/newsfirstlive-kannada/media/post_attachments/wp-content/uploads/2025/02/10-HISTORICAL-BUILDINGS.jpg)
ದೇಶ ಸುತ್ತು ಇಲ್ಲವೇ ಕೋಶ ಓದು ಎಂಬ ಒಂದು ಗಾದೆ ಮಾತು ಇದೆ. ಮನುಷ್ಯನಾದವನು ಅಲೆಮಾರಿಯಾಗಬೇಕು ಎಂಬ ಮಾತು ಕೂಡ ಇದೆ. ಪ್ರವಾಸ ಮತ್ತು ಓದು ಇವು ಮನುಷ್ಯನ ಬದುಕಿನ ಸಂವೇದನೆಗಳನ್ನು ಸೂಕ್ಷ್ಮಗೊಳಿಸುತ್ತವೆ. ವೈಚಾರಿಕ ಪಕ್ವತೆಯನ್ನು ಬೆಳೆಸುತ್ತವೆ. ಹೀಗಾಗಿ ಮನುಷ್ಯ ಓದಬೇಕು ಇಲ್ಲವೇ ಅಲೆಮಾರಿಯಂತೆ ದೇಶ ವಿದೇಶಗಳನ್ನು ಸುತ್ತಬೇಕು. ಓದು ಮತ್ತು ಪ್ರವಾಸ ಎಲ್ಲ ಬದುಕಿನ ಎಲ್ಲ ಜಂಜಡಗಳಿಂದ ತಾತ್ಕಾಲಿಕ ಮುಕ್ತಿ ನೀಡುವ ದಾರಿಗಳು.
ಅಲೆಮಾರಿತನ ಅನ್ನುವುದು ಅನೇಕರು ತಮ್ಮ ರೂಢಿಯನ್ನಾಗಿಸಿಕೊಂಡಿರುತ್ತಾರೆ ಇನ್ನೂ ಕೆಲವರು ನಾನು ಕೂಡ ದೇಶ ಸುತ್ತಬೇಕು. ಇಡೀ ಭಾರತವನ್ನು ಒಮ್ಮೆ ದರ್ಶನ ಮಾಡಿಕೊಂಡು ಬರಬೇಕು ಎಂಬ ಹಂಬಲದಲ್ಲಿರುತ್ತಾರೆ. ಅಂತವರಿಗೆ ಒಂದು ಕಿವಿಮಾತು. ನೀವು ಭಾರತ ದರ್ಶನಕ್ಕೆ ಹೊರಟು ನಿಂತಿದ್ದೆ ಆದರೆ ನೀವು ಈ 10 ಐತಿಹಾಸಿಕ ಕಟ್ಟಡಗಳನ್ನು ನೋಡಲು ಮರೆಯಲೇಬೇಡಿ. ಕಾರಣ ಇವು ನಮ್ಮ ದೇಶದ ಪರಂಪರೆಯ, ಸಂಸ್ಕೃತಿಯ ಹಾಗೂ ಇತಿಹಾಸದ ಗುರುತಾಗಿ ಶತಮಾನಗಳ ಕಥೆಗಳನ್ನು ಹೇಳುತ್ತವೆ.
1. ತಾಜ್ ಮಹಲ್
ದೇಶ ಸುತ್ತಲು ಹೊರಟವನಲ್ಲಿ ಮೊದಲು ಮೊಳಕೆಯೊಡೆಯುವ ಆಸೆಯೇ ತಾಜ್ ಮಹಲ್ ನೋಡಬೇಕು ಎನ್ನುವುದು. ಜಗತ್ತಿನ ಏಳು ಅದ್ಬುತಗಳಲ್ಲಿ ತಾಜ್ಮಹಲ್ ಕೂಡ ಒಂದು. ಭಾರತದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿರುವ ತಾಜ್ ಮಹಲ್ನ್ನು ನೋಡಲು ಮರೆಯದಿರಿ. ಅದರ ಸೌಂದರ್ಯ ಹಾಗೂ ವಾಸ್ತುಶಿಲ್ಪ ನಿಮ್ಮನ್ನು ಮೂಕಮುಗ್ಧರನ್ನಾಗಿಸುತ್ತದೆ. 1648ರಲ್ಲಿ ಮೊಘಲ ಸಾಮ್ರಾಜ್ಯದ ದೊರೆ ಶಾ ಜಹಾನ್ ನಿರ್ಮಿಸಿರುವ ಶುದ್ದ ಮಾರ್ಬಲ್ನಲ್ಲಿ ಕಟ್ಟಿಸಿರುವ ಅದ್ಬುತ ಕಟ್ಟಡ ತಾಜ್ ಮಹಲ್.
2. ಹವಾ ಮಹಲ್ ಜೈಪುರ್
ಜೈಪುರ್ ಅಂದ್ರೆನೇ ಕೋಟೆಗಳ ನಾಡು. ಅಲ್ಲಿ ಆಳಿದ ರಜಪೂತ ರಾಜವಂಶದವರು ಒಂದಕ್ಕಿಂತ ಒಂದು ಅದ್ಭುತ ಎನಿಸುವ ಕೋಟೆಗಳನ್ನು ಕಟ್ಟಿದ್ದಾರೆ. ಮಹಲ್ಗಳನ್ನು ನಿರ್ಮಿಸಿದ್ದಾರೆ ಅದರಲ್ಲಿ ಹವಾ ಮಹಲ್ ಕೂಡ ಒಂದು. ಹವಾ ಮಹಲ್ ಅಂದ್ರೆ ತಂಪು ಗಾಳಿಯ ಅರಮನೆ ಎಂದರ್ಥ. ಭಾರತದ ಪಿಂಕ್ ಸಿಟಿ ಎಂತಲೇ ಕರೆಸಿಕೊಳ್ಳುವ ಜೈಪುರದಲ್ಲಿ ಇದು ಇದೆ. ಇಂಡೋ ಮೊಘಲ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿರುವ ಈ ಮಹಲ್ ರಾಜಸ್ಥಾನಿ ವಾಸ್ತುಶಿಲ್ಪದ ಸ್ಪರ್ಶವನ್ನು ಹೊಂದಿದೆ. 1799ರಲ್ಲಿ ಜೈಪುರ ಮಹಾರಾಜ ಪ್ರತಾಪ್ ಸಿಂಗ್ ನಿರ್ಮಿಸಿದ ಅತಿದೊಡ್ಡ ಪ್ಯಾಲೇಸ್ ಇದು. ಈ ಕಟ್ಟಡದಲ್ಲಿರುವ ಸಾವಿರಾರು ಸಂಕೀರ್ಣವಾದ ರಂಧ್ರಗಳು ನಮಗೆ ನೈಸರ್ಗಿಕವಾಗಿ ತಂಪು ಹವೆಯನ್ನು ಸಿಗುವಂತೆ ಮಾಡುತ್ತವೆ. ಅತ್ಯಂತ ಬಿಸಿಲ ನಾಡು ಎಂದು ಕರೆಸಿಕೊಳ್ಳುವ ಜೈಪುರದಲ್ಲಿ ನೈಸರ್ಗಿವಾಗಿ ಏರ್ಕೂಲರ್ನಿಂದ ಬರುವಂತಹ ಗಾಳಿಯು ನಮಗೆ ಈ ಅರಮನೆಯಲ್ಲಿ ಅನುಭವಕ್ಕೆ ಸಿಗುತ್ತದೆ. ಭಾರತ ಇತಿಹಾಸದಲ್ಲಿ ನಿರ್ಮಾಣವಾದ ಅತ್ಯಂತ ಭವ್ಯ ಬಂಗಲೆಗಳಲ್ಲಿ ಇದು ಕೂಡ ಒಂದು.
3. ಅಮೇರ್ ಕೋಟೆ ದೇವಸಿಂಗಾಫುರ
ಜೈಪುರದಿಂದ ಕೇವಲ 11 ಕಿಲೋ ಮೀಟರ್ ದೂರದಲ್ಲಿರುವ ಈ ಅಮೇರ್ ಕೋಟೆ ಕಚ್ವಾ ರಜಪೂರತರು ಕಟ್ಟಿಸಿದ್ದು. ಇದು ಒಂದು ಕಾಲದಲ್ಲಿ ರಜಪೂತ ಸಾಮ್ರಾಟರ ಶಕ್ತಿಕೇಂದ್ರವಾಗಿತ್ತು. ಅದು ಅಲ್ಲದೇ ಈ ಒಂದು ನಗರವನ್ನ ಮರೆತು ಹೋದ ರಾಜಧಾನಿ ಎಂತಲೂ ಕೂಡ ಕರೆಯಲಾಗುತ್ತದೆ. 400 ವರ್ಷದ ಹಿಂದೆ ಕಟ್ಟಲಾದ ಈ ದಿವ್ಯವಾದ ಕೋಟೆ ಕಡಿದಾದ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ. ಇದರ ಸುತ್ತಲೂ ಹಲವಾರು ಪ್ರಾಚೀನ ಐತಿಹಾಸಿಕ ಸ್ಟ್ರಕ್ಚರ್ಗಳು ನಮಗೆ ನೋಡಲು ಕಾಣಸಿಗುತ್ತವೆ. ಈ ಕೋಟೆಯಲ್ಲಿ ಕಂಬಗಳಲ್ಲಿ ಗಾಜಿನ ಕುಸರಿ ಕೆಲಸವನ್ನು ಮಾಡಲಾಗಿದ್ದು ಅದು ಕೂಡ 3ಡಿ ಕೆತ್ತನೆಗಳು ಅಲ್ಲಿರುವುದರಿಂದ ನಿಮ್ಮಲ್ಲಿ ಹಲವು ಭ್ರಮೆಗಳನ್ನು ಈ ಕಂಬಗಳು ಹುಟ್ಟಿಸುತ್ತವೆ.
4. ಚಾಂದ್ ಬವೋರಿ , ಅಭನೇರಿ
ಇದು ಕೂಡ ಆಗ್ರಾ ಮತ್ತು ಜೈಪುರ ನಡುವೆ ಸೃಷ್ಟಿಗೊಂಡಿರುವ ರಾಜಸ್ಥಾನದ ಅತ್ಯಂತ ಪುರಾತನ ವಾಸ್ತುಶಿಲ್ಪದ ಗುರುತು. ಇದರ ಪ್ರಮುಖ ಆಕರ್ಷಣೆಯೇ ಅದರ ಕಲಾತ್ಮಕತೆ ಹಾಗೂ ಕ್ರಿಯಾತ್ಮಕತೆಯ ನಡುವೆ ಇರುವ ಸಂಯೋಜನೆ. 9ನೇ ಶತಮಾನದಲ್ಲಿ ಬೂರಿ ಅಂದ್ರೆ ಬಾವಿ ಎಂದರ್ಥ, ಪಿರಾಮಿಡ್ ಶೈಲಿಯಲ್ಲಿ ಇಪತ್ತು ಮೀಟರ್ ಆಳದಲ್ಲಿ ಸುಮಾರು 3500 ಮೆಟ್ಟಿಲುಗಳನ್ನು ಹಂತ ಹಂತವಾಗಿ ಜೋಡಿಸಿ ನಿರ್ಮಿಸಲಾಗಿದೆ. ಇದನ್ನು ಮಳೆ ನೀರನ್ನು ಕೊಯ್ಲು ಮಾಡಲೆಂದೇ ಸೃಷ್ಟಿಸಲಾಗಿದ್ದು ಇಲ್ಲಿ ನೈಸರ್ಗಿಕವಾಗಿ ತಂಪಾದ ಹವೆ ನಮಗೆ ದೊರೆಯುತ್ತದೆ. ಇದರ ಒಳಗೆ ಇಳಿದರೆ ನಮಗೆ 5 ರಿಂದ 6 ಡಿಗ್ರಿ ಸೆಲ್ಸಿಯಸ್ ತಾಪಮಾನದ ಚಳಿಯ ಅನುಭವವಾಗುತ್ತದೆ. ನೀವು ಭಾರತ ಪ್ರವಾಸ ಮಾಡಬೇಕು ಎಂಬ ಉದ್ದೇಶವಿದ್ದಲ್ಲಿ ಈ ಚಾರ್ ಬವೋರಿಯನ್ನು ನೋಡು ಮಿಸ್ ಮಾಡಲೇಬೇಡಿ.
5. ತಾಜ್ ಲೇಕ್ ಪ್ಯಾಲೆಸ್, ಉದಯಪುರ್
ರಾಜಸ್ಥಾನದ ಅತ್ಯಂತ ಶ್ರೀಮಂತ ಕುಟುಂಬವಾದ ಮೇವಾಡ ಸಂಸ್ಥಾನದವರು ನಿರ್ಮಿಸಿದ ಪ್ಯಾಲೆಸ್ ಇದು. ಇದು ಪಿಚೋಲ ಸರೋವರದಲ್ಲಿ ತೇಲುವ ಅರಮನೆ. 18ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಉದಯಪುರವನ್ನು ಸರೋವರಗಳ ನಗರಿ ಎಂದೇ ಕರೆಯಲಗುತ್ತದೆ. ಇದನ್ನು ಸದ್ಯ ತಾಜ್ ಹೋಟೆಲ್ ಆಡಳಿತ ಮಂಡಳಿ ನಿರ್ವಹಣೆ ಮಾಡುತ್ತದೆ. ಈ ಒಂದು ಸ್ಥಳದಲ್ಲಿ ಅನೇಕ ಸಿನಿಮಾಗಳು ಚಿತ್ರೀಕರಣಗೊಂಡಿವೆ. 1983ರಲ್ಲಿ ಬಿಡುಗಡೆಯಾದ ಆಕ್ಟೊಪಸ್ಸಿ ಎಂಬ ಜೇಮ್ಸ್ ಬಾಂಡ್ ಸಿನಿಮಾವನ್ನು ಕೂಡ ಈ ತಾಜ್ಲೇಕ್ ಪ್ಯಾಲೇಸ್ನಲ್ಲಿ ಚಿತ್ರೀಕರಿಸಲಾಗಿತ್ತು.
6. ಕುತುಬ್ ಮಿನಾರ್, ದೆಹಲಿ
ದೆಹಲಿಯಲ್ಲಿರುವ ಸುಮಾರು 73 ಮೀಟರ್ ಉದ್ದದ ಕುತುಬ್ ಮೀನಾರ್ ಜಗತ್ತಿನ ಅತ್ಯಂತ ಉದ್ದದ ಇಟ್ಟಿಗೆಯ ಸ್ತಂಭವಾಗಿದೆ. ಇದನ್ನು ಸುಮಾರು 1193ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಒಂದು ಸ್ಥಂಭ ಪ್ರವಾಸಿಗರ ಆಕರ್ಷಕ ತಾಣ. ಇದು ಭಾರತದಲ್ಲಿನ ಇಸ್ಲಾಮಿಕ್ ವಾಸ್ತುಶಿಲ್ಪದ ಶೈಲಿಯಲ್ಲಿ ಭಾರತದ ಉಪಖಂಡದಲ್ಲಿ ನಿರ್ಮಾಣಗೊಂಡ ಅತಿದೊಡ್ಡ ಮೊಟ್ಟಮೊದ ಸ್ಮಾರಕ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಹಲವು ವಿವಾದಗಳು ಕೂಡ ಇವೆ. ಇದು ಹಿಂದೂ ರಾಜರಿಂದ ನಿರ್ಮಾಣವಾಗಿದ್ದು ಮತ್ತು ಇಲ್ಲಿ ಅದರ ಬಗ್ಗೆ ಅನೇಕ ಉಲ್ಲೇಖಗಳು ಕೂಡ ಇವೆ ಎಂದು ಹೇಳಲಾಗುತ್ತದೆ ಇದರ ಹೊರತಾಗಿಯೂ ಪ್ರವಾಸಿಗರು ನೋಡಲೇಬೇಕಾದ ಒಂದು ಸ್ಥಳ ಕುತುಬ್ ಮಿನಾರ್.
7 ಇಂಡಿಯಾ ಗೇಟ್, ನವದೆಹಲಿ
ರಾಷ್ಟ್ರಪತಿ ಭವನದ ಕೊನೆಯಲ್ಲಿ ನಿಂತುಕೊಂಡಿರುವ ಈ ಭವ್ಯ ಕಟ್ಟಡವನ್ನು ಇಂಡಿಯಾ ಗೇಟ್ ಎಂದು ಕರೆಯಲಾಗುತ್ತದೆ. ಇಂಡಿಯಾ ಗೇಟ್ ಒಂದು ಯುದ್ಧ ಸ್ಮಾರಕ. ಯುರೋಪಿಯನ್ ಶೈಲಿಯಲ್ಲಿ ಇದ್ದನ್ನು 1921 ಮತ್ತು 1931ರ ನಡುವೆ ನಿರ್ಮಿಸಲಾಗಿದೆ. ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ನೇನ್ಸ್ ಎಂಬುವವರು ಇದನ್ನು ನಿರ್ಮಿಸಿದರು ಎಂದು ಹೇಳಲಾಗಿದೆ.
8. ಗೋಲ್ಡನ್ ಟೆಂಪಲ್, ಅಮೃತಸರ್
ಪಂಜಾಬ್ ಅಂದ ತಕ್ಷಣ ನಮಗೆ ಥಟ್ಟ ಅಂತ ನೆನಪಾಗೋದೆ ಅಮೃತಸರ್ನಲ್ಲಿರುವ ಬಂಗಾರದ ಗುಡಿ ಅಥವಾ ಗೋಲ್ಡನ್ ಟೆಂಪಲ್. ಗೋಲ್ಡನ್ ಟೆಂಪಲ್ನ್ನು ಸಿಖ್ರ ಅತ್ಯಂತ ಪವಿತ್ರಕ್ಷೇತ್ರವೆಂದೇ ಗುರುತಿಸಲಾಗುತ್ತದೆ. ಇದನ್ನು ಇಂಡೋ ಇಸ್ಲಾಮಿಕ್ ಮತ್ತು ರಜಪೂತ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಒಂದು ಮಂದಿರವನ್ನು ಸುಮಾರು 1581ನೇ ಇಸ್ವಿಯಲ್ಲಿ ನಿರ್ಮಿಸಲಾಗಿದೆ. ಮಾನವನಿರ್ಮಿತ ಸರೋವರದ ಮಧ್ಯೆ ಈ ಮಂದಿರವು ನೆಲೆಗೊಂಡಿದ್ದು. ಇದನ್ನು 1830ರಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ದೇವಾಲಯದ ಗೋಡೆಗಳಿಗೆ ಬಂಗಾರದ ಲೇಪನ ಮಾಡಿದ ಎಂದು ಹೇಳಲಾಗುತ್ತದೆ. ಭಾರತ ಪ್ರವಾಸ ಕೈಗೊಳ್ಳುವವರು ಈ ಮಂದಿರವನ್ನು ತಪ್ಪದೇ ನೋಡಲೇಬೇಕು.
9. ಕೊನಾರ್ಕ್ ಸೂರ್ಯ ದೇವಾಲಯ, ಪುರಿ
ಓಡಿಶಾ ರಾಜ್ಯದಲ್ಲಿ ನೆಲೆಗೊಂಡಿರುವ ಕೊನಾರ್ಕ್ ಸೂರ್ಯನಾರಯಣ ಮಂದಿರ ಜಗತ್ತಿನ ಅತಿವಿಸ್ಮಯ ದೇವಾಲಯಗಳಲ್ಲಿ ಒಂದು ಎಂದು ಹೇಳಲಗುತ್ತದೆ. ಇಲ್ಲಿ ಬಳಸಿರುವ ವಾಸ್ತುಶಿಲ್ಪದ ಶೈಲಿಗೆ ನಮಗೆ ಬೇರೊಂದು ಹಿಂದೂ ದೇವಸ್ಥಾನದಲ್ಲಿ ಕಾಣಸಿಗುವುದಿಲ್ಲ. ಇದು ಸೂರ್ಯ ದೇವನಿಗೆ ಅರ್ಪಿತವಾಗಿರುವ ದೇವಾಲಯವಾಗಿದ್ದು. ಇಲ್ಲಿರುವ ಬೃಹತ್ ಕಲ್ಲಿನ ರಥದಲ್ಲಿ 24 ರೀತಿಯ ಹಲವು ಬಗೆಯ ಕೆತ್ತನೆಗಳಿರುವ ಒಂದು ಕಲ್ಲಿನ ಚಕ್ರ ಹಾಗೂ ಏಳು ಬೃಹತ್ ಕುದುರೆಗಳ ಕೆತ್ತನೆಯು ಕಂಡು ಬರುತ್ತದೆ.
10 ತಾಜ್ ಮಹಲ್ ಪ್ಯಾಲೆಸ್, ಮುಂಬೈ
ಅರಬಿಸಮುದ್ರದ ತಟದಲ್ಲಿ ನಿಂತಿರುವ ತಾಜ್ಮಹಲ್ ಪ್ಯಾಲೆಸ್ ಇಲ್ಲವೇ ಹೋಟೆಲ್ ತಾಜ್ ನೋಡಲು ನಮಗೆ ಎರಡು ಕಣ್ಣು ಸಾಲುವುದಿಲ್ಲ 1903ರಲ್ಲಿ ನಿರ್ಮಾಣವಾದ ಈ ಕಟ್ಟಡವು ಡಬ್ಲ್ಯೂ ಎ ಚಂಬೇರ್ಸ್ ಎಂಬುವವರು ವಿನ್ಯಾಸ ಮಾಡಿ ನಿರ್ಮಿಸಿದ್ದಾರೆ. 240 ಅಡಿ ಎತ್ತರದ ಮೇಲೆ ಗುಮ್ಮಟಾಕೃತಿ ನಿರ್ಮಿಸಿ ಅತಿವಿಶಿಷ್ಟವಾಗಿ ಇದನ್ನು ಕಟ್ಟಲಾಗಿದೆ. ಈ ಗುಮ್ಮಟ ಇಂದಿಗೂ ಕೂಡ ಭಾರತೀಯ ನೌಕ ಹಡುಗುಗಳಿಗೆ ನೇವಿಗೇಷನ್ ಪಾಯಿಂಟ್ ಆಗಿ ಸಹಾಯಕವಾಗಿ ನಿಂತಿದೆ.
2008 ನವೆಂಬರ್ 26 ರಂದು ಈ ಕಟ್ಟದ ಮೇಲೆ ಉಗ್ರರು ದಾಳಿ ನಡೆಸಿದ್ದು. ಇಂತಹ ಕರಾಳ ಅಧ್ಯಾವನ್ನು ಕೂಡ ಈ ತಾಜ್ ಹೋಟೆಲ್ ಹೊಂದಿದೆ. ಇನ್ನು ಇದರ ಎದುರಿಗೆ ಮತ್ತೊಂದು ಅದ್ಬುತ ಕಟ್ಟಡ ಗೇಟ್ ವೇ ಆಫ್ ಇಂಡಿಯಾ ಇದ್ದು ಇಲ್ಲಿ ಹೋದರೆ ಹೋಟೆಲ್ ತಾಜ್ ಹಾಗೂ ಗೇಟ್ ವೇ ಆಫ್ ಇಂಡಿಯಾ ಎರಡನ್ನು ನೋಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ