/newsfirstlive-kannada/media/post_attachments/wp-content/uploads/2025/06/SALT.jpg)
ದಿಢೀರ್ ಅಂತಾ ಆರ್​ಸಿಬಿ ಕ್ಯಾಂಪ್ ತೊರೆದು ಇಂಗ್ಲೆಂಡ್​ಗೆ ಹಾರಿದ್ದ ಫಿಲ್ ಸಾಲ್ಟ್ (Phil salt )​ ಸಿಹಿ ಸುದ್ದಿಯೊಂದಿಗೆ ಕಂಬ್ಯಾಕ್ ಮಾಡಿದ್ದಾರೆ. ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದಿರುವ ಸಾಲ್ಟ್​, ಹೊಸ ಹುಮ್ಮಸ್ಸಿನೊಂದಿಗೆ ತಂಡವನ್ನು ಕೂಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಸಾಲ್ಟ್​ ಅವರ ಗೆಳತಿ ಅಬಿ ಮೆಕ್ಲಾವೆನ್ (Abi McLaven) ಅವರು ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಸಾಲ್ಟ್​ ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದ ಸಾಲ್ಟ್​​, ಆರ್​ಸಿಬಿ ಫೈನಲ್ ಪ್ರವೇಶ ಬೆನ್ನಲ್ಲೇ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದರು. ಸಾಲ್ಟ್​ಗೆ ಜನಿಸಿರುವ ಮಗು ಯಾವುದು ಅನ್ನೋದ್ರ ಬಗ್ಗೆ ಬಹಿರಂಗಪಡಿಸಿಲ್ಲ.
/newsfirstlive-kannada/media/post_attachments/wp-content/uploads/2025/06/SALT-2.jpg)
ಇಂದು ಬೆಳಗ್ಗೆ ಅಹ್ಮದಾಬಾದ್​​ಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ. ಅಪ್ಪನಾದ ಖುಷಿಯಲ್ಲಿರುವ ಸಾಲ್ಟ್​ಗೆ ಪಂಜಾಬ್ ವಿರುದ್ಧ ಬ್ಯಾಟ್ ಬೀಸಲು ಮತ್ತಷ್ಟು ಜೋಶ್ ಸಿಕ್ಕಂತಾಗಿದೆ. ಇನ್ನು, Abi McLaven ಹಾಗೂ ಸಾಲ್ಟ್​ 2020ರಿಂದ ಡೇಟಿಂಗ್​ನಲ್ಲಿದ್ದರು. ಇದೀಗ ಈ ಜೋಡಿಗೆ ಮಗು ಜನಿಸಿದೆ.
/newsfirstlive-kannada/media/post_attachments/wp-content/uploads/2025/06/SALT-4.jpg)
ಅಬಿ ಮೆಕ್ಲಾವೆನ್ ಅವರು ಸೋಶಿಯಲ್​ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಫೈನಲ್​ ಪಂದ್ಯಕ್ಕಾಗಿ ಅಖಾಡಕ್ಕೆ ಧುಮುಕುತ್ತಿದೆ. 9 ವರ್ಷಗಳ ಬಳಿಕ ಮತ್ತೆ ಫೈನಲ್​ಗೆ ಬಂದಿರುವ ಆರ್​ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಮ್ ಎನಿಸಿದೆ. ಆರ್​ಸಿಬಿ ಫೈನಲ್ ಎಂಟ್ರಿ ಹಿಂದೆ ಫಿಲ್ ಸಾಲ್ಟ್ ಕೊಡುಗೆ ತುಂಬಾನೇ ಇದೆ. ಆರ್​ಸಿಬಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕೆ ಇಳಿಯುತ್ತಿರುವ ಸಾಲ್ಟ್​ 175.9 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬಿಸಿ, 387 ರನ್​ಗಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಫೈನಲ್.. ಆರ್​ಸಿಬಿ ಬಲಿಷ್ಠ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆಯುತ್ತಾರೆ..?
/newsfirstlive-kannada/media/post_attachments/wp-content/uploads/2025/06/SALT-2.jpg)
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us