/newsfirstlive-kannada/media/post_attachments/wp-content/uploads/2025/04/Philip_Salt-1-1.jpg)
ಐಪಿಎಲ್ ಎರಡನೇ ಇನ್ನಿಂಗ್ಸ್ಗೆ ಕೌಂಟ್ಡೌನ್ ಶುರುವಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕೂತಿದ್ದ ಆರ್ಸಿಬಿಗೆ, ಉಳಿದಿರುವ ಲೀಗ್ ಮತ್ತು ಪ್ಲೇ-ಆಫ್ ಪಂದ್ಯಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಆರ್ಸಿಬಿಗೆ ಸಿಹಿ ಸುದ್ದಿ ಸಿಕ್ಕಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಮೇ 29 ರಿಂದ ವೆಸ್ಟ್ ವಿಂಡೀಸ್ ವಿರುದ್ಧ ಮೂರು ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಆಡ್ತಿದೆ. ವೆಸ್ಟ್ ವಿಂಡೀಸ್ ಸರಣಿ ಹಿನ್ನೆಲೆಯಲ್ಲಿ ಆರ್ಸಿಬಿಯಲ್ಲಿರುವ ಸ್ಟಾರ್ ಪ್ಲೇಯರ್ಗಳಾದ ಜೊಕೊಬ್ ಬೆಥೆಲ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್ ಆರ್ಸಿಬಿಗೆ ಕೈಕೊಡ್ತಾರೆ ಎಂದು ವರದಿ ಆಗಿತ್ತು.
ಇದೀಗ ಇಂಗ್ಲೆಂಡ್ ವೆಸ್ಟ್ ವಿಂಡೀಸ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಏಕದಿನ ಸರಣಿಗೆ ಫಿಲ್ ಸಾಲ್ಟ್ ಆಯ್ಕೆ ಆಗಿಲ್ಲ. ಹೀಗಾಗಿ ಅವರು ಆರ್ಸಿಬಿಯ ಪಂದ್ಯಗಳಿಗೆ ಲಭ್ಯ ಇರಲಿದ್ದಾರೆ. ಜೊಕೊಬ್ ಬೆಥೆಲ್, ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಫಿಲ್ ಸಾಲ್ಟ್ ಆರ್ಸಿಬಿ ಗೆಲುವಿನ ಹಿಂದಿನ ರೂವಾರಿಗಳು. ಇದೀಗ ಫಿಲ್ ಸಾಲ್ಟ್ ಆರ್ಸಿಬಿ ಪಂದ್ಯಗಳಿಗೆ ಲಭ್ಯ ಇರಲಿದ್ದಾರೆ ಎಂಬ ಸುದ್ದಿ ತಂಡದ ಮ್ಯಾನೇಜ್ಮೆಂಟ್ಗೆ ಖುಷಿ ತಂದಿದೆ. ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.
Phil Salt is not selected for the ODI series Vs West Indies.
- He's set to be available for RCB in Playoffs. pic.twitter.com/5dkFdduFvf— Mufaddal Vohra (@mufaddal_vohra) May 13, 2025
ಆರ್ಸಿಬಿ ಮುಂದಿನ ಪಂದ್ಯಗಳು
- ಮೇ 17 ರಂದು ಕೆಕೆಆರ್ ವಿರುದ್ಧ ಪಂದ್ಯ
- ಮೇ 23 ರಂದು ಹೈದರಾಬಾದ್ ವಿರುದ್ಧ ಪಂದ್ಯ
- ಮೇ 27 ರಂದು ಎಲ್ಎಸ್ಜಿ ವಿರುದ್ಧ ಸೆಣಸಾಟ
- ಈ ಮೂರು ಪಂದ್ಯಗಳಲ್ಲಿ ಒಂದು ಗೆದ್ದರೆ, ಪ್ಲೇ-ಆಫ್ ಪ್ರವೇಶ ಅಧಿಕೃತವಾಗಿ ಖಚಿತವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್