/newsfirstlive-kannada/media/post_attachments/wp-content/uploads/2025/03/Darshan-shooting-in-mysore.jpg)
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವು ತಿಂಗಳುಗಳ ಬಳಿಕ ಸಿನಿಮಾ ಶೂಟಿಂಗ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇಂದು ಡೆವಿಲ್ ಚಿತ್ರೀಕರಣದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ದರ್ಶನ್ ಶೂಟಿಂಗ್‌ಗೂ ಮುನ್ನ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ಡೆವಿಲ್ ಶೂಟಿಂಗ್‌ಗೂ ಮುನ್ನ ದರ್ಶನ್ ದೇವರ ಮೊರೆ ಹೋಗಿದ್ದು, ಇಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದರು.
ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ.
ಕಳೆದ 10 ತಿಂಗಳ ಹಿಂದೆ ನಟ ದರ್ಶನ್ ಅವರು ಮೈಸೂರಿನ ಲಲಿತಮಹಲ್ ಪ್ಯಾಲೆಸ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆಯೇ ಅರೆಸ್ಟ್ ಆಗಿದ್ದರು.
10 ತಿಂಗಳ ಬಳಿಕ ಇದೀಗ ಮೈಸೂರಿನಲ್ಲೇ ದಿ ಡೆವಿಲ್ ಸಿನಿಮಾ ಶೂಟಿಂಗ್ ಅನ್ನು ಮತ್ತೆ ಆರಂಭಿಸಲಾಗಿದೆ. ಮೈಸೂರಿನಲ್ಲಿ ಈಗಾಗಲೇ ಡೆವಿಲ್ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಇಂದಿನಿಂದ ನಟ ದರ್ಶನ್ ಭಾಗಿಯಾಗುತ್ತಿದ್ದಾರೆ.
ಇದೇ ಮಾರ್ಚ್ 12ರಿಂದ 15ರವರೆಗೆ ಮೈಸೂರಲ್ಲಿ ಡೆವಿಲ್ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ದರ್ಶನ್ ಅನ್ಫಾಲೋ; ಇನ್ಸ್ಟಾದಲ್ಲಿ ಸರಣಿ ಪೋಸ್ಟ್.. ಸುಮಲತಾ ಇದೆಲ್ಲಾ ಹೇಳಿದ್ದು ಯಾರಿಗೆ?
ಮಾರ್ಚ್ 14ರವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಡೆವಿಲ್ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ.
ಮಾರ್ಚ್ 15ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆವರೆಗೂ ಲಲಿತಮಹಲ್ ಪ್ಯಾಲೆಸ್‌ನಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಬಳಿಕ ಬಂದ್ ಆಗಿದ್ದ ಡೆವಿಲ್ ಸಿನಿಮಾದ ಚಿತ್ರೀಕರಣ ಮತ್ತೆ ಆರಂಭವಾಗಿರೋದು ದರ್ಶನ್ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ