/newsfirstlive-kannada/media/post_attachments/wp-content/uploads/2025/04/J-D-Vance-Family-India-1.jpg)
ನವದೆಹಲಿ: ಅಪ್ಪಾ, ಅಮ್ಮಾ ಅಲ್ನೋಡಿ.. ಇಲ್ನೋಡಿ.. ದೆಹಲಿ ಪಾಲಂ ವಿಮಾನ ನಿಲ್ದಾಣ, ಅಕ್ಷರಧಾಮ ದೇವಾಲಯದಲ್ಲಿ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ಮಕ್ಕಳು ಖುಷಿ, ಖುಷಿಯಾಗಿ ಓಡಾಡಿದ್ದಾರೆ. ಜೆ.ಡಿ ವ್ಯಾನ್ಸ್, ಉಷಾ ವ್ಯಾನ್ಸ್ ಅವರಿಗೆ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಡುವುದೇ ಒಂದು ಸವಾಲಿನ ಕೆಲಸವಾಗಿತ್ತು.
Watch: Vance kids Ewan, Vivek & Mirabel arrive in Indian attire. pic.twitter.com/aH0j38hgDW
— Sidhant Sibal (@sidhant)
Watch: Vance kids Ewan, Vivek & Mirabel arrive in Indian attire. pic.twitter.com/aH0j38hgDW
— Sidhant Sibal (@sidhant) April 21, 2025
">April 21, 2025
ಅಮೆರಿಕಾದ 2ನೇ ಪ್ರಜೆ ಹಾಗೂ ಮೊದಲ ಹಿಂದೂ ಉಪಾಧ್ಯಕ್ಷೆಯ ಪತ್ನಿ ಜೆ.ಡಿ ವ್ಯಾನ್ಸ್ ಮೊದಲ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಜೆ.ಡಿ ವ್ಯಾನ್ಸ್ ತನ್ನ 3 ಮಕ್ಕಳೊಂದಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಭಾರತದ ಹಿರಿಯ ಅಧಿಕಾರಿಗಳು ಜೆ.ಡಿ ವ್ಯಾನ್ಸ್ ಕುಟುಂಬಕ್ಕೆ ಸಂಪ್ರದಾಯಿಕ ಸ್ವಾಗತ ಕೋರಿದರು.
ಜೆಡಿ ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಗಳಿದ್ದಾರೆ. ಭಾರತಕ್ಕೆ ಆಗಮಿಸಿರುವ ಮೂರು ಮಕ್ಕಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಕುರ್ತಾ, ಪೈಜಾಮಾ, ಅನಾರ್ಕಲಿ ತೊಡಿಸಿದ್ದು ವಿಶೇಷವಾಗಿತ್ತು.
ಪ್ರಧಾನಿ ಮೋದಿ ಭೇಟಿಗೆ ಕ್ಷಣಗಣನೆ
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಭಾರತಕ್ಕೆ ಬಂದಿಳಿದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವೂ ಸೇರಿದಂತೆ ಇಡೀ ಜಗತ್ತಿನ ಹಲವು ದೇಶಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಿರುವ ಬೆನ್ನಲ್ಲೇ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಭೇಟಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಮೋದಿ ಭೇಟಿ, ಸುಂಕದ ಬಗ್ಗೆ ಚರ್ಚೆ!
ಜೆಡಿ ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಜೆಡಿ ವ್ಯಾನ್ಸ್ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಅಮೆರಿಕದ ಸುಂಕ ಸಮರ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಉಫಾಧ್ಯಕ್ಷರು ಪ್ರಧಾನಿ ಮೋದಿ ಮತ್ತು ಇತರ ಭಾರತೀಯ ಗಣ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರನ ಮೊರೆ ಹೋದ ರಾಕಿಂಗ್ ಸ್ಟಾರ್ ಯಶ್.. ಟಾಪ್ ಫೋಟೋಸ್ ಇಲ್ಲಿವೆ!
ತಾಜ್ ಮಹಲ್, ಜೈಪುರಕ್ಕೂ ಭೇಟಿ!
ಅಮೆರಿಕ-ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧದ ಬಗ್ಗೆ ಜೆಡಿ ವ್ಯಾನ್ಸ್ ಮತ್ತು ಭಾರತೀಯ ಗಣ್ಯರ ನಡುವೆ ಸುದೀರ್ಘ ಚರ್ಚೆ ನಡೆಯಲಿದೆ. ಇದೇ ವೇಳೆ ಜೆಡಿ ವ್ಯಾನ್ಸ್ ಅವರು ಪತ್ನಿ ಉಷಾ ವ್ಯಾನ್ಸ್ ಜೊತೆ ದೆಹಲಿಯ ಅಕ್ಷರಧಾಮ ದೇವಾಲಯ, ಆಗ್ರಾದ ತಾಜ್‌ಮಹಲ್, ಜೈಪುರ್‌ಗೂ ಖಾಸಗಿ ಭೇಟಿ ನೀಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ