ಫೈನಲ್​ ಪಂದ್ಯಕ್ಕೂ ಮೊದಲೇ RCBಗೆ ಬಿಗ್ ಶಾಕ್​​.. ಸ್ಫೋಟಕ ಓಪನರ್ ಫಿಲ್​ ಸಾಲ್ಟ್​ ಎಲ್ಲಿಗೆ ಹೋದರು? ​

author-image
Bheemappa
Updated On
ವಿಸ್ಫೋಟಕ ಬ್ಯಾಟರ್​​ನಿಂದ ಆರ್​ಸಿಬಿಗೆ ಬಿಗ್ ಶಾಕ್​​.. ಚಿನ್ನಸ್ವಾಮಿಯಲ್ಲಿ ಮತ್ತೆ ಕೈಕೊಟ್ಟ ಫಿಲ್ ಸಾಲ್ಟ್
Advertisment
  • ಫಿಲ್ ಸಾಲ್ಟ್ ಹೋಗಿದ್ದು ಎಲ್ಲಿಗೆ, ಕೊಹ್ಲಿ ಜೊತೆ ಆರಂಭಿಕ ಬ್ಯಾಟ್ಸ್​​ಮನ್?
  • ಪಂಜಾಬ್ ವಿರುದ್ಧ ಐಪಿಎಲ್ ಫೈನಲ್​ ಪಂದ್ಯ ಆಡುತ್ತಿರುವ ಆರ್​​ಸಿಬಿ
  • ಅಹಮದಾಬಾದ್​ ಸ್ಟೇಡಿಯಂನಲ್ಲಿ ಫಿಲ್ ಸಾಲ್ಟ್​ ಯಾರಿಗೂ ಕಾಣಿಸಿಲ್ವಾ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಫೈನಲ್​ ಪಂದ್ಯಕ್ಕಾಗಿ ಅಖಾಡಕ್ಕೆ ಧುಮುಕುತ್ತಿದೆ. 9 ವರ್ಷಗಳ ಬಳಿಕ ಮತ್ತೆ ಫೈನಲ್​ಗೆ ಬಂದಿರುವ ಆರ್​ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಮ್ ಎನಿಸಿದೆ. ಇದರ ನಡುವೆ ಆರ್​ಸಿಬಿಗೆ ಬಿಗ್ ಶಾಕ್ ಆಗೋ ಸುದ್ದಿಯೊಂದು ಹೊರ ಬಿದ್ದಿದ್ದು ಓಪನರ್​ ಫಿಲ್ ಸಾಲ್ಟ್ ಫೈನಲ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಆರ್​​ಸಿಬಿ ಸ್ಫೋಟಕ ಬ್ಯಾಟರ್ ಆಗಿರುವ ಫಿಲಿಪ್ ಸಾಲ್ಟ್ ಅವರು ಲೀಗ್ ಪಂದ್ಯದ ಸಮಯದಲ್ಲಿ ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ ಚೆನ್ನೈ ಹಾಗೂ ಡೆಲ್ಲಿ ವಿರುದ್ಧದ ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಮೇಲೆ ಚೇತರಿಸಿಕೊಂಡು ಹೈದ್ರಾಬಾದ್, ಲಕ್ನೋ ಹಾಗೂ ಪಂಜಾಬ್​ ವಿರುದ್ಧ ಬ್ಯಾಟ್ ಬೀಸಿದ್ದರು. ಮತ್ತೆ ವಿರಾಟ್ ಕೊಹ್ಲಿ ಜೊತೆ ಅದ್ಭುತ ಇನ್ನಿಂಗ್ಸ್​ ಆರಂಭಿಸಿದ್ದರು. ಇದರ ಮಧ್ಯೆ ಫೈನಲ್​ನಲ್ಲಿ ಫಿಲ್​ ಸಾಲ್ಟ್ ಬ್ಯಾಟಿಂಗ್ ಮಾಡುತ್ತಿಲ್ಲ ಎನ್ನುವ ಸುದ್ದಿ ಬಹಿರಂಗವಾಗಿದೆ.

ಅಹಮದಾಬಾದ್​ನ ಅಂತರಾಷ್ಟ್ರೀಯ ಮೈದಾನದಲ್ಲಿ ಆರ್​ಸಿಬಿ ಆಟಗಾರರು ಈಗಾಗಲೇ ಪ್ರಾಕ್ಟೀಸ್ ಮಾಡಿದ್ದಾರೆ. ಫೈನಲ್​ ಪಂದ್ಯ ಆರಂಭಕ್ಕೂ ಎರಡು ದಿನ ಆಟಗಾರರೆಲ್ಲಾ ಅಭ್ಯಾಸ ಮಾಡಿದ್ದಾರೆ. ಆರ್​ಸಿಬಿ ಆಟಗಾರರು ಅಭ್ಯಾಸ ಮಾಡುವಾಗ ಫಿಲ್ ಸಾಲ್ಟ್ ಅವರು ಕಾಣಿಸಿಲ್ಲ ಎಂದು ಹೇಳಲಾಗಿದೆ. ತಂಡದ ಜೊತೆಗೆ ಅವರು ಇಲ್ಲ, ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೋ ಅಧಿಕೃತ ಮಾಹಿತಿ ಇಲ್ಲ.

ಇದನ್ನೂ ಓದಿ:IPL ಟ್ರೋಫಿ ಜೊತೆ ಆರ್​ಸಿಬಿ ಕ್ಯಾಪ್ಟನ್​ ರಜತ್, ಶ್ರೇಯಸ್​ ಮಸ್ತ್​ ಲುಕಿಂಗ್​.. ಟಾಪ್-10 ಫೋಟೋಸ್​!

publive-image

ಫಿಲ್ ಸಾಲ್ಟ್ ಅವರ ಗೆಳತಿ ಅಬಿ ಮೆಕ್ಲಾವೆನ್ ಅವರು ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಂರಿಂದ ಸಾಲ್ಟ್​ ವಿದೇಶಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಫಿಲ್ ಸಾಲ್ಟ್ ಹಾಗೂ ಅಬಿ ಮೆಕ್ಲಾವೆನ್ ಅವರು 2020 ರಿಂದಲೂ ಕೂಡಿ ಬಾಳುತ್ತಿದ್ದಾರೆ. ಅಬಿ ಮೆಕ್ಲಾವೆನ್ ಅವರು ಸೋಶಿಯಲ್​ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಅಹಮದಾಬಾದ್​ನಲ್ಲಿ ಫಿಲ್ ಸಾಲ್ಟ್ ಅವರು ಇಲ್ಲ ಎನ್ನಲಾಗುತ್ತಿದೆ. ಮಾಧ್ಯಮಗೋಷ್ಠಿಯಲ್ಲಿ ಕೋಚ್ ಹ್ಯಾಂಡಿ ಫ್ಲವರ್ ಹಾಗೂ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು ಈ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ. ಇಂದು ಫೈನಲ್​ ಮ್ಯಾಚ್ ನಡೆಯುವ ಆರಂಭದ ವೇಳೆ ಆರ್​ಸಿಬಿ ಕ್ಯಾಪ್ಟನ್​ ರಜತ್ ಅವರು ಫಿಲ್ ಸಾಲ್ಟ್​ ಅವರ ಲಭ್ಯತೆ, ಅಲಭ್ಯತೆ ಬಗ್ಗೆ ತಿಳಿಸಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment