/newsfirstlive-kannada/media/post_attachments/wp-content/uploads/2025/01/Bihar-Raid-Money.jpg)
ಪಾಟ್ನಾ: ಇವರೇನು ಶಿಕ್ಷಣಾಧಿಕಾರಿನಾ ಅಥವಾ ಕಲಿಯುಗದ ಕುಬೇರನ ಚಿಕ್ಕಪ್ಪ, ದೊಡ್ಡಪ್ಪನ ಮಗನಾ. ಈ ದೃಶ್ಯ ನೋಡಿದ್ರೆ ನಿಜಕ್ಕೂ ಎಂತವರಿಗೂ ಇಂತಹದೊಂದು ಅನುಮಾನ ಮೂಡದೇ ಇರೋದಿಲ್ಲ. ಶಿಕ್ಷಣಾಧಿಕಾರಿ ಮನೆ ಮೇಲೆ ದಾಳಿ ಮಾಡಿದ ವಿಜಿಲೆನ್ಸ್ ಅಧಿಕಾರಿಗಳು ಕಂತೆ, ಕಂತೆ ನೋಟುಗಳನ್ನ ನೋಡಿ ದಂಗಾಗಿದ್ದಾರೆ.
ಇವರ ಹೆಸರು ರಜನಿಕಾಂತ್ ಪ್ರವೀಣ್, ಬಿಹಾರ ಬೆಟ್ಟಿಯಾ ಜಿಲ್ಲೆಯ ಶಿಕ್ಷಣಾಧಿಕಾರಿ (DEO). ಇಂದು ಬಿಹಾರದ ವಿಜಿಲೆನ್ಸ್ ಅಧಿಕಾರಿಗಳ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಶಿಕ್ಷಣಾಧಿಕಾರಿ ಭ್ರಷ್ಟ ಕೋಟೆಯನ್ನ ಬಯಲು ಮಾಡಿದ್ದಾರೆ.
ಬಿಹಾರದ ಶಿಕ್ಷಣಾಧಿಕಾರಿ ರಜನಿಕಾಂತ್ ಪ್ರವೀಣ್ ಅವರಿಗೆ ಸಂಬಂಧಪಟ್ಟ ಹಲವೆಡೆ ಇಂದು ವಿಜಿಲೆನ್ಸ್ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಹಾವಳಿ.. ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಸಾಲ-ಬಡ್ಡಿ ಎಷ್ಟಿರುತ್ತೆ?
ಮನೆ ಮೇಲೆ ವಿಜಿಲೆನ್ಸ್ ತಂಡ ದಾಳಿ ಮಾಡಿದ್ದು, ಮನೆಯಲ್ಲಿ ಕಂತೆ, ಕಂತೆ ನೋಟುಗಳನ್ನ ಪತ್ತೆ ಮಾಡಿದ್ರು. ಈ ನೋಟುಗಳನ್ನ ಎಣಿಸಲು ನೋಟ್ ಕೌಂಟಿಂಗ್ ಮೆಷೀನ್ ತರಿಸಿದ್ದು ಬರೋಬ್ಬರಿ 1 ಕೋಟಿ 87 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ.
DEO ರಜನಿಕಾಂತ್ ಪ್ರವೀಣ್ ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಗಂಭೀರ ಆರೋಪ ಕೇಳಿ ಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಜಿಲೆನ್ಸ್ ವಿಭಾಗದ ಅಧಿಕಾರಿಗಳು ಮೊದಲಿಗೆ ಪಾಟ್ನಾದಲ್ಲಿರುವ ಬಾಡಿಗೆ ಮನೆಗೆ ದಾಳಿ ಮಾಡಿದರು. ಅಲ್ಲಿ ಸಿಕ್ಕ ಸುಳಿವಿನ ಮೇರೆಗೆ ಶಿಕ್ಷಣಾಧಿಕಾರಿ ಮನೆ ಮೇಲೆ ರೇಡ್ ಮಾಡಿ ಕೋಟ್ಯಾಂತರ ರೂಪಾಯಿ ನಗದು ಸೇರಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ