/newsfirstlive-kannada/media/post_attachments/wp-content/uploads/2025/03/Phil-Salt.jpg)
ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್, ಆರ್ಸಿಬಿ ಮುಖಾಮುಖಿ ಆಗಿವೆ.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್ನಲ್ಲಿ 174 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಆರ್ಸಿಬಿ ಟೀಮ್ಗೆ ಕೆಕೆಆರ್ 175 ರನ್ಗಳ ಟಾರ್ಗೆಟ್ ಕೊಟ್ಟಿದೆ.
ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಓಪನಿಂಗ್ ಮಾಡಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಅದರಲ್ಲೂ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಫಿಲ್ ಸಾಲ್ಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ಸ್ಫೋಟಕ ಅರ್ಧಶತಕ
ಆರ್ಸಿಬಿ ಪರ ಫಿಲ್ ಸಾಲ್ಟ್ ಅಬ್ಬರಿಸಿದರು. ಕೆಕೆಆರ್ ಬೌಲರ್ಗಳನ್ನು ಕಾಡಿದ ಇವರು ಕೇವಲ 25 ಬಾಲ್ನಲ್ಲಿ 50 ರನ್ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 8 ಫೋರ್, 2 ಭರ್ಜರಿ ಸಿಕ್ಸರ್ಗಳು ಇದ್ದವು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 200ಕ್ಕೂ ಹೆಚ್ಚಿತ್ತು.
ಇದನ್ನೂ ಓದಿ:6,6,6,6,4,4,4,4,4,4; ಆರ್ಸಿಬಿ ವಿರುದ್ಧ ಕೊಹ್ಲಿ ಆಪ್ತನಿಂದ ಭರ್ಜರಿ ಬ್ಯಾಟಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ