newsfirstkannada.com

ತೆಲಂಗಾಣದಲ್ಲಿ ಬೆಚ್ಚಿ ಬೀಳಿಸಿದ ಫೋನ್ ಕದ್ದಾಲಿಕೆ; ಅಸಲಿಗೆ ಆಗಿದ್ದೇನು? ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Share :

Published March 26, 2024 at 1:52pm

Update March 26, 2024 at 1:53pm

  ರೇವಂತ್ ರೆಡ್ಡಿ ಮನೆಯಲ್ಲಿ ಮಾತನಾಡುವುದನ್ನೆಲ್ಲಾ ಕದ್ದು ಕೇಳಿಸಿಕೊಂಡ ಕೇಸ್‌!

  ಉದ್ಯಮಿಗಳನ್ನು ಬ್ಲಾಕ್ ಮೇಲ್ ಮಾಡಿ BRS ಪಕ್ಷಕ್ಕೆ ದೇಣಿಗೆ ಪಡೆದ ಆರೋಪ

  ಫೋನ್ ಕದ್ದಾಲಿಕೆಯ ಜೊತೆಗೆ ಬೆದರಿಸಿ ಆಸ್ತಿ ಬರೆಸಿಕೊಂಡ ಸಂಗತಿ ಬಯಲು

ಹೈದರಾಬಾದ್‌: ತೆಲಂಗಾಣ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಹಾಗೂ ಸಿಎಂ ರೇವಂತ್ ರೆಡ್ಡಿ ವಿರುದ್ಧ ಗೂಢಚಾರಿಕೆ ನಡೆಸಿರೋ ಆರೋಪ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಹೈದರಾಬಾದ್‌ ಪೊಲೀಸರು ಈ ಪ್ರಕರಣದ ಉನ್ನತ ತನಿಖೆ ನಡೆಸುತ್ತಿದ್ದು, ಸ್ಫೋಟಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.

2023ರ ನವೆಂಬರ್‌ನಲ್ಲಿ ತೆಲಂಗಾಣದ ವಿಧಾನಸಭಾ ಚುನಾವಣೆ ನಡೆದಿದ್ದು ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆದರೆ ಈ ಹಿಂದೆ ಅಧಿಕಾರದಲ್ಲಿದ್ದ BRS ಸರ್ಕಾರ ಕಳೆದ ವರ್ಷ ಹಾಲಿ ಸಿಎಂ ರೇವಂತ್ ರೆಡ್ಡಿ ವಿರುದ್ಧ ಗೂಢಚಾರಿಕೆ ನಡೆಸಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅಕ್ರಮ ಬಂಧನ, ಅಕ್ರಮ ಫೋನ್ ಟ್ಯಾಪಿಂಗ್ ಮಾಡಿರೋದನ್ನ ಎಎಸ್ಪಿ ಭುಜಂಗ ರಾವ್, ಎಎಸ್ಪಿ ತಿರುಪತಣ್ಣ ಅವರು ಒಪ್ಪಿಕೊಂಡಿದ್ದಾರೆ.

ರೇವತ್ ರೆಡ್ಡಿ ಮನೆ ಬಳಿಯ 300 ಮೀಟರ್ ದೂರದಲ್ಲಿರುವ ಶಾಲೆಯೊಂದರಲ್ಲಿ ಫೋನ್ ಟ್ಯಾಪಿಂಗ್‌ ಯೂನಿಟ್ ತೆರೆಯಲಾಗಿತ್ತಂತೆ. ಇಸ್ರೇಲ್‌ನಿಂದ ಫೋನ್ ಟ್ಯಾಪಿಂಗ್ ಸಾಮಾಗ್ರಿ ಆಮದು ಮಾಡಿಕೊಂಡು ಸಾಫ್ಟ್‌ವೇರ್ ಕಂಪನಿ ಮೂಲಕ ಫೋನ್ ಟ್ಯಾಪಿಂಗ್ ಮಾಡಲಾಗಿದೆ. ರೇವಂತ್ ರೆಡ್ಡಿ ಮನೆಯಲ್ಲಿ ಮಾತನಾಡುವುದನ್ನೆಲ್ಲಾ ಅಧಿಕಾರಿಗಳು ಕದ್ದು ಕೇಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ BRS ಸರ್ಕಾರದ ಅವಧಿಯಲ್ಲಿ ವಿಪಕ್ಷ ನಾಯಕರು, ದೊಡ್ಡ, ದೊಡ್ಡ ವ್ಯಾಪಾರಸ್ಥರು, ರಿಯಲ್ ಎಸ್ಟೇಟ್‌ ಉದ್ಯಮಿಗಳ ಫೋನ್‌ಗಳನ್ನು ಟ್ಯಾಪಿಂಗ್‌ ಮಾಡಲಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಸೆಲೆಬ್ರಿಟಿ ದಂಪತಿಗಳ ಡಿವೋರ್ಸ್‌ಗೂ ಇದೇ ಫೋನ್ ಟ್ಯಾಪಿಂಗ್ ಕಾರಣ ಎನ್ನಲಾಗಿದೆ.

ಬೆದರಿಸಿ ಆಸ್ತಿ ಬರೆಸಿಕೊಂಡ ಅಧಿಕಾರಿಗಳು!
ರಾಜಕಾರಣಿಗಳು, ಗಣ್ಯರ ಫೋನ್ ಕದ್ದಾಲಿಕೆಯ ಜೊತೆಗೆ ತೆಲಂಗಾಣದಲ್ಲಿ ಬೆದರಿಸಿ ಆಸ್ತಿ ಬರೆಸಿಕೊಂಡ ಅಚ್ಚರಿಯ ಸಂಗತಿ ಕೂಡ ಬಯಲಾಗಿದೆ. ಬಿಜೆಪಿ ನಾಯಕ, ಉದ್ಯಮಿ ಶರಣ್ ಚೌಧರಿಯನ್ನು ಕಿಡ್ನ್ಯಾಪ್ ಮಾಡಿ ಬಿ.ಆರ್.ಎಸ್. ನಾಯಕರು ಆಸ್ತಿ ಬರೆಸಿಕೊಂಡಿದ್ದಾರೆ. ಬಿ.ಆರ್.ಎಸ್. ನಾಯಕ, ಮಾಜಿ ಸಚಿವ ಎರಬಲ್ಲಿ ದಯಾಕರ್ ರಾವ್ ಸಂಬಂಧಿ ಹೆಸರಿಗೆ ಅಧಿಕಾರಿಗಳು ಆಸ್ತಿ ಬರೆಸಿಕೊಟ್ಟಿದ್ದಾರೆ ಎನ್ನಲಾಗಿದೆ.

2023ರ ಆಗಸ್ಟ್ 21ರಂದು ಶರಣ್ ಚೌಧರಿ ಅವರನ್ನ ಪೊಲೀಸ್ ಅಧಿಕಾರಿ ರಾಧಾಕೃಷ್ಣ ರಾವ್, ಎಸಿಪಿ ಉಮಾಮಹೇಶ್ವರ್ ರಾವ್ ಅಪಹರಣ ಮಾಡಿದ್ದಾರೆ. ಹೈಕೋರ್ಟ್‌ನಲ್ಲಿ ದೂರು ದಾಖಲಿಸದಂತೆ ಪೊಲೀಸರಿಂದ ಬೆದರಿಕೆ ಹಾಕಿಸಲಾಗಿದೆ. ಇದಕ್ಕಾಗಿ ಪೊಲೀಸ್ ಅಧಿಕಾರಿಗಳಿಗೆ 50 ಲಕ್ಷ ರೂ ಲಂಚ ಕೂಡ ನೀಡಲಾಗಿದೆ.

ಇದನ್ನೂ ಓದಿ: ಅಂದು RSS ಕಾರ್ಯಕರ್ತ.. ಇಂದು ಕಾಂಗ್ರೆಸ್​​ನ ಕಟ್ಟಾಳು.. CM ಆಗ್ತಿರೋ ರೇವಂತ್ ರೆಡ್ಡಿ ರಾಜಕೀಯ ಜರ್ನಿ ರೋಚಕ..!

ಮಾಜಿ IB ಮುಖ್ಯಸ್ಥ ಕಿಂಗ್‌ಪಿನ್‌!
ಫೋನ್‌ ಟ್ಯಾಪಿಂಗ್ ಪ್ರಕರಣದಲ್ಲಿ ತೆಲಂಗಾಣದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಅವರೇ ಆರೋಪಿ ನಂ.1. ಫೋನ್ ಕದ್ದಾಲಿಕೆ ಬಯಲಾಗುತ್ತಿದ್ದಂತೆ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿದ್ದ ಪ್ರಭಾಕರ್ ರಾವ್ ಅಮೆರಿಕಾಕ್ಕೆ ಪರಾರಿಯಾಗಿದ್ದಾರೆ. ಪ್ರಭಾಕರ್‌ ರಾವ್ ವಿರುದ್ಧ ಈಗ ಅಧಿಕಾರಿಗಳು ಲುಕ್ ಔಟ್ ನೊಟೀಸ್ ಕೂಡ ಜಾರಿ ಮಾಡಿದ್ದಾರೆ.

ಬ್ಲಾಕ್ ಮೇಲ್ ಮಾಡಿ BRS ಪಕ್ಷಕ್ಕೆ ದೇಣಿಗೆ!
ತೆಲಂಗಾಣದಲ್ಲಿ ಉದ್ಯಮಿಗಳನ್ನು ಬ್ಲಾಕ್ ಮೇಲ್ ಮಾಡಿ BRS ಪಕ್ಷಕ್ಕೆ ದೇಣಿಗೆ ಕೊಡಿಸಲಾಗಿದೆ ಅನ್ನೋ ಮತ್ತೊಂದು ಸಂಗತಿ ಬಯಲಾಗಿದೆ. ಬೆದರಿಸಿ ದೇಣಿಗೆ ಪಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಫೋನ್ ಟ್ಯಾಪಿಂಗ್ ಕೇಸ್‌ನಲ್ಲಿ ಇದುವರೆಗೂ ಮೂವರು ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣದಲ್ಲಿ ಬೆಚ್ಚಿ ಬೀಳಿಸಿದ ಫೋನ್ ಕದ್ದಾಲಿಕೆ; ಅಸಲಿಗೆ ಆಗಿದ್ದೇನು? ಕಂಪ್ಲೀಟ್‌ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/03/Telangana-telephone-Tapping-Case.jpg

Load More