RCB ಸ್ಫೋಟಕ ಓಪನರ್ ಫಿಲ್ ಸಾಲ್ಟ್, ಸಿರಾಜ್​ ಮಧ್ಯೆ ಘರ್ಷಣೆ.. ಹಿಗ್ಗಾಮುಗ್ಗಾ ಬಾರಿಸಿದ್ದ ಓಪನರ್!

author-image
Bheemappa
Updated On
RCB ಸ್ಫೋಟಕ ಓಪನರ್ ಫಿಲ್ ಸಾಲ್ಟ್, ಸಿರಾಜ್​ ಮಧ್ಯೆ ಘರ್ಷಣೆ.. ಹಿಗ್ಗಾಮುಗ್ಗಾ ಬಾರಿಸಿದ್ದ ಓಪನರ್!
Advertisment
  • ಫಿಲಿಪ್ ಸಾಲ್ಟ್​, ಮೊಹಮ್ಮದ್ ಸಿರಾಜ್ ನಡುವೆ ನಡೆದಿದ್ದು ಏನು?
  • ಅದೊಂದು ಗಲಾಟೆ ಎದುರಾಳಿ ತಂಡದ ಗೆಲುವಿಗೆ ಕಾರಣವಾಗಿತ್ತಾ?
  • ಅಂದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಸಾಲ್ಟ್​ ಮಧ್ಯೆ ಜಗಳ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫಿಲಿಪ್ ಸಾಲ್ಟ್​ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ನಡೆದ ಅದೊಂದು ಘರ್ಷಣೆಯ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಫಿಲಿಪ್ ಸಾಲ್ಟ್​ ಹಾಗೂ ಸಿರಾಜ್ ನಡುವೆ ಮಾತಿನ ಚಕಮಕಿ ನಡೆಯುತ್ತೆ. ಬ್ಯಾಟಿಂಗ್ ಮಾಡುತ್ತಿದ್ದ ಸಾಲ್ಟ್​, ಸಿರಾಜ್ ಬೌಲಿಂಗ್​ನಲ್ಲಿ ಆರ್ಭಟಿಸುತ್ತಾರೆ. ಹೀಗಾಗಿ ಅಂದಿನ ದಿನದಂತೆ ಇಂದು ಕೂಡ ಮರುಕಳಿಸುತ್ತ ಎಂದು ಅಭಿಮಾನಿಗಳು ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

2023ರ ಮೇ 6 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಪಂದ್ಯ ನಡೆಯುತ್ತಿರುತ್ತದೆ. ಪಂದ್ಯದಲ್ಲಿ ಆರ್​ಸಿಬಿ ಪರವಾಗಿ ಸಿರಾಜ್​ ಬೌಲಿಂಗ್ ಮಾಡ್ತಿದ್ರೆ, ಫಿಲ್ ಸಾಲ್ಟ್​ ಡೆಲ್ಲಿ ಪರವಾಗಿ ಬ್ಯಾಟಿಂಗ್ ಮಾಡುತ್ತಿರುತ್ತಾರೆ. ಈ ವೇಳೆ 5ನೇ ಓವರ್​ ಬೌಲಿಂಗ್ ಮಾಡುತ್ತಿದ್ದ ಸಿರಾಜ್ ಬೌನ್ಸ್ ಬೌಲಿಂಗ್ ಹಾಕಿ ಸಾಲ್ಟ್​ ಕಡೆ ಕೈ ತೋರಿಸುತ್ತಾರೆ. ಇದಕ್ಕೆ ಫಿಲ್ ಸಾಲ್ಟ್ ಕೂಡ ರಿಯಾಕ್ಟ್ ಮಾಡ್ತಾರೆ. ಇದರಿಂದ ಇಬ್ಬರ ನಡುವೆ ಘರ್ಷಣೆ ನಡೆಯುತ್ತದೆ. ಇನ್ನೊಂದು ಬದಿ ಬ್ಯಾಟ್ ಮಾಡ್ತಿದ್ದ ಡೇವಿಡ್ ವಾರ್ನರ್, ಅಂಪೈರ್ ಬಂದು ಇದನ್ನೆಲ್ಲಾ ಸ್ವಲ್ಪ ತಣ್ಣಗೆ ಮಾಡುತ್ತಾರೆ.

ಇದನ್ನೂ ಓದಿ: ಸ್ಪಿನ್ನರ್ ಸ್ನೇಹಿ ಚಿನ್ನಸ್ವಾಮಿ.. RCBಗೆ ಗುಜರಾತ್​ನ ಇಬ್ಬರು ಸ್ಪಿನ್ನರ್ಸ್‌‌ ಎದುರಿಸೋದೇ ದೊಡ್ಡ ಚಾಲೆಂಜ್!

publive-image

ಆದರೆ ಈ ಕೋಪವನ್ನು ಫಿಲ್ ಸಾಲ್ಟ್​ ತನ್ನ ಬ್ಯಾಟಿಂಗ್ ಮೂಲಕ ತೋರಿಸ್ತಾರೆ. 3 ಬಾಲ್ ಮಾಡಿದ್ದ ಸಿರಾಜ್ ಉಳಿದ 3 ಬಾಲ್ ಮಾಡುತ್ತಾರೆ. ಆದ್ರೆ ಫಿಲ್ ಸಾಲ್ಟ್​ 2 ಸಿಕ್ಸ್​, ಒಂದು ಫೋರ್ ಬಾರಿಸುತ್ತಾರೆ. ಈ ಓವರ್​ನಲ್ಲಿ ಸಾಲ್ಟ್​ 19 ರನ್​ಗಳನ್ನು ಬಾರಿಸುತ್ತಾರೆ. ಇದು ಅಲ್ಲದೇ ಮುಂದಿನ ಓವರ್ ಮಾಡಲು ಬಂದ ಸಿರಾಜ್​ ಬೌಲಿಂಗ್​ನಲ್ಲಿ ಸಾಲ್ಟ್​ ಇನ್ನಷ್ಟು ಅಗ್ರಸ್ಸೀವ್​ ಆಗಿ ಬ್ಯಾಟ್ ಬೀಸುತ್ತಾರೆ.

ಹೀಗಾಗಿ ಅಂದಿನ ಪಂದ್ಯದಲ್ಲಿ ಸಾಲ್ಟ್​ ಅವರ ಭರ್ಜರಿ ಬ್ಯಾಟಿಂಗ್​ನಿಂದ ಕೇವಲ 45 ಎಸೆತಗಳಲ್ಲಿ 87 ರನ್ ಗಳಿಸಿ ಡೆಲ್ಲಿಯನ್ನು ಗೆಲ್ಲಿಸುತ್ತಾರೆ. ಸದ್ಯ ಇಂದು ನಡೆಯುವ ಪಂದ್ಯದಲ್ಲಿ ಸಿರಾಜ್ ಗುಜರಾತ್ ಪರ ಬೌಲಿಂಗ್​ಗೆ ಇಳಿಯುತ್ತಿದ್ರೆ, ಸಾಲ್ಟ್ ಆರ್​ಸಿಬಿ ಪರ ಆರ್ಭಟಿಸಲು ರೆಡಿಯಾಗಿದ್ದಾರೆ. ಇದರಿಂದ ಅಂದು ಡೆಲ್ಲಿ ಮೈದಾನದಲ್ಲಿ ನಡೆದಂತದ್ದು ಇಂದು ಚಿನ್ನಸ್ವಾಮಿಯಲ್ಲಿ ನಡೆಯುತ್ತ ಎಂದು ಫ್ಯಾನ್ಸ್​ ವಿಡಿಯೋ ವೈರಲ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment