ಆರ್​​ಸಿಬಿ ಸೇರಿದ ಬೆನ್ನಲ್ಲೇ ಫಿಲ್​ ಸಾಲ್ಟ್​ಗೆ ಸುವರ್ಣಾವಕಾಶ; ಸ್ಟಾರ್​ ಆಟಗಾರನಿಗೆ ದೊಡ್ಡ ಲಾಟರಿ!

author-image
Ganesh Nachikethu
Updated On
ಸ್ಫೋಟಕ ಬ್ಯಾಟರ್​​ ಟ್ರ್ಯಾಕ್​ ರೆಕಾರ್ಡ್​​ ಬೆಚ್ಚಿಬಿದ್ದ RCB; ಫಿಲ್​ ಸಾಲ್ಟ್​ ಖರೀದಿಗೆ ಪ್ಲಾನ್​ ಹೇಗಿತ್ತು ಗೊತ್ತಾ?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜು
  • ಆರ್​​ಸಿಬಿ ತಂಡ ಸೇರಿದ ಸ್ಫೋಟಕ ಬ್ಯಾಟರ್​ ಫಿಲ್​ ಸಾಲ್ಟ್
  • ಬೆಂಗಳೂರು ಟೀಮ್​ ಸೇರಿದ ಬೆನ್ನಲ್ಲೇ ಒಲಿದ ಜಾಕ್​​ಪಾಟ್​

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡವನ್ನು ಕಟ್ಟಿದೆ. ಈ ಬಾರಿ ಹರಾಜಿನಲ್ಲಿ ಯುವಕರಿಗೆ ಮಣಿ ಹಾಕಿರೋ ಆರ್​​ಸಿಬಿ ಸಾಕಷ್ಟು ಅಚ್ಚರಿ ಮೂಡಿಸಿದೆ. ಆರ್​​ಸಿಬಿ ತಂಡಕ್ಕೆ ಇಂಗ್ಲೆಂಡ್​ ತಂಡದ ಸ್ಫೋಟಕ ಬ್ಯಾಟರ್​​ ಎಂಟ್ರಿ ನೀಡಿದ್ದಾರೆ. ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಇಂಗ್ಲೆಂಡ್‌ನ ಸ್ಫೋಟಕ ವಿಕೆಟ್​ ಕೀಪರ್​ ಬ್ಯಾಟರ್​​​ ಫಿಲ್​ ಸಾಲ್ಟ್​​ ಅದೃಷ್ಟ ಖುಲಾಯಿಸಿದೆ.

28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್​ ಸಾಲ್ಟ್​​ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರು ವಾಸಿ. ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್‌ ರೇಟ್‌ನಲ್ಲಿ 1106 ರನ್‌ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್​ ರೆಕಾರ್ಡ್​ ನೋಡಿ ಆರ್​​ಸಿಬಿ ಖರೀದಿ ಮಾಡಿದೆ.

ಸಾಲ್ಟ್​​ ತನ್ನ ಕರಿಯರ್​ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್​​ನಲ್ಲಿ 6-8 ರನ್​​ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್​​ನಲ್ಲಿ 12-15 ರನ್​​ ಕಲೆ ಹಾಕುತ್ತಾರೆ. 4 ಓವರ್​​ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್​​​ ಸಿಡಿಸುತ್ತಾರೆ. ಆವರೇಜ್​​ 2 ಓವರ್​​ಗೆ ಒಮ್ಮೆ 12 ರನ್​​ ಬಾರಿಸೋ ಸಾಮರ್ಥ್ಯ ಇದೆ.

ಇಂಗ್ಲೆಂಡ್​​, ಟೀಮ್​ ಇಂಡಿಯಾ ಮಧ್ಯೆ ಮಹತ್ವದ ಸರಣಿ

ಮುಂದಿನ ತಿಂಗಳು ಟೀಮ್​ ಇಂಡಿಯಾ ಇಂಗ್ಲೆಂಡ್​​ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಆಡಲಿದೆ. ಇಂಗ್ಲೆಂಡ್ ಮತ್ತು ಟೀಮ್​ ಇಂಡಿಯಾ ನಡುವಿನ ಟಿ20 ಸರಣಿ ಜನವರಿ 22ರಿಂದ ಶುರುವಾಗಲಿದೆ. ಇದಾದ ಬಳಿಕ ಏಕದಿನ ಸರಣಿ ಶುರುವಾಗಲಿದ್ದು, ಫೆಬ್ರವರಿ 12ಕ್ಕೆ ಕೊನೆ ಮ್ಯಾಚ್​​​ ನಡೆಯಲಿದೆ.

ಆರ್​​ಸಿಬಿ ಸ್ಟಾರ್​ ಆಟಗಾರನಿಗೆ ಜಾಕ್​ಪಾಟ್​​

ಇಂಗ್ಲೆಂಡ್​ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ನಂತರ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಇದಕ್ಕೂ ಮುನ್ನ ಭಾರತ ಪ್ರವಾಸಕ್ಕೆ ಇಂಗ್ಲೆಂಡ್​ ಕ್ರಿಕೆಟ್​​ ಮಂಡಳಿ ಬಲಿಷ್ಠ ತಂಡ ಪ್ರಕಟಿಸಿದೆ. ಭಾರತ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ಇಂಗ್ಲೆಂಡ್​ ತಂಡವನ್ನು ಜೋಸ್ ಬಟ್ಲರ್‌ ಲೀಡ್​ ಮಾಡಲಿದ್ದಾರೆ. ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಮಾರ್ಕ್ ವುಡ್ ರೀತಿಯ ಸ್ಟಾರ್​ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟೇ ಅಲ್ಲ ಫಿಲ್​ ಸಾಲ್ಟ್​ ಕೂಡ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾದಿಂದ ಸಿರಾಜ್​ಗೆ ಕೊಕ್​​; ವಿರಾಟ್​ ಕೊಹ್ಲಿ ಆಪ್ತನಿಗೆ ಒಲಿದ ಅದೃಷ್ಟ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment