/newsfirstlive-kannada/media/post_attachments/wp-content/uploads/2024/10/Flight-Pilot.jpg)
ಪತ್ನಿಯನ್ನ ಅರ್ಧಾಂಗಿ ಅನ್ನೋದು ಸುಮ್ಮನೆ ಅಲ್ವೇ ಅಲ್ಲ. ಗಂಡನ ಕಷ್ಟದ ಕಾಲದಲ್ಲಿ ಜೊತೆಗಿರುವವಳೇ ಪತ್ನಿ. ಅದೆಷ್ಟೇ ಕಷ್ಟ ಬಂದರೂ ಸರಿ ಕಾಪಾಡುವವಳೇ ಪತ್ನಿ. ಅಂದಹಾಗೆಯೇ ಇಲ್ಲೊಂದು ಘಟನೆ ಅದಕ್ಕೆ ಸಾಕ್ಷಿಯಾಗಿದೆ. ಆಕಾಶದಲ್ಲಿ ಹಾರಾಟದ ವೇಳೆ ಪೈಲಟ್ಗೆ ಹೃದಯಾಘಾತವಾಗಿದ್ದು, ಕೊನೆಗೆ ಪತ್ನಿ ವಿಮಾನನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅಚ್ಚರಿಯ ಘಟನೆಯೊಂದು ನಡೆದಿದೆ.
ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 4ರಂದು ಈ ಘಟನೆ ನಡೆದಿದ್ದು, ಪೈಲಟ್ ಪತ್ನಿಯ ಮಹಾತ್ಕಾರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಟ್ವಿನ್ ಎಂಜಿನ್ ಹೊಂದಿರುವ ಬೀಚ್ಕ್ರಾಫ್ಟ್ ಕಿಂಗ್ ಏರ್ 90 ಕ್ಯಾಲಿಫೋರ್ನಿಯಾದಿಂದ ಮಾಂಟೆರೆ ಕಡೆಗೆ ಸಾಗುವಾಗ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: SSLC ವಿದ್ಯಾರ್ಥಿಗಳೇ.. ಇಲ್ಲಿ ಕೇಳಿ.. ಇನ್ಮುಂದೆ 20% ಗ್ರೇಸ್ ಮಾರ್ಕ್ ಇರಲ್ಲ!
ಆಲ್ಪರ್ ಎಂಬ ಪೈಲಟ್ ವಿಮಾನವನ್ನು ಮುನ್ನಡೆಸುತ್ತಿದ್ದು, ಆದರೆ ಈ ವೇಳೆ ಏಕಾಏಕಿ ಹೃದಯಾಘಾತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಆತನ ಪತ್ನಿ ಯವೊನ್ನೆ ಕಿನಾನೆ-ವೆಲ್ಸ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ತುರ್ತು ಭೂಸ್ಪರ್ಶ ಮಾಡುತ್ತಾಳೆ. ಸುರಕ್ಷಿತವಾಗಿ ಲ್ಯಾಂಡ್ ಮಾಡುತ್ತಾಳೆ.
ಇದನ್ನೂ ಓದಿ: Traffic: ವಿಶ್ವದ ಅತ್ಯಂತ ಟ್ರಾಫಿಕ್ ಸಿಟಿ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ.. ಬೆಂಗಳೂರಿಗೆ ಎಷ್ಟನೇ ಸ್ಥಾನ?
ಕಿನಾನೆ ವೇಲ್ಸ್ ಕ್ಯಾಲಿಫೋರ್ನಿಯಾದ ಬೃಏಕರ್ಸ್ಫೀಲ್ಡ್ನಲ್ಲಿರುವ ಮೆಡೋಸ್ ಫೀಲ್ಡ್ ಏರ್ಪೋರ್ಟ್ನಲ್ಲಿ ಏರ್ಟ್ರಾಫಿಕ್ ಕಂಟ್ರೋಲ್ ಸಹಾಯದಿಂದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾಳೆ. ಕೊನೆಗೆ ಭೂಸ್ಪರ್ಶ ಮಾಡಿದ್ದಾಳೆ. ಆದರೆ ದುರಾದೃಷ್ಟ ಸಂಗತಿ ಎಂದರೆ ಆಕೆಯ ಪತಿ ಅಷ್ಟರಲ್ಲಿ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ