newsfirstkannada.com

ಅಸಿಸ್ಟೆಂಟ್​​ ಪ್ರೊಫೆಸರ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್​​ನ್ಯೂಸ್​​; ಇನ್ಮುಂದೆ ಪಿಎಚ್​​.ಡಿ ಕಡ್ಡಾಯವಲ್ಲ! ಆದರೆ..

Share :

06-07-2023

    ಅಸಿಸ್ಟೆಂಟ್​​ ಪ್ರೊಫೆಸರ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್​​ನ್ಯೂಸ್

    ಸಹಾಯಕ ಪ್ರಾಧ್ಯಾಪಕರಾಗಲು ಪಿಎಚ್‌.ಡಿ ಕಡ್ಡಾಯ ಎಂದಿದ್ದ ಯುಜಿಸಿ

    ಪಿಎಚ್‌.ಡಿ ಕಡ್ಡಾಯ ನಿರ್ಧಾರದಿಂದ ಹಿಂದೆ ಸರಿದ ಯುಜಿಸಿ ಹೇಳಿದ್ದೇನು?

ದೆಹಲಿ: ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌.ಡಿ ಕಡ್ಡಾಯ ಎಂದಿದ್ದ ಯೂನಿವರ್ಸಿಟಿ ಗ್ರ್ಯಾಂಟ್​​ ಕಮಿಷನ್ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಇನ್ಮುಂದೆ ಸಹಾಯಕ ಪ್ರಾಧ್ಯಾಪಕರು ಆಗಲು ಎನ್​​ಇಟಿ, ಎಸ್​​ಇಟಿ, ಎಸ್​​ಎಲ್​​ಇಟಿ ಪರೀಕ್ಷೆಗಳು ಕನಿಷ್ಠ ಅರ್ಹತಾ ಮಾನದಂಡ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಘೋಷಿಸಿದೆ.

ಈ ಸಂಬಂಧ ಮಾತಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಧ್ಯಕ್ಷ ಎಂ. ಜಗದೀಶ್​​ ಕುಮಾರ್​​, ಅಸಿಸ್ಟೆಂಟ್​​ ಪ್ರೊಫೆಸರ್​ ಆಗಲು ಪಿಎಚ್​​.ಡಿ ಕೇವಲ ಆಪ್ಷನಲ್​​. ಹೀಗಾಗಿ NET/SET/SLET ಕ್ಲಿಯರ್​ ಮಾಡಿದ್ರೆ ಸಾಕು ಎಂದಿದ್ದಾರೆ. ಈ ಮೂಲಕ ಸಹಾಯಕ ಪ್ರಾಧ್ಯಾಪಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ.

ಈ ಹಿಂದೆ ಯುಜಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಸಿದ್ಧಪಡಿಸಿ ಪಿಎಚ್‌ಡಿ ಕಡ್ಡಾಯ ಎಂದಿತ್ತು. ‘ನೆಟ್’ (ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್) ಹಾಗೂ ರಾಜ್ಯ ಪ್ರವೇಶ ಪರೀಕ್ಷೆ (ಸೆಟ್) ಜತೆಗೆ ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕನಾಗಲು ಪಿಎಚ್‌ಡಿ ಕಡ್ಡಾಯ ನಿಯಮ ಜಾರಿ ಆಗಿತ್ತು. ಕಾಲೇಜುಗಳ ಸಹಾಯಕಪ್ರಾಧ್ಯಾಪಕರು ಹೆಚ್ಚಿನ ವೇತನ ಶ್ರೇಣಿಗೆ ಬಡ್ತಿ ಬೇಕು ಎಂದರೆ ಕಡ್ಡಾಯವಾಗಿ ಪಿಎಚ್‌ಡಿ ಮಾಡಿರಬೇಕು. ಇದು 2020ರ ಜುಲೈನಿಂದಲೇ ಜಾರಿಯಲ್ಲಿತ್ತು. ಈಗ ಅಸಿಸ್ಟೆಂಟ್​​ ಪ್ರೊಫೆಸರ್ ಆಗಲು ಪಿಎಚ್​​.ಡಿ ಕಡ್ಡಾಯವೇನಲ್ಲ ಎಂದು ಆದೇಶಿಸಲಾಗಿದೆ.

ಅಸಿಸ್ಟೆಂಟ್​​ ಪ್ರೊಫೆಸರ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್​​ನ್ಯೂಸ್​​; ಇನ್ಮುಂದೆ ಪಿಎಚ್​​.ಡಿ ಕಡ್ಡಾಯವಲ್ಲ! ಆದರೆ..

https://newsfirstlive.com/wp-content/uploads/2023/07/Raghu-R-1.jpg

Load More