/newsfirstlive-kannada/media/post_attachments/wp-content/uploads/2025/04/SALT_CATCH.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಮೊದಲ ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ತಂಡ 174 ರನ್ಗಳ ಗುರಿಯನ್ನು ಆರ್ಸಿಬಿಗೆ ನೀಡಿದೆ. ಆದರೆ ಪಂದ್ಯ ನಡೆಯುವಾಗ ಬೌಂಡರಿ ಲೈನ್ನಲ್ಲಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಫಿಲಿಪ್ ಸಾಲ್ಟ್ ಅವರು ಅತ್ಯದ್ಭುತವಾದ ಕ್ಯಾಚ್ ಮಿಸ್ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ಮಾಡುವಾಗ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಫಿಲಿಪ್ ಸಾಲ್ಟ್ ಅವರು ಕ್ಯಾಚ್ ಮಿಸ್ ಮಾಡಿದ್ದಾರೆ. ಈ ಕ್ಯಾಚ್ ಅನ್ನು ಮಿಸ್ ಮಾಡಿದ್ದಾರೆ ಎನ್ನುವುದಕ್ಕಿಂತ ವೆಲ್ ಟ್ರೈ ಎನ್ನಬಹುದು. ಏಕೆಂದರೆ ಅಸಾಧ್ಯವಾದ ಕ್ಯಾಚ್ ಅನ್ನು ಹಿಡಿಯಲು ಮೇಲೆ ಹಾರಿದಾಗ ಬಾಲ್ ಕೈತಪ್ಪಿದೆ. ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇದನ್ನೂ ಓದಿ:4, 4, 4, 4, 4, 4, 4; RCBಗೆ ಟಕ್ಕರ್ ಕೊಟ್ಟ ಯಂಗ್ ಬ್ಯಾಟ್ಸ್ಮನ್.. ಜೈಸ್ವಾಲ್ ಭರ್ಜರಿ ಬ್ಯಾಟಿಂಗ್
ರಾಯಲ್ಸ್ ತಂಡದ ರನ್ಗಳು 103 ಆಗಿದ್ದಾಗ ಕ್ರೀಸ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಅರ್ಧಶತಕದ ಬಾರಿಸಿ ಬ್ಯಾಟಿಂಗ್ ಮುಂದುವರೆಸಿದ್ದರು. ಇನ್ನೊಂದೆಡೆ ರಿಯಾನ್ ಪರಾಗ್ ಕೂಡ ಇದ್ದರು. ಕೃನಾಲ್ ಪಾಂಡ್ಯ 13ನೇ ಓವರ್ನ 5ನೇ ಬಾಲ್ ಹಾಕಿದಾಗ ಸ್ಟ್ರೈಕ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಸಿಕ್ಸರ್ ಬಾರಿಸಲು ಜೋರಾಗಿ ಲೆಗ್ಸೈಡ್ ಹೊಡೆದರು. ಬಾಲ್ ಸಿಕ್ಸರ್ ಹೋಗುತ್ತಿತ್ತು.
ಆದರೆ ಈ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಾಲ್ಟ್ ಓಡಿ ಬಂದು ಮೇಲಕ್ಕೆ ಜಂಪ್ ಮಾಡಿ ಕ್ಯಾಚ್ ಹಿಡಿಯಲು ಪ್ರಯತ್ನ ಮಾಡಿದರು. ಆದ್ರೆ ಬಾಲ್ ಕೈಗೆ ತಾಗಿ ಮೈದಾನದ ಒಳಗೆ ಬಿದ್ದಿದೆ. ಇಲ್ಲಿ ದೊಡ್ಡ ಕ್ಯಾಚ್ ಮಿಸ್ ಆಗಿರುವುದು ಒಂದಾದರೆ, ಇನ್ನೊಂದು ಸಿಕ್ಸ್ ಹೋಗುವ ಬಾಲ್ನ್ನು ಸಾಲ್ಟ್ ತಡೆದು 6 ರನ್ಗಳನ್ನ ಸೇವ್ ಮಾಡಿದ್ದಾರೆ. ಒಂದು ವೇಳೆ ಜೈಸ್ವಾಲ್ ಬಾರಿಸಿದ ಈ ಬಾಲ್ನ್ನು ಸಾಲ್ಟ್ ಕ್ಯಾಚ್ ಹಿಡಿದಿದ್ರೆ ರಾಜಸ್ಥಾನದ ಇನ್ನಷ್ಟು ರನ್ಗಳಿಗೆ ಕಡಿವಾಣ ಹಾಕಬಹುದಿತ್ತು.
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜೊತೆ ನಡೆದಿದ್ದ ಪಂದ್ಯದಲ್ಲಿ ಇಂತಹದ್ದೇ ಅದ್ಭುತವಾದ ಕ್ಯಾಚ್ ಅನ್ನು ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ಇಬ್ಬರೂ ಸೇರಿ ಹಿಡಿದಿದ್ದರು. ಇದೊಂದು ಕ್ಯಾಚ್ ಆರ್ಸಿಬಿಯ ಗೆಲುವಿಗೆ ದೊಡ್ಡ ಕಾರಣವಾಗಿತ್ತು ಎಂದು ಹೇಳಬಹುದು. ಇಂತಹದ್ದೇ ಕ್ಯಾಚ್ ಇದೀಗ ರಾಜಸ್ಥಾನದ ಜೊತೆ ಮಿಸ್ ಆಗಿದೆ.
Every run counts and Salt knows that very well. ⚡️
🔝 effort at the boundary line.
— Royal Challengers Bengaluru (@RCBTweets)
Every run counts and Salt knows that very well. ⚡️
🔝 effort at the boundary line.
pic.twitter.com/yCK9W1Uh6M— Royal Challengers Bengaluru (@RCBTweets) April 13, 2025
">April 13, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ