/newsfirstlive-kannada/media/post_attachments/wp-content/uploads/2024/08/DINESH-KARTHIK.jpg)
- ನಿನ್ನೆಯಿಂದ ಐಪಿಎಲ್ ಮೆಗಾ ಹರಾಜು ಶುರುವಾಗಿದೆ
- ಆಸೀಸ್ ಸ್ಟಾರ್ ವೇಗಿಯನ್ನು ಖರೀದಿಸಿದ ಆರ್ಸಿಬಿ
- ಇವತ್ತೂ ಕೂಡ ಆರ್ಸಿಬಿ ತಂಡದ ಶಕ್ತಿ ಹೆಚ್ಚಿಸಿಕೊಳ್ಳಲಿದೆ
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು 11 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್​ಗೆ 12.50 ಕೋಟಿ ನೀಡಿ ಖರೀದಿಸಿದೆ. ಈ ಮೂಲಕ ಆರ್​ಸಿಬಿ ವೇಗದ ಬೌಲರ್​​ನ ಕೊರತೆಯನ್ನು ನೀಗಿಸಿಕೊಂಡಿದೆ.
ವಿಶೇಷ ಅಂದರೆ ಆರ್​ಸಿಬಿ ಇಬ್ಬರು ಟಾಪ್ ವಿಕೆಟ್ ಕೀಪರ್​ಗಳನ್ನು ಖರೀದಿ ಮಾಡಿದೆ. ಜಿತೇಶ್ ಶರ್ಮಾ ಹೊರತುಪಡಿಸಿ, ಫಿಲ್ ಸಾಲ್ಟ್ ಅವರನ್ನು 11.50 ಕೋಟಿ ನೀಡಿ ಖರೀದಿಸಿದೆ. ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಆರ್​ಸಿಬಿ ಯಾರನ್ನು ಕರೆದುಕೊಂಡು ಬರಲಿದೆ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸಾಲ್ಟ್​ ಇಂಗ್ಲೆಂಡ್ ಕ್ರಿಕೆಟರ್ ಆಗಿದ್ದು, ವಿರಾಟ್ ಕೊಹ್ಲಿಗೆ ಉತ್ತಮ ಜೊತೆಗಾರ ಆಗೋದ್ರಲ್ಲಿ ಡೌಟ್ ಇಲ್ಲ.
ಇನ್ನು ಜಿತೇಶ್ ಶರ್ಮಾ ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಅಲ್ಲಿ ಅವರ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ಈ ಬಾರಿಯ ಆಕ್ಷನ್​ನಲ್ಲಿ 1 ಕೋಟಿ ರೂಪಾಯಿ ಬೇಸ್​ಪ್ರೈಸ್ ಹೊಂದಿದ್ದರು. ಜಿತೇಶ್ ಶರ್ಮಾ ತಮ್ಮ 40 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ 730 ರನ್ ಗಳಿಸಿದ್ದಾರೆ.
ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹೇಜಲ್​ವುಡ್​ಗೆ ಬಿಡ್ ಮಾಡಿದ್ದವು. ಕೊನೆಯಲ್ಲಿ ಆರ್​ಸಿಬಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಿಂದೆ ಹೇಜಲ್​​ವುಡ್ ಆರ್​​ಸಿಬಿ ಪರ ಆಡಿದ್ದರು. 12 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್