Advertisment

ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

author-image
Veena Gangani
Updated On
ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
Advertisment
  • ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸೈರಾಬಾನು
  • ಮದುವೆಗೆ ಇನ್ನೂ 8 ದಿನ ಬಾಕಿ ಇರುವಾಗಲೇ ಶಿಕ್ಷಕಿ ಸೈರಾಬಾನು ನಿಧನ
  • ಮದ್ವೆಗೆ ಸಿದ್ಧತೆ ಮಾಡ್ಕೊಂಡಿದ್ದ ಪೋಷಕರು, ಮುಗಿಲು ಮುಟ್ಟಿದ ಆಕ್ರಂದನ

ಗದಗ: ಲವರ್​ ಬ್ಲಾಕ್ ಮೇಲೆ ಮಾಡಿದ್ದಕ್ಕಾಗಿ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸೈರಾಬಾನು ನದಾಫ್‌ (29) ಆತ್ಮಹತ್ಯೆ ಮಾಡಿಕೊಂಡ ದೈಹಿಕ ಶಿಕ್ಷಕಿ.

Advertisment

ಮದುವೆಗೆ ಇನ್ನೂ 8 ದಿನ ಬಾಕಿ ಇರುವಾಗಲೇ ಮನೆಯಲ್ಲಿ ನೇಣು ಬಿಗಿದುಕೊಂಡು ದೈಹಿಕ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂದು ಕಡೆ ಮನೆಯಲ್ಲಿ ಮದುವೆಗಾಗಿ ಕುಟುಂಬಸ್ಥರು ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಓಂ ಪ್ರಕಾಶ್​ ಬರ್ಬರ ಹತ್ಯೆ; ಪೊಲೀಸರಿಗೆ ಮೂಡಿದ ಅನುಮಾನಗಳು ಏನು..?

publive-image

ಹೀಗಾಗಿ ಮದುವೆ ಸಾಮಗ್ರಿಗಳನ್ನು ತರಲು ಹೋಗಿದ್ದ ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಸೈರಾಬಾನು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಮಾಡ್ತಿದ್ದರು. ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಹೆಸರು ಮಾಡಿದ್ದರು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದರು. ಇಷ್ಟೇ ಅಲ್ಲದೇ ಇಡೀ ಮನೆ ಜವಾಬ್ದಾರಿ ಸೈರಾಬಾನು ಹೊತ್ತಿದ್ದಳು. ಗಂಡು ಮಕ್ಕಳು ಇಲ್ಲದಿದ್ದಕ್ಕೆ ತಾನೇ ಮನೆಯ ಜವಾಬ್ದಾರಿ ನಿರ್ವಹಣೆ ಮಾಡ್ತಿದ್ದಳು. ಈಗ ಲವರ್ ಟಾರ್ಚರ್​ಗೆ ಬೇಸತ್ತು ಬದುಕು ಅಂತ್ಯಗೊಳಿಸಿದ ಶಿಕ್ಷಕಿ.

publive-image

ಲವರ್​ ಕಾಟಕ್ಕೆ ಬೆಸತ್ತ ಶಿಕ್ಷಕಿ..!

ಮೃತ ಶಿಕ್ಷಕಿ ಕಳೆದ ಐದು ವರ್ಷಗಳಿಂದ ಮೈಲೇರಿ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳಂತೆ. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕ್ ಅಪ್​ ಆಗಿತ್ತಂತೆ. ಲವ್ ಬ್ರೇಕಪ್ ಬಳಿಕ ಮದುವೆಗೆ ಶಿಕ್ಷಕಿ ಒಪ್ಪಿಕೊಂಡಿದ್ದಳಂತೆ. ಆದ್ರೆ ಶಿಕ್ಷಕಿಯ ಮದುವೆ ತಯಾರಿ ನೋಡಿ ಲವರ್​ ಟಾರ್ಚರ್ ಮಾಡೋಕೆ ಶುರು ಮಾಡಿದ್ದನಂತೆ. ಇಬ್ಬರ ಫೋಟೋ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದನಂತೆ. ಹೀಗಾಗಿ ಮರ್ಯಾದೆಗೆ ಅಂಜಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

Advertisment

publive-image

ಮಗಳನ್ನು ಕಳೆದುಕೊಂಡ ಪೋಷಕರ ಮದುವೆ ಮನೆಯಲ್ಲಿ ಈಗ ಸೂತಕದ ಛಾಯೆ ಮೂಡಿದೆ. ಕೊನೆ ಮಗಳು ಅಂತ ಭರ್ಜರಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ಮಗಳಿಗೆ ಟಾರ್ಚರ್ ನೀಡಿರೋ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕು ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆತನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಘಟನೆ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment