/newsfirstlive-kannada/media/post_attachments/wp-content/uploads/2025/05/Phil_Salt_RCB.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಹೈದ್ರಾಬಾದ್ ವಿರುದ್ಧ ಅಖಾಡಕ್ಕೆ ಧುಮುಕುತ್ತಿದೆ. ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಆರ್ಸಿಬಿ ಟಾಪ್-2 ನಿರೀಕ್ಷೆಯಲ್ಲಿದೆ. ಇದರ ನಡುವೆ ಆರ್ಸಿಬಿಗೆ ಬಿಗ್ ಶಾಕ್ ಆಗೋ ಸುದ್ದಿಯೊಂದು ಹೊರ ಬಿದ್ದಿದೆ. ಫಿಲ್ ಸಾಲ್ಟ್ ಅವರು ಪ್ಲೇ ಆಫ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಆರ್ಸಿಬಿ ಸ್ಫೋಟಕ ಬ್ಯಾಟರ್ ಆಗಿರುವ ಫಿಲಿಪ್ ಸಾಲ್ಟ್ ಅವರು ಈಗಾಗಲೇ ಜ್ವರದಿಂದಾಗಿ ಚೆನ್ನೈ ಹಾಗೂ ಡೆಲ್ಲಿ ವಿರುದ್ಧದ ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಈಗ ಚೇತರಿಸಿಕೊಂಡಿದ್ದಾರೆ. ಮತ್ತೆ ವಿರಾಟ್ ಕೊಹ್ಲಿ ಜೊತೆ ಅದ್ಭುತ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಗುಜರಾತ್, ಪಂಜಾಬ್ ಹಾಗೂ ಮುಂಬೈ ವಿರುದ್ಧದ ಪ್ಲೇ ಆಫ್ ಪಂದ್ಯಗಳನ್ನು ಸಾಲ್ಟ್ ಆಡುವುದು ಅನುಮಾನವಿದೆ.
ಇದನ್ನೂ ಓದಿ:RCBಯಲ್ಲಿ ಇಂದು ಯಾರು ಆಡ್ತಾರೆ, ಯಾರು ಆಡಲ್ಲ.. ಹೊಸ ಪ್ಲೇಯರ್ಸ್ ಎಂಟ್ರಿ ಕೊಡ್ತಾರಾ?
ಏಕೆಂದರೆ ಸಾಲ್ಟ್ ಅವರ ಗೆಳತಿ ಅಬಿ ಮೆಕ್ಲಾವೆನ್ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಂರಿಂದ ಸಾಲ್ಟ್ ವಿದೇಶಕ್ಕೆ ತೆರಳಲಿದ್ದಾರೆ. ಫಿಲ್ ಸಾಲ್ಟ್ ಹಾಗೂ ಅಬಿ ಮೆಕ್ಲಾವೆನ್ ಅವರು 2020 ರಿಂದಲೂ ಕೂಡಿ ಬಾಳುತ್ತಿದ್ದಾರೆ. ಅಬಿ ಮೆಕ್ಲಾವೆನ್ ಅವರು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ನಲ್ಲಿ ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಆರ್ಸಿಬಿಯ ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಫಿಲ್ ಸಾಲ್ಟ್, ಕೊಹ್ಲಿ ಜೊತೆ ಸೇರಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. 9 ಪಂದ್ಯಳನ್ನು ಆಡಿರುವ ಸಾಲ್ಟ್, 168.31 ಸ್ಟ್ರೈಕ್ ರೇಟ್ನೊಂದಿಗೆ 239 ರನ್ಗಳನ್ನು ಗಳಿಸಿದ್ದಾರೆ. ಸದ್ಯ ಆರ್ಸಿಬಿ ತಂಡದಲ್ಲಿದ್ದು ಇಂದಿನ ಹೈದ್ರಾಬಾದ್ ಜೊತೆಗಿನ ಮ್ಯಾಚ್ ಹಾಗೂ ಲಕ್ನೋ ವಿರುದ್ಧದ ಪಂದ್ಯಗಳನ್ನು ಆಡಲಿದ್ದಾರೆ. ಆದರೆ ಆ ನಂತರ ನಡೆಯುವ ಪ್ಲೇ ಆಫ್ ಪಂದ್ಯಗಳಿಂದ ಸಾಲ್ಟ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಆರ್ಸಿಬಿ ತಂಡದ ವೇಗದ ಬೌಲರ್ಗಳಾದ ಜೋಶ್ ಹ್ಯಾಜಲ್ವುಡ್, ಲುಂಗಿ ಎನ್ಗಿಡಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ವಿದೇಶದ ಯುವ ಬ್ಯಾಟರ್ ಜಾಕೋಬ್ ಬೆಥೆಲ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ನಾಯಕ ರಜತ್ ಗಾಯದಿಂದ ಬಳಲುತ್ತಿದ್ದು ಬ್ಯಾಟಿಂಗ್ ಪ್ರದರ್ಶನ ಅಷ್ಟಕ್ಕೆ ಅಷ್ಟೇ ಇದೆ. ಇದರ ನಡುವೆ ಸಾಲ್ಟ್ ಫಾರೀನ್ಗೆ ಹೋದರೆ ಆರ್ಸಿಬಿ ದೊಡ್ಡ ಹಿನ್ನಡೆ ಅನುಭವಿಸಲಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ