ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​

author-image
Bheemappa
Updated On
ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​
Advertisment
  • ಕಾರ್ಯಕ್ರಮಕ್ಕೆ ಹೋಟೆಲ್​​ನಿಂದ 25 ಜನರಿಗೆ ಊಟ ಆರ್ಡರ್
  • ಹೋಟೆಲ್​ ವಿರುದ್ಧ ಗ್ರಾಹಕನು ಕೇಸ್​ ಗೆದ್ದಿದ್ದೇ ಇಲ್ಲಿ ರೋಚಕ
  • ಉಪ್ಪಿನಕಾಯಿ ತರುವಷ್ಟರಲ್ಲಿ ಎಲ್ಲರ ಊಟ ಮುಗಿದು ಹೋಯ್ತಾ?

ಚೆನ್ನೈ: ಊಟದಲ್ಲಿ ಉಪ್ಪಿನಕಾಯಿ ಇದ್ದರೇ ಅದರ ಟೇಸ್ಟ್ ಬೇರೆನೇ ಇರುತ್ತದೆ. ಎಲ್ಲಿಯೇ ಆಗಲಿ ಊಟದಲ್ಲಿ ಉಪ್ಪಿನಕಾಯಿ ಇಲ್ಲ ಅಂದರೆ ಆ ಊಟ ಪರಿಪೂರ್ಣವಾಗುವುದಿಲ್ಲ. ಆದರೆ ಇದೇ ಉಪ್ಪಿನಕಾಯಿಗಾಗಿ 25 ರೂಪಾಯಿ ಬದಲಿಗೆ ಹೋಟೆಲ್​​ವೊಂದು 35000 ರೂಪಾಯಿಗಳ ದಂಡ ಕಟ್ಟುವಂತೆ ಆಗಿದೆ. ಸದ್ಯ ಏನಿದು ಉಪ್ಪಿನಕಾಯಿ ಪ್ರಕರಣದ ಸ್ಟೋರಿ, ಹೋಟೆಲ್​ನವರು ದಂಡ ಕಟ್ಟಿದ್ದೇಕೆ ಎನ್ನುವುದ ವಿವರ ಇಲ್ಲಿ ಕೊಡಲಾಗಿದೆ.

ಪುಣ್ಯತಿಥಿ ಕಾರ್ಯಕ್ರಮದ ಊಟದಲ್ಲಿ ಉಪ್ಪಿನಕಾಯಿ ಇಲ್ಲದಿದ್ದಕ್ಕೆ 35 ಸಾವಿರ ರೂಪಾಯಿ ದಂಡ ಕಟ್ಟುವಂತೆ ಬಾಲಮುರುಗನ್ ಹೋಟೆಲ್ ಮಾಲೀಕರಿಗೆ ತಮಿಳುನಾಡಿನ ವಿಲ್ಲುಪುರಂನ ಗ್ರಾಹಕರ ಕೋರ್ಟ್​ ಆದೇಶ ನೀಡಿದೆ.

ಇದನ್ನೂ ಓದಿ: ಡಿವೈಡರ್​ ದಾಟಿ ಬಸ್​ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್​​ವೇರ್​ ಉದ್ಯೋಗಿಗಳು ಸಾವು

ಸಿ ಆರೋಕಿಯಾಸಾಮಿ ಎನ್ನುವರು 2022ರ ನವೆಂಬರ್​ನಲ್ಲಿ ತನ್ನ ಸಂಬಂಧಿಯೊಬ್ಬರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗುವ 25 ಜನರಿಗೆ ಬಾಲಮುರುಗನ್ ಹೋಟೆಲ್​ನಿಂದ ಪ್ರತಿ ಊಟಕ್ಕೆ 80 ರೂಪಾಯಿಯಂತೆ ಫುಡ್ ತರಿಸಿಕೊಂಡಿದ್ದರು. ಇದಕ್ಕೆ 2000 ರೂ.ಗಳನ್ನು ಹೋಟೆಲ್​ಗೆ ಪಾವತಿ ಮಾಡಬೇಕಾಗಿತ್ತು. ಆದರೆ ಈ ಊಟದ ಸಮಯದಲ್ಲಿ ಉಪ್ಪಿನಕಾಯಿ ತಂದಿರಲಿಲ್ಲ ಎಂದು ಈ ಬಗ್ಗೆ ಹೋಟೆಲ್​ನವರಿಗೆ ತಿಳಿಸಿದ್ದಾರೆ. ಇದಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಕಾರ್ಯಕ್ರಮಕ್ಕೆ ಉಪ್ಪಿನಕಾಯಿ ತರಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಎಲ್ಲರ ಊಟ ಮುಗಿದು ಹೋಗಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ.. ಮನು ಭಾಕರ್​ಗೆ ಅಭಿನಂದನೆಗಳ ಸುರಿಮಳೆ

publive-image

ಹೀಗಾಗಿ ಉಪ್ಪಿನಕಾಯಿ ವಾಪಸ್ ತೆಗೆದುಕೊಂಡು ಹೋಗುವಂತೆ ಸಿ ಆರೋಕಿಯಾಸಾಮಿ ತಿಳಿಸಿದ್ದಾರೆ. ಆದರೆ ಇಲ್ಲ, ಅದನ್ನು ತಂದಿದ್ದರಿಂದ ನೀವು ಹಣ ಪಾವತಿ ಮಾಡಬೇಕೆಂದು ಹೇಳಿದಾಗ ಹೋಟೆಲ್​ ಮಾಲೀಕರ ಹಾಗೂ ಗ್ರಾಹಕನ ನಡುವೆ ವಾದ-ವಿವಾದ ನಡೆದು ಕೇಸ್​ ಕೋರ್ಟ್​ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ಮಾಡಿದ ತಮಿಳುನಾಡಿನ ವಿಲ್ಲುಪುರಂನ ಗ್ರಾಹಕರ ನ್ಯಾಯಾಲಯ ಹೋಟೆಲ್​ಗೆ ದಂಡ ವಿಧಿಸಿದೆ.

ಇದನ್ನೂ ಓದಿ: ಬೆಂಗಳೂರು ಮಂದಿಗೆ ಕೊನೆಗೂ ಗುಡ್​ ನ್ಯೂಸ್​​.. ವಾಹನ ಸವಾರರು ಓದಲೇಬೇಕಾದ ಸ್ಟೋರಿ ಇದು..!

ಹೋಟೆಲ್​ ಸೇವೆಯಲ್ಲಿ ಕೊರತೆಯಾಗಿದೆ. ಇದು ಗ್ರಾಹಕರಿಗೆ ದೈಹಿಕ ತೊಂದರೆ ಮತ್ತು ಮಾನಸಿಕ ಸಂಕಟ ಉಂಟುಮಾಡಿದೆ. ಹೀಗಾಗಿ ಹೋಟೆಲ್​ನವರು 5,000 ರೂಪಾಯಿಗಳ ಕೋರ್ಟ್​ನ ವ್ಯಾಜ್ಯ ವೆಚ್ಚ ಹಾಗೂ 30,000 ರೂಪಾಯಿ ದಂಡ ಗ್ರಾಹಕರಿಗೆ ನೀಡಬೇಕೆಂದು ಆದೇಶ ನೀಡಿದೆ. ಇನ್ನು ಆರ್ಡರ್ ಮಾಡಿದ ಊಟದಲ್ಲಿ ಬಿಳಿ ಅನ್ನ, ಸಾಂಬಾರ್, ಖಾರ ಕುಜಂಬು, ರಸಂ, ಮಜ್ಜಿಗೆ, ಕೂಟ್ಟು, ಪೊರಿಯಾಲ್, ಅಪ್ಪಳಂ, ದೊಡ್ಡ ಗಾತ್ರದ ಬಾಳೆ ಎಲೆಗಳು ಇದ್ದವು. ಆದರೆ ಇದರಲ್ಲಿ ಉಪ್ಪಿನ ಕಾಯಿ ಇಲ್ಲದಿದ್ದೇ ಕೋರ್ಟ್​ಗೆ ಹೋಗುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment