T20 ಕ್ರಿಕೆಟ್​​ ನಿವೃತ್ತಿಯಿಂದ ವಾಪಸ್​ ಬರ್ತಾರಾ ಕೊಹ್ಲಿ, ರೋಹಿತ್​ ಶರ್ಮಾ? ಏನಿದು ಸ್ಟೋರಿ?

author-image
Ganesh Nachikethu
Updated On
ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?
Advertisment
  • ಟೀಮ್​ ಇಂಡಿಯಾ, ಜಿಂಬಾಬ್ವೆ ಕ್ರಿಕೆಟ್​​​ ತಂಡದ ಮಧ್ಯೆ ಟಿ20 ಸರಣಿ
  • ಭಾರತ ತಂಡವನ್ನೇ ಮಣಿಸಿ ಇತಿಹಾಸ ನಿರ್ಮಿಸಿದ ಜಿಂಬಾಬ್ವೆ ಟೀಮ್​​​
  • ರೋಹಿತ್​​, ವಿರಾಟ್​​ ಕೊಹ್ಲಿ ಟಿ20 ನಿವೃತ್ತಿ ವಾಪಸ್​ಗೆ ಭಾರೀ ಬೇಡಿಕೆ

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್​ ಗೆದ್ದು ಖುಷಿಯಲ್ಲಿ ತೇಲುತ್ತಿರೋ ಟೀಮ್​ ಇಂಡಿಯಾ ಫ್ಯಾನ್ಸ್​​ಗೆ ಜಿಂಬಾಬ್ವೆ ಕ್ರಿಕೆಟ್​ ಆಘಾತ ನೀಡಿದೆ. ಇತ್ತೀಚೆಗಷ್ಟೇ ಕ್ರಿಕೆಟ್​ ದಿಗ್ಗಜ ವಿರಾಟ್​ ಕೊಹ್ಲಿ, ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಹಾಗಾಗಿ ಜಿಂಬಾಬ್ವೆ ವಿರುದ್ಧದ ಸರಣಿಗೆ ಯುವ ಪಡೆಯನ್ನು ಆಯ್ಕೆ ಮಾಡಲಾಗಿತ್ತು. ಈ ಸರಣಿಯಲ್ಲಿ ಜಿಂಬಾಬ್ವೆ ಟೀಮ್​ ಇಂಡಿಯಾ ಶಾಕ್​ ಮೇಲೆ ಶಾಕ್​ ನೀಡುತ್ತಿದೆ.

ಹರಾರೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾವನ್ನು ಜಿಂಬಾಬ್ವೆ ಮಣಿಸಿತು. ಕೇವಲ 102 ರನ್‌ಗಳಿಗೆ ಭಾರತ ತಂಡವನ್ನು ಆಲೌಟ್ ಮಾಡಿ 13 ರನ್​ಗಳಿಂದ ಗೆದ್ದಿತ್ತು. ಇಷ್ಟೇ ಇಲ್ಲ 3ನೇ ಪಂದ್ಯದಲ್ಲೂ ಭಾರತದ ವಿರುದ್ಧ ಕೇವಲ 20 ರನ್​ಗಳಿಂದ ಸೋತಿದ್ದು, ಗೆಲುವಿನ ಸಮೀಪಕ್ಕೆ ಬಂದಿತ್ತು. 2ನೇ ಪಂದ್ಯದಲ್ಲಿ ಅಭಿಷೇಕ್​ ಶರ್ಮಾ ಅದ್ಭುತ ಆಟದಿಂದ ಭಾರತ ಗೆದ್ದಿತ್ತು. ಹಾಗಾಗಿ ಕೊಹ್ಲಿ, ರೋಹಿತ್​​​ ತಮ್ಮ ಟಿ20 ಕ್ರಿಕೆಟ್​ ನಿವೃತ್ತಿಯಿಂದ ವಾಪಸ್​ ಬರಲಿ ಅನ್ನೋ ಚರ್ಚೆ ಜೋರಾಗಿದೆ.

ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಫ್ಯಾನ್ಸ್​ ಬೇಸತ್ತಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಳಿಕ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ವಾಪಸ್​ ಪಡೆದು ಮತ್ತೆ ಆಡಬೇಕು ಎಂದು ಡಿಮ್ಯಾಂಡ್​ ಮಾಡಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ಸೀರೀಸ್​​.. ಕೆ.ಎಲ್​​ ರಾಹುಲ್​​ಗೆ ಬಿಗ್​ ಶಾಕ್​ ಕೊಟ್ಟ ಕೋಚ್​​ ಗಂಭೀರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment