/newsfirstlive-kannada/media/post_attachments/wp-content/uploads/2024/11/Petrol.jpg)
ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆ ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಮನೆಯೊಂದರ ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್ ಬರುತ್ತಿದೆ! ವಿಷಯ ತಿಳಿದ ಗ್ರಾಮಸ್ಥರು ಪೆಟ್ರೋಲ್ ತುಂಬಿಸಿಕೊಳ್ಳಲು ಬಾವಿ ಬಳಿ ಓಡೋಡಿ ಬಂದಿದ್ದಾರೆ. ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಬಾವಿಯನ್ನು ಬಂದ್ ಮಾಡಿದ್ದಾರೆ.
ನಂತರ ಬಾವಿಯಿಂದ ಪೆಟ್ರೋಲ್ ಹೇಗೆ ಬರುತ್ತದೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೀಗ ಬಾವಿ ಒಳಗೆ ಪೆಟ್ರೋಲ್ ಬಂದಿರುವ ಅಸಲಿ ಕಾರಣ ರಿವೀಲ್ ಆಗಿದೆ. ಇದು ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದ್ಹಾಗೆ ಇದು ಗೀಡಂ (Geedam) ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ:BBK11: ಚಿಕಿತ್ಸೆಗೆಂದು ಆಚೆ ಹೋಗಿದ್ದ ಚೈತ್ರಾ ತಪ್ಪುಗಳು ಒಂದಾ.. ಎರಡಾ; ಇಂಚಿಂಚೂ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಇಲ್ಲಿ ಭೋಲು ಜೈನ್ ಅನ್ನೋರ ಕುಟುಂಬ ವಾಸವಿದೆ. ಬುಧವಾರ ಬೆಳಗ್ಗೆ ಮನೆಯವರು ನೀರಿಗಾಗಿ ಬಾವಿಗೆ ಬಕೆಟ್ ಇಳಿಸಿದ್ದರು. ಬಾವಿಯಿಂದ ಬಕೆಟ್ ತೆಗೆದಾಗ ನೀರು ವಿಚಿತ್ರವಾಗಿ ಕಂಡಿದೆ. ಸ್ವಲ್ಪ ಹೊತ್ತು ಪರಿಶೀಲಿಸಿದಾಗ ಇದು ಪೆಟ್ರೋಲ್ ಅನ್ನೋದು ಗೊತ್ತಾಗಿದೆ. ಈ ವಿಚಾರ ಆ ಭಾಗದ ತುಂಬಾ ಹರಡಿತು.
‘ಬಾವಿಯಿಂದ ಪೆಟ್ರೋಲ್ ಬರುತ್ತಿದೆ..’ ಅನ್ನೋ ಮಾತು ಕೇಳಿದ ಜನ ಮನೆಯಿಂದ ಬಕೆಟ್ ಹಿಡಿದು ಬಾವಿಗೆ ಬರತೊಡಗಿದರು. ಭಾರೀ ಸಂಖ್ಯೆಯಲ್ಲಿ ಜನ ಪೆಟ್ರೋಲ್‌ಗಾಗಿ ಮುಗಿಬಿದ್ದರು. ಮನೆ ಬಳಿ ದೊಡ್ಡ ಸರತಿ ಸಾಲುಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯಿತು. ನಂತರ ಪೊಲೀಸರ ಎಂಟ್ರಿಯಾಗಿದೆ.
ಇದನ್ನೂ ಓದಿ:ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಡೇಟ್ ಫಿಕ್ಸ್; ಈ ಬಾರಿ ವ್ಯಾಪಾರಿಗಳಿಗೂ ಇದೆ ಸಿಹಿಸುದ್ದಿ..!
ಪೆಟ್ರೋಲ್ ಕಳ್ಳತನ ಪ್ರಕರಣ
ಕೆಲವು ದಿನಗಳ ಹಿಂದೆ ಪೆಟ್ರೋಲ್ ಪಂಪ್ ಮಾಲೀಕರು ಪೆಟ್ರೋಲ್ ಕಳ್ಳತನದ ಕೇಸ್ ದಾಖಲಿಸಿದ್ದರು. ಬಫ್ನಾ ಪೆಟ್ರೋಲ್ ಪಂಪ್ ಮಾಲೀಕರು, ಪ್ರತಿದಿನ ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂದು ದೂರು ನೀಡಿದ್ದರು. ಈ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಕದ್ದು ಬಾವಿಗೆ ಸುರಿದಿದ್ದಾರೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಆದರೆ ಅವರ ಸಂಶಯ ಸುಳ್ಳಾಗಿತ್ತು.
ನಿಜವಾದ ಕಾರಣ!
ನಂತರ ಇನ್ನೊಂದು ಆಯಾಮದಲ್ಲಿ ಪೊಲೀಸರು ತನಿಖೆಗೆ ಮುಂದಾಗುತ್ತಾರೆ. ಈ ಮನೆಯಿಂದ 100 ಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ಅಲ್ಲಿನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿದೆ. ಇಲ್ಲಿಂದ ಭೂಮಿಗೆ ನುಗ್ಗಿದ ಪೆಟ್ರೋಲ್, ಈ ಬಾವಿಗೆ ತಲುಪಿದೆ ಅನ್ನೋದನ್ನು ಕಂಡುಕೊಂಡಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನೆಯ ಸುತ್ತ ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಟ್ಯಾಂಕ್ ದುರಸ್ತಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಬಂತು ಆನೆಬಲ.. ಬಿಗ್ ಸ್ಟಾರ್ ತಂಡಕ್ಕೆ ಎಂಟ್ರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ