/newsfirstlive-kannada/media/post_attachments/wp-content/uploads/2025/04/Vaibhav-Suryavanshi.jpg)
ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿರುವ ವೈಭವ್ ಸೂರ್ಯವಂಶಿ ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವೈಭವ್ ನಿನ್ನೆ ಹೊಸ ಅಧ್ಯಾಯ ಬರೆದಿದ್ದು, ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಲೋಕದ ದಿಗ್ಗಜರು ಬೆರಗಾಗಿದ್ದಾರೆ.
ವೈಭವ್ ಸೂರ್ಯವಂಶಿ ಅಬ್ಬರ ಹೇಗಿತ್ತು ಅಂದ್ರೆ ಕೇವಲ 17 ಎಸೆತಗಳಲ್ಲೇ ಹಾಫ್ ಸೆಂಚುರಿ ಸಿಡಿಸಿದ್ರು. 11 ಸಿಕ್ಸರ್, 7 ಬೌಂಡರಿ ನೆರವಿನಿಂದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ಗಳಿಸಿ ಅದ್ಭುತ ಆಟ ಪ್ರದರ್ಶಿಸಿದ್ರು.
ಐಪಿಎಲ್‌ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತಿನ ಸೆನ್ಸೇಷನ್ ಆಗಿದ್ದಾರೆ. ಇವನ ಬ್ಯಾಟಿಂಗ್ ಅಬ್ಬರ ನೋಡಿದ ಮಾಜಿ ಕ್ರಿಕೆಟಿಗರು ಈತನ ಸಾಧನೆಗೆ ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಶಿಷ್ಯನ ಶತಕ ವೈಭವಕ್ಕೆ ಬೆರಗಾದ ದ್ರಾವಿಡ್.. ವೀಲ್ ಚೇರ್ನಿಂದ ಎದ್ದು ನಿಂತು ಸಂಭ್ರಮಿಸಿದ ಗುರು – VIDEO
ಒಂದೇ ಒಂದು ಸೆಂಚುರಿಗೆ ವೈಭವ್ ಸೂರ್ಯವಂಶಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಈ ಮಧ್ಯೆ 6 ವರ್ಷದವನಾಗಿದ್ದ ವೈಭವ್ ಸೂರ್ಯವಂಶಿ ಐಪಿಎಲ್ ನೋಡಲು ಸ್ಟೇಡಿಯಂಗೆ ಬಂದಿದ್ದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಫೋಟೋ 2017ರಲ್ಲಿ ವೈಭವ್ ಸೂರ್ಯವಂಶಿ 6 ವರ್ಷದವನಾಗಿದ್ದಾಗ ತೆಗೆದ ಫೋಟೋ. ಅಂದು ಐಪಿಎಲ್ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿದ್ದ ವೈಭವ್, ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಬೆಂಬಲಿಸಿದ್ದ. ಇಂದು ವೈಭವ್ ಸೂರ್ಯವಂಶಿ ಆಟವನ್ನ ನೋಡಿದ ಇಡೀ ಕ್ರಿಕೆಟ್ ಲೋಕವೇ ಈ ಪೋರನಿಗೆ ಶಹಬ್ಬಾಸ್‌ಗಿರಿ ಹೇಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ