newsfirstkannada.com

ವಿಮಾನದಲ್ಲಿ ಮುಖ್ಯ ಪೈಲೆಟ್​​ಗೆ ಸಡನ್​ ಹಾರ್ಟ್​ ಅಟ್ಯಾಕ್.. 271 ಪ್ರಯಾಣಿಕರು ಬದುಕಿ ಬಂದಿದ್ದೇ ಪವಾಡ..!

Share :

Published August 17, 2023 at 11:17am

    ವಿಮಾನದ ಬಾತ್​​ರೂಮ್​​ನಲ್ಲಿ ಪೈಲೆಟ್​​ಗೆ ಹಾರ್ಟ್​ ಅಟ್ಯಾಕ್

    ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದಲ್ಲಿ ದುರಂತ

    LATAM ಏರ್​​ಲೈನ್ಸ್​ನ ಪೈಲೆಟ್, ವಿಮಾನದಲ್ಲೇ​ ದಾರುಣ ಸಾವು​​

ಬರೋಬ್ಬರಿ 271 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಬಾತ್​​ ರೂಮ್​​ನಲ್ಲಿ ಪೈಲೆಟ್​​​ ಕುಸಿದುಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪನಾಮಾ ಬಳಿ ಕಳೆದ ಭಾನುವಾರ ರಾತ್ರಿ ನಡೆದಿದೆ. ವಿಮಾನ ಸಹ ಪೈಲೆಟ್​ನ ಜಾಗೃತೆಯಿಂದ 270 ಮಂದಿಯು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಐವಾನ್ ಅಂದೌರ್ (56) ಮೃತ ಪೈಲೆಟ್.

ಭಾನುವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ​LATAM ಏರ್​​ಲೈನ್ಸ್​ ವಿಮಾನದ ಪೈಲೆಟ್​ಗೆ ಹಠಾತ್ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಪರಿಣಾಮ ಪೈಲೆಟ್​ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಪನಾಮಾ ವಿಮಾನ ನಿಲ್ದಾಣದಲ್ಲಿ ಸಹ ಪೈಲೆಟ್​ ವಿಮಾನವನ್ನು ತುರ್ತು ಭೂ-ಸ್ಪರ್ಷ ಮಾಡಿದ್ದಾರೆ.

ಪನಮಾ ಸಿಟಿಯಲ್ಲಿರುವ ಟೊಕುಮನ್ ಇಂಟರ್​​ನ್ಯಾಷನಲ್ ಏರ್​ಪೋರ್ಟ್​​ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಮಾತ್ರವಲ್ಲ, ಕೂಡಲೇ ವೈದ್ಯಕೀಯ ತಂಡವು ವಿಮಾನದೊಳಗೆ ಪ್ರವೇಶ ಮಾಡಿತ್ತು. ಆದರೆ ಪೈಲೆಟ್ ಬದುಕಿ ಬರಲಿಲ್ಲ ಎಂದು ವರದಿಯಾಗಿದೆ. ಪ್ರಯಾಣಿಕರೊಬ್ಬರು ತಿಳಿಸಿರುವ ಮಾಹಿತಿ ಪ್ರಕಾರ, ವಿಮಾನ ಟೇಕ್ ಆಫ್ ಆಗಿ 40 ನಿಮಿಷಗಳ ಕಳೆದ ಮೇಲೆ ಕೊ-ಪೈಲೆಟ್ ವಿಮಾನದಲ್ಲಿದ್ದ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅವರಿಂದ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ತುರ್ತು-ಭೂಸ್ಪರ್ಷ ಮಾಡಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಮಾನದಲ್ಲಿ ಮುಖ್ಯ ಪೈಲೆಟ್​​ಗೆ ಸಡನ್​ ಹಾರ್ಟ್​ ಅಟ್ಯಾಕ್.. 271 ಪ್ರಯಾಣಿಕರು ಬದುಕಿ ಬಂದಿದ್ದೇ ಪವಾಡ..!

https://newsfirstlive.com/wp-content/uploads/2023/08/POLIT.jpg

Load More