ಸಿರಾಜ್​ಗೆ ಅತ್ಯಂತ ಬಿಗ್​ ಸಿಕ್ಸರ್​ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್​?

author-image
Bheemappa
Updated On
ಸಿರಾಜ್​ಗೆ ಅತ್ಯಂತ ಬಿಗ್​ ಸಿಕ್ಸರ್​ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್​?
Advertisment
  • ಸಾಲ್ಟ್ ಬಾರಿಸಿದ ಬಿಗ್ ಸಿಕ್ಸರ್​ ಎಷ್ಟು ಮೀಟರ್ ದೂರ ಹೋಗಿದೆ.?
  • ಸಾಲ್ಟ್ ಹೊಡೆದ ಸಿಕ್ಸರ್ ಬಾಲ್ ಸ್ಟೇಡಿಯಂ ಟಾಪ್​ ಮೇಲೆ ಬಿದ್ದಿತ್ತು
  • ಗುಜರಾತ್​ಗೆ 170 ರನ್​ಗಳ ಟಾರ್ಗೆಟ್ ಕೊಟ್ಟಿರುವ ಬೆಂಗಳೂರು

ಗುಜರಾತ್ ಟೈಟನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಓಪನರ್ ಫಿಲಿಪ್ ಸಾಲ್ಟ್​ ಬಿಗ್ ಸಿಕ್ಸರ್ ಸಿಡಿಸಿ ದಾಖಲೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರು ಮೊದಲ ಬ್ಯಾಟಿಂಗ್ ಮಾಡಿದ ಆರ್​ಸಿಬಿ 170 ರನ್​ಗಳ ಟಾರ್ಗೆಟ್​ ಅನ್ನು ಗುಜರಾತ್ ಟೈಟನ್ಸ್​ಗೆ ನೀಡಿದೆ. ಆರ್​ಸಿಬಿ ಪರ ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್​ ಬಹಳ ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. ಕೊಹ್ಲಿ ಕೇವಲ 7 ರನ್​ಗೆ ಔಟ್ ಆದರು. ಬಳಿಕ ಸಾಲ್ಟ್​ ಬ್ಯಾಟಿಂಗ್​ ಮುಂದುವರೆಸಿದ್ದರು.

ಇದನ್ನೂ ಓದಿ:RCBಗೆ ಶಾಕ್ ಮೇಲೆ ಶಾಕ್.. ವಿರಾಟ್, ಸಾಲ್ಟ್​ ಬೆನ್ನಲ್ಲೇ ಕ್ಯಾಪ್ಟನ್​ ರಜತ್ ಕೂಡ ಔಟ್​

publive-image

ಗುಜರಾತ್ ಪರ 5ನೇ ಓವರ್​ ಮಾಡಲು ಬಂದ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಆರ್​ಸಿಬಿಯ ಸ್ಫೋಟಕ ಬ್ಯಾಟ್ಸ್​ಮನ್​ ಸಾಲ್ಟ್​ ದೊಡ್ಡ ಸಿಕ್ಸರ್ ಬಾರಿಸಿದ್ದಾರೆ. ತಂಡದ ಮೊತ್ತ 29 ಆಗಿದ್ದಾಗ ಸಿರಾಜ್​ ಓವರ್​ನ 2ನೇ ಬಾಲ್ ಅನ್ನು ಚಿನ್ನಸ್ವಾಮಿ ಸ್ಟೇಡಿಯಂ ಟಾಪ್​ ಮೇಲೆ ಬೀಳುವಂತೆ ಸಾಲ್ಟ್​ ಸಿಕ್ಸರ್​ ಬಾರಿಸಿದ್ದಾರೆ. ಈ ಸಿಕ್ಸರ್​ 105 ಮೀಟರ್​ ದೂರ ಹೋಗಿತ್ತು. ಇದನ್ನು ನೋಡಿದ ಫ್ಯಾನ್ಸ್​ ಎಲ್ಲ ಅಬ್ಬಾ.. ಎಂಥ ದೊಡ್ಡ ಸಿಕ್ಸರ್ ಎಂದು ಅಚ್ಚರಿಯಾಗಿದ್ದಾರೆ.

ದುರದೃಷ್ಟಾವಶಾತ್ ಎಂದರೆ ಬಿಗ್ ಸಿಕ್ಸರ್ ಬಾರಿಸಿದ ಮುಂದಿನ ಬಾಲ್​ನಲ್ಲೇ ಸಾಲ್ಟ್ 14 ರನ್​ಗೆ​ ಕ್ಲೀನ್ ಬೋಲ್ಡ್​ ಅಗಿದ್ದಾರೆ. ಇದರಿಂದ ಸಿರಾಜ್​ ಕುಣಿದು ಕುಪ್ಪಳಿಸಿದ್ದಾರೆ. ಸಾಲ್ಟ್​ ಬಾರಿಸಿದ ಸಿಕ್ಸರ್​ ಈ ಟೂರ್ನಿಯ ಅತ್ಯಂತ ಬಿಗ್ ಸಿಕ್ಸರ್ ಆಗಿದೆ. ಹೈದ್ರಾಬಾದ್​ನ ಟ್ರಾವಿಸ್ ಹೆಡ್ ರಾಜಸ್ಥಾನ್ ವಿರುದ್ಧ 105 ಮೀಟರ್ ದೂರ ಸಿಕ್ಸರ್​ ಬಾರಿಸಿದ್ದರು. ಇದೀಗ ಸಾಲ್ಟ್​ ಕೂಡ ಅಷ್ಟೇ ದೂರ ಸಿಕ್ಸರ್ ಹೊಡೆದಿದ್ದಾರೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment