/newsfirstlive-kannada/media/post_attachments/wp-content/uploads/2025/04/Philip_Salt_out.jpg)
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 42ನೇ ಪಂದ್ಯದಲ್ಲಿ ಆರ್ಸಿಬಿ ವಿಸ್ಫೋಟ ಬ್ಯಾಟರ್ ಫಿಲಿಪ್ ಸಾಲ್ಟ್ ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ಮುಗ್ಗರಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಎಂದಿನಂತೆ ಬೆಂಗಳೂರು ತಂಡದಿಂದ ಓಪನರ್ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಮೈದಾನಕ್ಕೆ ಆಗಮಿಸಿದ್ದರು. ಆರ್ಸಿಬಿ ಕ್ಯಾಪ್ಟನ್ ರಜತ್ ಟಾಸ್ ಸೋತರೂ ಓಪನರ್ಸ್ ಉತ್ತಮವಾದ ಬ್ಯಾಟಿಂಗ್ ಮಾಡುವ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ:ಪ್ಲೇ ಆಫ್ಗಾಗಿ 6 ಟೀಮ್ಗಳ ನಡುವೆ ಬಿಗ್ ಫೈಟ್.. RCBಯ ಮುಂದಿನ ದಾರಿ ಕಷ್ಟ.. ಕಷ್ಟ!
ಆದ್ರೆ ಫಿಲಿಪ್ ಸಾಲ್ಟ್ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ. ತವರಿನ ಪಿಚ್ನಲ್ಲೇ ಗೆಲ್ಲಲೇಬೇಕಾದ ಅನಿವಾರ್ಯದ ಪಂದ್ಯದಲ್ಲೇ ಔಟ್ ಆಗಿದ್ದಾರೆ. ಪಂದ್ಯದ ಆರಂಭದಲ್ಲೇ ಆರ್ಆರ್ ಕ್ಯಾಪ್ಟನ್ ರಿಯಾನ್ ಪರಾಗ್ ಕ್ಯಾಚ್ ಮಿಸ್ ಮಾಡಿ ಜೀವದಾನ ನೀಡಿದ್ದರು. ಆದರೆ ಇದನ್ನು ಸದುಪಯೋಗ ಮಾಡಿಕೊಳ್ಳದೇ ಕೇವಲ 26 ರನ್ಗೆ ಔಟ್ ಆಗಿದ್ದಾರೆ.
ಫಿಲಿಪ್ ಸಾಲ್ಟ್ ಪಂದ್ಯದ ಆರಂಭದಲ್ಲೇ ಒಂದು ಜೀವದಾನ ಪಡೆದು ಬ್ಯಾಟಿಂಗ್ ಮುಂದುವರೆಸಿದ್ದರು. 26 ರನ್ ಗಳಿಸಿ ಬ್ಯಾಟಿಂಗ್ ಮಾಡುವಾಗ ವನಿಂದು ಹಸರಂಗ್ ಅವರ ಸ್ಪಿನ್ ಬೌಲಿಂಗ್ನಲ್ಲಿ ಹೆಟ್ಮರ್ಗೆ ಕ್ಯಾಚ್ ಕೊಟ್ಟು ಸಾಲ್ಟ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಇದರಿಂದ ಅಭಿಮಾನಿಗಳು ಕೂಡ ನಿರಾಶೆಗೆ ಒಳಗಾದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ