newsfirstkannada.com

ವ್ಯಕ್ತಿಗೆ ಹಂದಿ ಕಿಡ್ನಿ ಜೋಡಿಸಿದ ವೈದ್ಯರು; ನ್ಯೂಯಾರ್ಕ್​ ವೈದ್ಯರಿಂದ ಸಂಶೋಧನೆ

Share :

17-08-2023

    ಲ್ಯಾಂಗೋನ್​ ಟ್ರಾನ್ಸ್​ಪ್ಲಾಂಟ್​​ ಇನ್​​​ಸ್ಟಿಟ್ಯೂಟ್​​ ಮಾಡಿದ ಸಂಶೋಧನೆ

    ಅಮೆರಿಕದಲ್ಲಿ 103,00ಕ್ಕಿಂತ ಹೆಚ್ಚು ಜನರಿಗೆ ಅಂಗಾಂಗ ಕಸಿಯ ಅಗತ್ಯವಿದೆ

    88 ಸಾವಿರ ಜನರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ ಎಂದ ವೈದ್ಯರು

ನ್ಯೂಯಾರ್ಕ್​ನ ವೈದ್ಯಕೀಯ ತಂಡ ಹೊಸ ಸಂಶೋಧನೆಯತ್ತ ಹೆಜ್ಜೆ ಇಟ್ಟಿದೆ. ಬ್ರೈನ್ ಡೆಡ್ ಆಗಿರುವ ವ್ಯಕ್ತಿಗೆ ಹಂದಿಯ ಕಿಡ್ನಿಯನ್ನು ಅಳವಡಿಸಿ ಹೊಸ ಸಂಶೋಧನೆಗೆ ಹೆಜ್ಜೆ ಇಟ್ಟಿದ್ದಾರೆ.

ವ್ಯಕ್ತಿಗೆ ಹಂದಿಯ ಕಿಡ್ನಿ ಅಳವಡಿಸಿದ ಬಳಿಕ ಒಂದು ತಿಂಗಳು ಕಾರ್ಯನಿರ್ವಹಿಸಿದೆ. ಹೀಗಾಗಿ ಇನ್ನು ಕಿಡ್ನಿ ಸಮಸ್ಯೆಯಿಂದ ಬಳಲುವ ಮನುಷ್ಯರಿಗೆ ಹಂದಿಯ ಕಿಡ್ನಿಯನ್ನು ಅಳವಡಿಸಬಹುದೆಂಬ ಹೊಸ ಸಂಶೋಧನೆಯತ್ತ ಸಂಶೋಧಕರು ಮುನ್ನಡಿ ಇಟ್ಟಿದ್ದಾರೆ. ಇದರಿಂದ ಪ್ರಾಣಿಗಳ ಅಂಗಾಂಶಗಳನ್ನು ಮಾನವನ ದೇಹಕ್ಕೆ ಅಳವಡಿಸುವ ವೈದ್ಯರ ಹೊಸ ಸಂಶೋಧನೆಗೆ ಉತ್ತಮ ಫಲಿತಾಂಶ ದೊರಕಿದಂತಾಗಿದೆ.

ಲ್ಯಾಂಗೋನ್​ ಟ್ರಾನ್ಸ್​ಪ್ಲಾಂಟ್​​ ಇನ್​​​ಸ್ಟಿಟ್ಯೂಟ್​​ ಶಸ್ತ್ರಚಿಕಿತ್ಸಕರು ಈ ಕಾರ್ಯವನ್ನು ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಇನ್ನು ಅಮೆರಿಕದಲ್ಲಿ 103,00ಕ್ಕಿಂತ ಹೆಚ್ಚು ಜನರಿಗೆ ಅಂಗಾಂಗ ಕಸಿಯ ಅಗತ್ಯವಿದೆ. ಅದರಲ್ಲಿ 88 ಸಾವಿರ ಜನರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ. ಪ್ರತಿ ವರ್ಷ ಜನರು ಇದಕ್ಕಾಗಿ ಕಾದು ಸಾಯುತ್ತಿರುತ್ತಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಮೌರಿಸ್​ ಮೊ ಮಿಲ್ಲರ್​​ ಎಂಬವರಿಗೆ ಹಂದಿಯ ಕಿಡ್ನಿಯನ್ನು ವರ್ಗಾಯಿಸುವ ಮೂಲಕ ವೈದ್ಯರು ಈ ಕಾರ್ಯವನ್ನು ಮಾಡಿದ್ದಾರೆ. 57ನೇ ವರ್ಷ ವಯಸ್ಸಿಗೆ  ಹಂದಿ ಕಿಡ್ನಿಯನ್ನು ವರ್ಗಾಯಿಸುವ ಮೂಲಕ ಪ್ರಯೋಗ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಕ್ತಿಗೆ ಹಂದಿ ಕಿಡ್ನಿ ಜೋಡಿಸಿದ ವೈದ್ಯರು; ನ್ಯೂಯಾರ್ಕ್​ ವೈದ್ಯರಿಂದ ಸಂಶೋಧನೆ

https://newsfirstlive.com/wp-content/uploads/2023/08/Pig-Kidney.jpg

Load More