RCBಗೆ ಸ್ಫೋಟಕ ಬ್ಯಾಟರ್ಸ್​, ಆಲ್​ರೌಂಡರ್ಸ್​ ಕಮ್​ಬ್ಯಾಕ್.. ಮತ್ತೆ ಬೆಂಗಳೂರು ತಂಡ ಬಲಿಷ್ಠ​

author-image
Bheemappa
Updated On
RCBಗೆ ಸ್ಫೋಟಕ ಬ್ಯಾಟರ್ಸ್​, ಆಲ್​ರೌಂಡರ್ಸ್​ ಕಮ್​ಬ್ಯಾಕ್.. ಮತ್ತೆ ಬೆಂಗಳೂರು ತಂಡ ಬಲಿಷ್ಠ​
Advertisment
  • ಐಪಿಎಲ್​ನಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ಟೀಮ್​​ ಆರ್​ಸಿಬಿ
  • ವಿದೇಶಕ್ಕೆ ಹೋಗಿದ್ದ ಯಾವ್ಯಾವ ಆಟಗಾರರು ಹಿಂದಿರುಗಿದ್ದಾರೆ?
  • ಆರ್​ಸಿಬಿ ಸ್ಫೋಟಕ ಬ್ಯಾಟರ್ಸ್​, ಆಲ್​ರೌಂಡರ್ಸ್​ ಕಮ್​ಬ್ಯಾಕ್

ಈ ಬಾರಿ ಆರ್​ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಆರಂಭದಿಂದಲೂ ಈವರೆಗೂ ಅತ್ಯುತ್ತಮ ಪ್ರದರ್ಶನ ನೀಡುತ್ತ ಬರುತ್ತಿದ್ದರಿಂದ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿದೆ. ಆರ್​ಸಿಬಿ ತಂಡಕ್ಕೆ ವಿದೇಶಿ ಆಟಗಾರರು ಬರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಫ್ರಾಂಚೈಸಿಯೇ ಯಾರು ಯಾರು ಬಂದಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಓಪನರ್​ ಸ್ಫೋಟಕ ಬ್ಯಾಟರ್​ಗಳಾದ ಫಿಲಿಪ್ ಸಾಲ್ಟ್​, ಜಾಕೋಬ್ ಬೆಥೆಲ್​ ಆಗಮಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಓಪನಿಂಗ್ ಆರಂಭಿಸುವ ಫಿಲಿಪ್ ಸಾಲ್ಟ್​ ಎದುರಾಳಿ ಎದೆಯಲ್ಲಿ ಭಯ ಹುಟ್ಟಿಸುತ್ತಾರೆ. ಇಂಗ್ಲೆಂಡ್​ನ ಯುವ ಬ್ಯಾಟರ್​ ಜಾಕೋಬ್ ಬೆಥೆಲ್ ಆರ್​ಸಿಬಿಯಲ್ಲಿ ಆಡಿದ್ದು ಎರಡೇ 2 ಪಂದ್ಯ. ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಅಬ್ಬರಿಸಿದ ಬೆಥೆಲ್ ಅಬ್ಬರದ ಅರ್ಧಶತಕ ಬಾರಿಸಿದ್ದರು.

ಇದನ್ನೂ ಓದಿ:ಕನ್ನಡಿಗ ಪಡಿಕ್ಕಲ್ RCB ತಂಡದಲ್ಲಿ ಆಡ್ತಾರಾ.. ಮಯಾಂಕ್​​​ ಅಗರ್ವಾಲ್​ಗೆ ಎಷ್ಟು ಕೋಟಿ ಹಣ ಕೊಡಲಾಗಿದೆ?

publive-image

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ರೊಮಾರಿಯೋ ಶೆಫರ್ಡ್​ ಕೇವಲ 14 ಎಸೆತಗಳಲ್ಲಿ 50 ರನ್​ ಚಚ್ಚಿದ್ದರು. ಇನ್ನು ಪಂಜಾಬ್ ಕಿಂಗ್ಸ್​ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟಿಮ್ ಡೇವಿಡ್​ ಕೂಡ ಆರ್​ಸಿಬಿ ತಂಡಕ್ಕೆ ಹಿಂತಿರುಗಿದ್ದಾರೆ. ಬೆಂಗಳೂರು ತಂಡವನ್ನು ಲುಂಗಿ ಎನ್​ಗಿಡಿ ಸೇರಿಕೊಂಡಿದ್ದಾರೆ. ಇದರಿಂದ ಆರ್​ಸಿಬಿಗೆ ದೊಡ್ಡ ಶಕ್ತಿ ಬಂದಂತೆ ಆಗಿದೆ.

ಇಷ್ಟೇ ಅಲ್ಲ, ಅನುಭವಿ ಆಲ್​​ರೌಂಡರ್​ ಲಿಯಾಮ್ ಲಿವಿಂಗ್​​ಸ್ಟೋನ್ ಕೂಡ ಆರ್​ಸಿಬಿ ತಂಡಕ್ಕೆ ಮರಳಿರುವುದು ಅಭಿಮಾನಿಗಳ ಖುಷಿ ಮತ್ತಷ್ಟು ಹೆಚ್ಚು ಮಾಡಿದೆ. ಇನ್ನೇನು ಮೇ 17 ರಂದು ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಆರ್​ಸಿಬಿ ಅಖಾಡಕ್ಕೆ ಧುಮಕಲಿದೆ. ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಇದೇ ತಂಡದ ಜೊತೆ ಜಯ ಸಾಧಿಸಿದ್ದ ಆರ್​ಸಿಬಿ ಈಗ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ.


">May 15, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment