/newsfirstlive-kannada/media/post_attachments/wp-content/uploads/2025/04/GOLD.jpg)
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನ ಖರೀದಿಯ ಭರಾಟೆ ಜೋರಾಗಿದೆ. ಇಂದು ಚಿನ್ನ ಖರೀದಿಸಿದರೆ ಮನೆಗೆ ಲಕ್ಷ್ಮಿ ದೇವಿ ಬರುತ್ತಾಳೆ, ಆರ್ಥಿಕ ತೊಂದರೆ ಇರೋರಿಗೆ ಧನಲಾಭ ಆಗಲಿದೆ, ಅದರಿಂದ ಸಮೃದ್ಧಿಯ ಜವನ ನಡೆಸಬಹುದು ಎಂಬ ನಂಬಿಕೆಯಿದೆ. ಚಿನ್ನವನ್ನ ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿಧ ಫಿನ್‌ಟೆಕ್ ವೇದಿಕೆಗಳು (Pintech) ಡಿಜಿಟಲ್ ಚಿನ್ನದ (Digital Gold) ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿವೆ. ಇವುಗಳ ಮೂಲಕ ಜನ ಕಡಿಮೆ ಹಣದಿಂದ ಚಿನ್ನ ಖರೀದಿಸಬಹುದು. ಹಬ್ಬದ ಸಂಭ್ರಮದಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಫೋನ್‌ಪೇ ಮತ್ತು ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ವಿಶೇಷ ಆಫರ್ ನೀಡುತ್ತಿವೆ.
ಇದನ್ನೂ ಓದಿ: ಭಾರತಕ್ಕೆ ಮೊದಲ ಎಂಟ್ರಿ.. ಟೆಸ್ಲಾ ಟ್ರಕ್ ಖರೀದಿಸಿದ ಖ್ಯಾತ ಉದ್ಯಮಿ; ಏನಿದರ ವಿಶೇಷ?
ಫೋನ್‌ಪೇ ವಿಶೇಷ ಕೊಡುಗೆ
ಫೋನ್‌ಪೇ ವಿಶೇಷ ಕೊಡುಗೆಯನ್ನು ಹೊತ್ತು ತಂದಿದೆ. 24 ಕ್ಯಾರೆಟ್ನ ಡಿಜಿಟಲ್ ಚಿನ್ನ ಖರೀದಿಸೋರಿಗೆ ಕ್ಯಾಶ್‌ಬ್ಯಾಕ್ ನೀಡುತ್ತದೆ. 2000 ರೂಪಾಯಿ ವರೆಗೆ ಕ್ಯಾಶ್‌ಬ್ಯಾಕ್ ನೀಡೋದಾಗಿ ಫೋನ್ ಪೇ ಹೇಳಿದೆ. ಫೋನ್ ಪೇನ ಈ ಕೊಡುಗೆ ಇಂದು ಮಾತ್ರ ಮಾನ್ಯವಾಗಿರುತ್ತದೆ. ಡಿಜಿಟಲ್ ವೆಬ್‌ಸೈಟ್‌ನಲ್ಲಿ ಡಿಜಿಟಲ್ ಚಿನ್ನ ಖರೀದಿಸಲು PhonePe ನೀಡುತ್ತಿರುವ ಡೀಲ್ ಹೀಗಿದೆ.
- ಚಿನ್ನದ ನಾಣ್ಯಗಳ ಮೇಲೆ ಹೆಚ್ಚುವರಿಯಾಗಿ ಪ್ರತಿಶತ ಎರಡರಷ್ಟು ರಿಯಾಯಿತಿ
- ಸ್ಟಡ್ ಮಾಡದ ಆಭರಣಗಳ ಮೇಲೆ ಹೆಚ್ಚುವರಿಯಾಗಿ ಪ್ರತಿಶತ ಮೂರರಷ್ಟು ರಿಯಾಯಿತಿ
- ಸ್ಟಡ್ ಇರುವ ಆಭರಣಗಳ ಮೇಲೆ ಹೆಚ್ಚುವರಿ ಶೇಕಡಾ 5 ರಷ್ಟು ರಿಯಾಯಿತಿ
MMTC, PAMP, ಸೇಫ್ ಗೋಲ್ಡ್, ಕ್ಯಾರೆಟ್ಲೇನ್ ಮತ್ತು ಇತರ ಕಂಪನಿಗಳಿಂದ 99.99 ಪ್ರತಿಶತ ಶುದ್ಧತೆಯೊಂದಿಗೆ 24K ಡಿಜಿಟಲ್ ಚಿನ್ನವನ್ನು ಖರೀದಿಸಬಹುದು.
ಏರ್‌ಟೆಲ್ ಪಾವತಿ ಬ್ಯಾಂಕ್
ಐಲ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಡಿಜಿಗೋಲ್ಡ್ ಸೇವೆಯನ್ನು ರಜಾ ಹೂಡಿಕೆ ಆಯ್ಕೆಯಾಗಿ ಪ್ರಮೋಟ್ ಮಾಡ್ತಿದೆ. ನೀವು ಏರ್‌ಟೆಲ್ ಥ್ಯಾಂಕ್ಸ್ (Airtel thanks) ಅಪ್ಲಿಕೇಶನ್ ಬಳಸಿ 24K 99.5 ಪ್ರತಿಶತ ಶುದ್ಧ ಚಿನ್ನ ಖರೀದಿಸಬಹುದು.
ಇದನ್ನೂ ಓದಿ: ಭಕ್ತರ ಕಷ್ಟ ಕೇಳಿ ಮಾತನಾಡುವ AI ದೇವತೆ.. ಇದು ಜಗತ್ತಿನಲ್ಲೇ ಮೊಟ್ಟ ಮೊದಲು; ಏನಿದರ ವಿಶೇಷ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್