PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?

author-image
AS Harshith
Updated On
PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?
Advertisment
  • ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನ
  • ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್
  • ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ.

ಇದನ್ನೂ ಓದಿ: ಸಖತ್ತಾಗಿದೆ.. ಸೂಪರ್​ ಆಗಿದೆ! ಸೋಷಿಯಲ್​ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!

publive-image

ಈ ನಿಟ್ಟಿನಲ್ಲಿ ಫೋನ್​ಪೇ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಿರುವ ಕಿಚ್ಚ ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಬಹುತೇಕರ ಪ್ರಶ್ನೆಯಾಗಿತ್ತು. ಮೂಲಗಳ ಪ್ರಕಾರ ಫೋನ್ ಪೇ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ಧವಾಗದಿದ್ದರೆ ಕಿಚ್ಚ ಸುದೀಪ್ ಅವರು ಫೋನ್ ಪೇ ರಾಯಭಾರತ್ವದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳು ಬಲ್ಲ ಮೂಲಗಳಿಂದ ಕೇಳಿಬರುತ್ತಿವೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ಮಗನನ್ನು ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ತಾಯಿ

publive-image

ಒಂದು ವೇಳೆ ಫೋನ್ ಪೇ ಸಿಇಓ ತಮ್ಮ ನಿಲುವನ್ನು ಬದಲಿಸಿಕೊಳ್ಳಲಿದ್ದರೆ, ಮುಂದಿನ ದಿನಗಳಲ್ಲಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿ ಹೊರಬರುವ ಸಾಧ್ಯತೆಗಳಿವೆ ಎಂಬ ಮಾಹಿತಿ ಆವರ ಆಪ್ತ ವಲಯದಿಂದ ಹೊರಬಿದ್ದಿದೆ. ಆದರೆ ಇವೆಲ್ಲದ್ದಕ್ಕೆ ಕಿಚ್ಚ ಸುದೀಪ್​ ಅವರೇ ಉತ್ತರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment