/newsfirstlive-kannada/media/post_attachments/wp-content/uploads/2024/12/Germany-Food-Bag.jpg)
ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಪ್ರತಿ ಜೀವರಾಶಿಗೂ ಹಸಿವು ಇದ್ದೇ ಇರುತ್ತೆ. ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ, ಜಗಕ್ಕೆಲ್ಲ ಅನ್ನವೇ ಪ್ರಾಣ ಅಂದಿದ್ದಾರೆ ಸರ್ವಜ್ಞ. ಚಿನ್ನವನ್ನು ತಿನ್ನಲಾಗದು, ಹಸಿದಾಗ ಅನ್ನವನ್ನೇ ತಿನ್ನಬೇಕು ಅಲ್ಲವೇ. ಅನ್ನಕ್ಕಿರುವ ಬೆಲೆಯೇ ಹೇಳುತ್ತದೆ ಈ ವಾಕ್ಯ.
ಜಾಗತಿಕವಾಗಿ ಹಲವು ದೇಶಗಳಲ್ಲಿ ಹಸಿವಿನ ಸೂಚ್ಯಂಕವು ಕುಸಿಯುತ್ತಿದೆ. ಇದಕ್ಕೆ ಭಾರತದ ಪರಿಸ್ಥಿತಿಯೂ ಹೊರತಲ್ಲ. ಸರ್ಕಾರಗಳು ಬಡವರಿಗೆ, ಹಸಿದವರಿಗಾಗಿ ಹಲವು ಯೋಜನೆಗಳು ಜಾರಿಗೆ ತಂದಿವೆ. ಕರ್ನಾಟಕದಲ್ಲಿ ಬಡವರ ಹಸಿವು ನೀಗಿಸುವ ಕಾರ್ಯಕ್ರಮ ಅನ್ನಭಾಗ್ಯ ಇಡೀ ದೇಶದಲ್ಲಿಯೇ ಶ್ಲಾಘನೆಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸೌದಿ ಅರೇಬಿಯಾಗೆ ಜಾಕ್​ಪಾಟ್​; ಈ ದೇಶಕ್ಕೆ ಬಿಳಿ ಬಂಗಾರದ ನಿಕ್ಷೇಪ ದಕ್ಕಿದ್ದು ಹೇಗೆ ?
ಈ ದೃಶ್ಯ ಜರ್ಮನಿಯದ್ದು. ಇಲ್ಲಿ ನೀವು ನೋಡುತ್ತಿರುವ ಬ್ಯಾಗ್​ಗಳಲ್ಲಿರುವುದು ಊಟದ ಪೊಟ್ಟಣ. ಇದು ಹಸಿದವರು, ನಿರ್ಗತಿಕರು, ಬಡವರಿಗೆ ಸಹಾಯ ಆಗಲೆಂದು ನೇತು ಹಾಕಲಾಗಿದೆ. ಇಲ್ಲಿ ಯಾವುದೇ ಕ್ಯಾಮೆರಾ ಇಲ್ಲ, ವಿಡಿಯೋ ಮಾಡುವುದು ಇಲ್ಲ. ನೆರವು ನೀಡುವ ನಾಟಕವೂ ಇಲ್ಲ. ಹಸಿದವರಿಗೆ ನೆರವಾಗಲೆಂದು ಹೀಗೆ ಊಟವನ್ನು ಕಟ್ಟಿ ನೇತು ಹಾಕಲಾಗಿದೆ. ಹಸಿದವರು, ಬಡವರು ಬಂದು ಯಾರು ಬೇಕಾದರೂ ಇದನ್ನು ತೆಗೆದುಕೊಳ್ಳಬಹುದು. ಇಲ್ಲಿ ಯಾವುದೇ ಸಾರ್ವಜನಿಕ ಪ್ರದರ್ಶನವಿಲ್ಲ. ಬಡವರು, ನಿರ್ಗತಿಕರಿಗೆ ತಲುಪುವುದಷ್ಟೇ ಮುಖ್ಯ ಅಂತಾರೆ ಜರ್ಮನಿಯರು.
In Germany, bags of food are hung for the poor, needy and hungry. No public display, no video and no cameras.
Just pure acts of love & kindness provide sustenance for those in need. No fanfare, just humanity. pic.twitter.com/vyEFdJ7d24
— Puneet Singh Bedi (@PuneetSingh84)
In Germany, bags of food are hung for the poor, needy and hungry. No public display, no video and no cameras.
Just pure acts of love & kindness provide sustenance for those in need. No fanfare, just humanity. pic.twitter.com/vyEFdJ7d24— Puneet Singh Bedi (@PuneetSingh84) November 1, 2024
">November 1, 2024
ದಾನ, ಸೇವೆ ಅಂದರೆ ಹೀಗಿರಬೇಕು. ಬಲಗೈಯಿಂದ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರದಂತೆ. ಜರ್ಮನಿಯ ಜನ ಹಲವೆಡೆ ತಮ್ಮ ಸ್ವಂತ ವಿವೇಚನೆಯಿಂದ ಹೀಗೆ ಆಹಾರವನ್ನು ನೇತು ಹಾಕುತ್ತಾರೆ. ಆ ಮೂಲಕ ಬಡ, ನಿರ್ಗತಿಕ, ದುರ್ಬಲರಿಗೆ ನೆರವಾಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ