PF ಹಣ ಪಡಿಯೋದು ಮತ್ತಷ್ಟು ಸುಲಭ.. ATM, UPI ಮೂಲಕ ದುಡ್ಡು ಡ್ರಾ..!

author-image
Ganesh
Updated On
PF ಹಣ ಪಡಿಯೋದು ಮತ್ತಷ್ಟು ಸುಲಭ.. ATM, UPI ಮೂಲಕ ದುಡ್ಡು ಡ್ರಾ..!
Advertisment
  • ಕಾರ್ಮಿಕರಿಗೆ ಭರ್ಜರಿ ಗುಡ್​ನ್ಯೂಸ್ ಕೊಟ್ಟ ಸರ್ಕಾರ
  • ATMನಿಂದ ಯಾವಾಗ ಪಿಎಫ್ ಹಣ ಪಡೆಯಬಹುದು?
  • ಇನ್ಮೇಲೆ ಪಿಎಫ್ ಹಣಕ್ಕಾಗಿ ಅಲೆದಾಟ ಮಾಡಬೇಕಾಗಿಲ್ಲ

ಈ ಮೊದಲು ಪಿಎಫ್ ಹಣ ಡ್ರಾ ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಇನ್ಮುಂದೆ ಆ ರೀತಿಯ ಯಾವುದೇ ಪ್ರಮೇಯ ಬರಲ್ಲ. ATM ಮೂಲಕ ಸುಲಭವಾಗಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ.

ಹೌದು, ಜೂನ್​​ನಿಂದ PF ಹಣವನ್ನು ಎಟಿಎಂ ಅಥವಾ ಯುಪಿಐ ಮೂಲಕ ಹಿಂಪಡೆಯುವ ಯೋಜನೆ ಜಾರಿಗೆ ಬರಲಿದೆ. ಪಿಎಫ್ ಹಣ ಪಡೆಯಲು ಉದ್ಯೋಗಿಗಳು, ನಿವೃತ್ತ ಉದ್ಯೋಗಿಗಳು ಆಫೀಸಿಗೆ ಎಡತಾಕಬೇಕಿತ್ತು. ಇಲ್ಲದಿದ್ರೆ ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಿಬೇಕಾಗಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್‌ ಹಣವಿತ್ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಕಾರ್ಮಿಕ ಸಚಿವಾಲಯ ಅದಕ್ಕೆ ಅನುಮೋದನೆ ನೀಡಿದೆ.

ಇದನ್ನೂ ಓದಿ: ವಿಶೇಷ ಫೀಚರ್​​​ ಪರಿಚಯಿಸೋ ಪ್ಲಾನ್; ಬಳಕೆದಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ವಾಟ್ಸಪ್​​​​

publive-image

ಈ ವರ್ಷದ ಜೂನ್ ವೇಳೆಗೆ ಪಿಎಫ್ ಗ್ರಾಹಕರು ಯುಪಿಐ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ. ಗ್ರಾಹಕರು ಪಿಎಫ್ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿ ನೋಡಬಹುದು. ಸ್ವಯಂ ಚಾಲಿತ ವ್ಯವಸ್ಥೆ ಮೂಲಕ ತಕ್ಷಣವೇ ಒಂದು ಲಕ್ಷ ರೂಪಾಯಿವರೆಗೆ ತಮ್ಮ ಆದ್ಯತೆಯ ಬ್ಯಾಂಕ್ ಖಾತೆ ಮೂಲಕ ಹಿಂಪಡೆಯಲು ಮತ್ತು ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗುಜರಾತ್ ಟೈಟನ್ಸ್​ಗೆ ವಿರೋಚಿತ ಸೋಲು; ಪಂಜಾಬ್ ಗೆಲುವಿಗೆ ಇಂಪ್ಯಾಕ್ಟ್ ಮಾಡಿದ ಕನ್ನಡಿಗ ವೈಶಾಕ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment