀಜರ್ನಲ್ಲಿ ಇಡಲಾಗಿತ್ತು. ನಂತರ ಆತನ ಶವವನ್ನು ಮಾ ಸೇವಾ ಸಂಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಅಲ್ಲದೇ ಪಂಚದೇವ ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಆತನ ಶವ ತೆಗೆದುಕೊಂಡು ಚಿತೆಯ ಮೇಲೆ ಇಡಲಾಗಿತ್ತು. ಚಿತೆಯ ಮೇಲೆದ್ದ ಆತನ ಎದೆಯ ಏರಿಳಿತವನ್ನು ಜನರು ಗಮನಿಸಿದ್ದಾರೆ. ಇದರಿಂದಲೇ ರೋಹಿತಾಸ್ ಉಸಿರಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆ ಕೂಡಲೇ ಆತನನ್ನು ಬಿ.ಡಿ.ಕೆ. ಆಸ್ಪತ್ರೆಗೆ ರೋಹಿತಾಸ್ ಶಿಫ್ಟ್ ಮಾಡಿದ್ದಾರೆ. ಇದಾದ ಬಳಿಕ ರೋಹಿತಾಸ್ ಪರೀಕ್ಷಿಸಿದ ವೈದ್ಯರು ಇನ್ನೂ ಈತ ಸತ್ತಿಲ್ಲ ಅಂತ ತಿಳಿಸಿದ್ದಾರೆ. ಐಸಿಯುಗೆ ದಾಖಲಿಸಿ ರೋಹಿತಾಸ್ಗೆ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನೆಯ ಬಗ್ಗೆ ರಾಮವತಾರ್ ಮೀನಾ ಅವರು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದಲೂ ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ