ನ್ಯೂಸ್​​ಫಸ್ಟ್​ಗೆ ಲಂಡನ್​​ನಿಂದ ಧನ್ಯವಾದ ತಿಳಿಸಿದ PhD ವಿದ್ಯಾರ್ಥಿನಿ.. ಈ ಥ್ಯಾಂಕ್ಸ್ ಹಿಂದಿದೆ ನೋವಿನ ಕಥೆ

author-image
Bheemappa
Updated On
ನ್ಯೂಸ್​​ಫಸ್ಟ್​ಗೆ ಲಂಡನ್​​ನಿಂದ ಧನ್ಯವಾದ ತಿಳಿಸಿದ PhD ವಿದ್ಯಾರ್ಥಿನಿ.. ಈ ಥ್ಯಾಂಕ್ಸ್ ಹಿಂದಿದೆ ನೋವಿನ ಕಥೆ
Advertisment
  • ಕಿಡ್ನಿ ದಾನ ಮಾಡಿ ಹಣ ಹೊಂದಿಸಲು ಮುಂದಾಗಿದ್ದ ಪೋಷಕರು
  • ವಿದೇಶದಲ್ಲಿ ಪಿಹೆಚ್​ಡಿ ಮಾಡಲು ರೆಡಿಯಾಗಿದ್ದ ವಿದ್ಯಾರ್ಥಿನಿಗೆ ಶಾಕ್
  • ಕನಸಿನ ಹೂ ಅರಳಲು ಕೊಡುಗೆ ನೀಡಿದ್ದ ನ್ಯೂಸ್​ಫಸ್ಟ್ ಚಾನೆಲ್

ಬೆಂಗಳೂರು: ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ನ್ಯೂಸ್​ಫಸ್ಟ್​ ಚಾನೆಲ್​ಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಕನಸಿನ ಹೂವು ಅರಳಲು ಕೊಡುಗೆ ನೀಡಿದ್ದ ಚಾನೆಲ್​ನ ಕಾರ್ಯವನ್ನ ಮೆಚ್ಚಿ ವಿದ್ಯಾರ್ಥಿನಿ ನೆನಪು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಕೂಡ ಇಲ್ಲಿ ವಿವರವಾಗಿ ಇದೆ.

ತುಮಕೂರಿನ ತಿಪಟೂರು ಬಳಿ ಇರುವ ಚಿಕ್ಕನಾಯನಹಳ್ಳಿಯ ವಿದ್ಯಾರ್ಥಿನಿ ನೇಹಾ ಅವರು ಸದ್ಯ ಈಗ ಇಂಗ್ಲೆಂಡ್​ನ ಲಿವರ್ ಪೂಲ್​ನಲ್ಲಿ ಪಿಹೆಚ್​ಡಿ ಮಾಡುತ್ತಿದ್ದಾರೆ. ಅಲ್ಲಿಂದಲೇ ವಿದ್ಯಾರ್ಥಿನಿ ನೇಹಾ ಅವರು ನ್ಯೂಸ್​ಫಸ್ಟ್​ಗೆ ಧನ್ಯವಾದ ತಿಳಿಸಿದ್ದಾರೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಮಾಡಬೇಕು ಎನ್ನುವುದು ವಿದ್ಯಾರ್ಥಿನಿಯ ಕನಸಾಗಿತ್ತು. ಅದರಂತೆ ಲಂಡನ್​​ನಲ್ಲಿ ಪಿಹೆಚ್​ಡಿಗೆ ಸೀಟ್ ಸಿಕ್ಕಿತ್ತು. ಹೀಗಾಗಿ ಪ್ರಬುದ್ಧ ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಇದೇ ವೇಳೆ ಸರ್ಕಾರ ಈ ಯೋಜನೆಯನ್ನ ರದ್ದು ಮಾಡಿದ್ದರಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಸಿಲುಕಿದ್ದರು.

ಇದನ್ನೂ ಓದಿ:ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ

publive-image

ಯೋಜನೆಯಡಿ ಸ್ಕಾಲರ್​ಶಿಪ್ ಸಿಗದೇ ನೇಹಾ ಸಮಸ್ಯೆಗೆ ಸಿಲುಕಿದ್ದರು. ಮಗಳ ಕನಸಿಗೆ ಜೀವ ತುಂಬಲು ಪೋಷಕರು ಸಿದ್ಧರಾಗಿದ್ದರು. ಇದಕ್ಕಾಗಿ ಕಿಡ್ನಿಗಳನ್ನ ದಾನ ಮಾಡಿ ಹಣ ಹೊಂದಿಸಲು ಮುಂದಾಗಿದ್ದರು. ಈ ಕಿಡ್ನಿ ದಾನದ ಕುರಿತು ನ್ಯೂಸ್​ಫಸ್ಟ್​ ಸುದ್ದಿ ಪ್ರಸಾರ ಮಾಡಿತ್ತು. ಜುಲೈ 24 ರಂದು ನ್ಯೂಸ್​ಫಸ್ಟ್​ನಲ್ಲಿ ಪ್ರಸಾರ ಮಾಡಿದ್ದರಿಂದ ಜುಲೈ 25ರಂದು ಸದನದಲ್ಲಿ ಮಗಳ ಓದಿಗಾಗಿ ಪೋಷಕರು ಕಿಡ್ನಿ ದಾನ ಮಾಡುವ ವಿಚಾರ ಕುರಿತು ಪ್ರಸ್ತಾಪ ಮಾಡಲಾಗಿತ್ತು. ಚಿಕ್ಕನಾಯನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಅವರು ಪ್ರಸ್ತಾಪ ಮಾಡಿದ್ದರು.

ಇದಾದ ಮೇಲೆ ವಿದ್ಯಾರ್ಥಿನಿಗೆ ನಾವೇ ಸಹಾಯ ಮಾಡುವುದಾಗಿ ನ್ಯೂಸ್​ಫಸ್ಟ್​​ ಮೂಲಕ ಶಾಸಕ ಸುರೇಶ್ ಬಾಬು ಅವರು ಭರವಸೆ ನೀಡಿದ್ದರು. ವಿದ್ಯಾರ್ಥಿನಿಗೆ ತೊಂದರೆ ಆಗದಂತೆ ನಾವೇ ನೋಡಿಕೊಳ್ಳುತ್ತೇವೆ ಎಂದಿದ್ದರು. ಆದರೆ ಇದಾದ ಮೇಲೆ ಸರ್ಕಾರ ಹಣ ಕೊಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಭರವಸೆ ನೀಡಿದ್ದರು. ಮಾತಿನಂತೆ ಯೋಜನೆಯಡಿ ನೀಡಲಾಗಿದೆ.

ಏನಿದು ಪ್ರಬುದ್ಧ ಯೋಜನೆ..?

ವಿದೇಶ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್​ಡಿ ವಿದ್ಯಾಭ್ಯಾಸ ಮಾಡುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಯಡಿ ಧನ ಸಹಾಯ ಮಾಡಲಾಗುತ್ತದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತದೆ. ಆದರೆ ಇದನ್ನು ಸರ್ಕಾರ ರದ್ದು ಮಾಡಿದ್ದರಿಂದ ವಿದೇಶದಲ್ಲಿ ಪಿಹೆಚ್​ಡಿ ಮಾಡಲು ಮುಂದಾದವರಿಗೆ ಸಿಡಿಲು ಬಡಿದಂತೆ ಆಗಿತ್ತು. ಇದೀಗ ಇದೇ ಯೋಜನೆಯಡಿ ವಿದ್ಯಾರ್ಥಿನಿ ನೇಹಾಗೆ ಸಹಾಯಧನ ನೀಡಲಾಗಿದೆ.

ವಿದೇಶದಲ್ಲಿಯೇ PHD ಯಾಕೆ?
ವಿದೇಶದಲ್ಲಿ ಅಧ್ಯಯನ ಮಾಡುವವರಿಗೆ ಸಹಾಯ ಮಾಡಲೆಂದು ಈ ಪ್ರಬುದ್ಧ ಯೋಜನೆ ಈಗಾಗಲೇ ಜಾರಿಗೆ ತರಲಾಗಿದೆ. ಈ ಸ್ಕಾಲರ್​ ಶಿಪ್ ಅಡಿ ಎಷ್ಟು ವರ್ಷ ಓದುತ್ತಾರೋ, ಅಷ್ಟು ವರ್ಷದ ಶುಲ್ಕ ಸರ್ಕಾರವೇ ನೀಡುತ್ತದೆ. ಇದರಲ್ಲಿ ಟ್ಯೂಷನ್ ಫೀಸ್, ಅಕಮಡೇಷನ್ ಫೀಸ್, ತಿಂಗಳ ಖರ್ಚು, ವಿಮಾನ ಟಿಕೆಟ್ ದರ, ಮೆಡಿಕಲ್‌ ಇನ್ಶೂರೆನ್ಸ್, ಉಚಿತ ಬುಕ್ಸ್ ಕೂಡ ಸೇರಿರುತ್ತವೆ.

ಇದನ್ನೂ ಓದಿ: ಕೆಲಸ ಹುಡುಕುವವರಿಗೆ ಗುಡ್​ನ್ಯೂಸ್.. ಶೀಘ್ರದಲ್ಲೇ Group-D ಉದ್ಯೋಗಗಳ ನೇಮಕಾತಿ

publive-image

3 ವರ್ಷದಲ್ಲಿ ಪಿಹೆಚ್​ಡಿ ಪಡೆದವರ ಲೆಕ್ಕ

  • 9 ವಿದ್ಯಾರ್ಥಿಗಳು 3 ವರ್ಷದಲ್ಲಿ ಪಿಹೆಚ್​ಡಿ ಪಡೆದಿದ್ದಾರೆ
  • 2021-22- ಮೂವರು ವಿದ್ಯಾರ್ಥಿಗಳು
  • 2022-23- ಇಬ್ಬರು ಸ್ಟೂಡೆಂಟ್ಸ್​
  • 2023-24: 4 ವಿದ್ಯಾರ್ಥಿಗಳಿಗೆ ಪಿಹೆಚ್​ಡಿ
  • ಇದುವರೆಗೆ ಒಟ್ಟು₹8,81,00,582 ಸ್ಕಾಲರ್​ ಶಿಪ್‌ ನೀಡಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment