/newsfirstlive-kannada/media/post_attachments/wp-content/uploads/2025/03/Phil-Salt-out.jpg)
ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್​ 18ನೇ ಸೀಸನ್​ನಲ್ಲಿ ಆರ್​​​ಸಿಬಿ ಟೀಮ್​ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೀಸನ್​​ನ ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದ ಆರ್​​​ಸಿಬಿ ಇಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲ್ಲಲೇಬೇಕು ಎಂದು ಮುಂದಾಗಿದೆ.
ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ರುತುರಾಜ್ ಗಾಯಕ್ವಾಡ್ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.
ಎದುರಾಳಿಗಳ ಬೆಂಡೆತ್ತಿದ ಸಾಲ್ಟ್​​
ಆರ್​​ಸಿಬಿ ಪರ ಓಪನಿಂಗ್​ ಮಾಡಿದ ಸ್ಟಾರ್ ಬ್ಯಾಟರ್​ ಫಿಲಿಪ್​ ಸಾಲ್ಟ್​​ ಅವರು ಅಬ್ಬರಿಸಿದರು. ಕ್ರೀಸ್​ನಲ್ಲಿ ಇರೋವರೆಗೂ ಎದುರಾಳಿಗಳನ್ನು ಕಾಡಿದರು. ತಾನು ಎದುರಿಸಿದ 16 ಬಾಲ್​ನಲ್ಲಿ 5 ಭರ್ಜರಿ ಫೋರ್​​, 1 ಸಿಕ್ಸರ್​ ಸಮೇತ 32 ರನ್​ ಚಚ್ಚಿದ್ರು.
ಸಾಲ್ಟ್​ಗೆ ಖೆಡ್ಡಾ ತೋಡಿದ ಧೋನಿ
ಇನ್ನು, ಚೆನ್ನೈ ವಿರುದ್ಧ ಆರ್ಭಟಿಸುತ್ತಿದ್ದ ಸಾಲ್ಟ್​ಗೆ ಎಂ.ಎಸ್​ ಧೋನಿ ಖೆಡ್ಡಾ ತೋಡಿದರು. ನೂರ್​ ಅಹ್ಮದ್​ ಬೌಲಿಂಗ್​ನಲ್ಲಿ ಎಂ.ಎಸ್​ ಧೋನಿ ಸ್ಟಂಪ್​ ಮಾಡಿದರು. ಧೋನಿ ಸ್ಟ್ರಾಟಜಿಗೆ ಸಾಲ್ಟ್​ ಬಲಿಯಾದರು. ಬೌಂಡರಿ ಬಾರಿಸಲು ಮುಂದೆ ಹೋದಾಗ ಬಾಲ್​ ಧೋನಿ ಕೈ ಸೇರಿತು. ಆಗ ಕ್ಷಣಾರ್ಧದಲ್ಲೇ ಧೋನಿ ಸ್ಟಂಪ್​ ಮಾಡಿ ಔಟ್​ ಮಾಡಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us