Advertisment

30 ಕೋಟಿ ಗಳಿಸಿದ ಬೋಟ್​ಮ್ಯಾನ್ ಕಥೆಗೆ ಹೊಸ ಟ್ವಿಸ್ಟ್‌; ಸಾಧಕನ ಮೇಲೆ 20 ಕ್ರಿಮಿನಲ್ ಕೇಸ್​!

author-image
Gopal Kulkarni
Updated On
30 ಕೋಟಿ ಗಳಿಸಿದ ಬೋಟ್​ಮ್ಯಾನ್ ಕಥೆಗೆ ಹೊಸ ಟ್ವಿಸ್ಟ್‌; ಸಾಧಕನ ಮೇಲೆ 20 ಕ್ರಿಮಿನಲ್ ಕೇಸ್​!
Advertisment
  • ಮಹಾಕುಂಭಮೇಳದಲ್ಲಿ 45 ದಿನಗಳಲ್ಲಿ 30 ಕೋಟಿ ಗಳಿಸಿದ್ದ ಬೋಟ್​ಮ್ಯಾನ್
  • ಕೋಟಿ ಗಳಿಸಿದ ಪಿಂಟು ಈ ಹಿಂದೆ ಮೊಸ್ಟ್​ ವಾಟೆಂಡ್ ಕ್ರಿಮಿನಲ್ ಆಗಿದ್ದನಾ?
  • ನೈನಿ ಠಾಣೆಯ ಪೊಲೀಸರು ಪಿಂಟು ಮಹರಾ ಬಗೆಗಿನ ಬಿಚ್ಚಿಟ್ಟಿ ಇತಿಹಾಸವೇನು?

ಮಹಾಕುಂಭಮೇಳದಲ್ಲಿ ಪಿಂಟು ಮಹರಾ ಎಂಬ ಬೋಟ್​​ಮ್ಯಾನ್​ ದೊಡ್ಡ ಸುದ್ದಿ ಮಾಡಿದ್ದ. ಮನೆಯಲ್ಲಿರುವ ಚಿನ್ನಾಭರಣ ಹಾಗೂ ತಾಯಿಯ ಕೊರಳಲ್ಲಿರುವ ಚಿನ್ನಾಭರಣ ಮಾರಿ ನೂರು ಬೋಟ್​ಗಳಿಂದ ಸುಮಾರು 45 ದಿನಗಳ ಕುಂಭಮೇಳದಲ್ಲಿ ಭಕ್ತರಿಗೆ ದೋಣಿ ಸವಾರಿ ಸೇವೆ ನೀಡಿ ಸುಮಾರು 30 ಕೋಟಿ ರೂಪಾಯಿ ದುಡಿದಿದ್ದು ದೊಡ್ಡ ಸುದ್ದಿಯಾಗಿತ್ತು. ಈತನ ಈ ಶ್ರಮದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥರು ಕೂಡ ಆತನನ್ನು ಹಾಡಿ ಹೊಗಳಿದ್ದರು. ಆದ್ರೆ ಯೋಗಿ ಆದಿತ್ಯನಾಥರ ಹೊಗಳಿಕೆಯೇ ಈಗ ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದೆ. ಕಾರಣ ಪಿಂಟು ಮಹರಾನ ಮೇಲೆ ಈ ಹಿಂದೆ 20 ಕ್ರಿಮಿನಲ್ ಕೇಸ್​ಗಳಿದ್ದವಂತೆ .

Advertisment

ನೈನಿ ಪೊಲೀಸರು ಹೇಳುವ ಪ್ರಕಾರ ಮಹರಾ ಮೇಲೆ ಡಬಲ್ ಮರ್ಡರ್ ಕೇಸ್​ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವಂತೆ. ಕೊಲೆ, ಸುಲಿಗೆ ಸೇರಿ ಡಜನ್​ಗೂ ಹೆಚ್ಚು ಪ್ರಕರಣಗಳು ಆತನ ಮೇಲೆ ದಾಖಲಾಗಿದ್ದವು ಎಂದು ನೈನಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಒಂದು ನಾವಿಕನ ಕುಟುಂಬ 30 ಕೋಟಿ ಆದಾಯ ಗಳಿಸಿದೆ; ಕುಂಭಮೇಳದ ಸಕ್ಸಸ್ ಸ್ಟೋರಿ ಹೇಳಿದ ಯೋಗಿ..!

publive-image

ಪಿಂಟು ಮಹರಾ ಹಿಸ್ಟರಿ ಶೀಟರ್ ಈ ಹಿಂದೆ ಅನೇಕ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ ಮತ್ತು ಸದ್ಯ ಜಾಮೀನಿನ ಮೇಲೆ ಆಚೆ ಇದ್ದಾನೆ ಎಂದು ನೈನಿ ಪೊಲೀಸರು ಹೇಳಿದ್ದಾರೆ. ಈಗಾಗಲೇ ಹೇಳಿದಂತೆ ಡಜನ್​ಗೂ ಹೆಚ್ಚು ಕೇಸ್​ಗಳು ಪಿಂಟು ಮೇಲೆ ಇವೆ. ಅದರಲ್ಲೂ ಅತ್ಯಂತ ಕ್ರೂರ ಅಪರಾಧಗಳನ್ನು ನಡೆಸಿರುವ ರಿಆರೋಪವಿದೆ. ಕೇವಲ ನೈನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರವಲ್ಲ. ಇತ್ತೀಚೆಗೆ ಅಂದ್ರೆ ಫೆಬ್ರವರಿ 11 ರಲ್ಲಿ ಅನೇಕ ಜನರು ಪಿಂಟು ಮಹರಾ ಸುಲಿಗೆ ಮಾಡುತ್ತಿದ್ದಾನೆ ಎಂದು ಪೊಲೀಸರಿಂದ ರಕ್ಷಣೆಗೆ ಮೊರೆ ಹೋಗಿದ್ದರು ಎಂದು ಕೂಡ ತಿಳಿದು ಬಂದಿದೆ.

Advertisment

ಇದನ್ನೂ ಓದಿ:ದೇಶದ ಈ ಕಾಲೇಜಿನಿಂದಲೇ ಅತಿ ಹೆಚ್ಚು IAS ಅಧಿಕಾರಿಗಳು ಆಗೋದು.. ಭಾರತದಲ್ಲಿ ಅದು ಎಲ್ಲಿದೆ?

2009ರಲ್ಲಿ ಒಂದು ಡಬಲ್ ಮರ್ಡರ್ ಕೇಸ್​ನಲ್ಲಿ ಪಿಂಟು ಮಹರಾ ಮತ್ತು ಆತನ ಹೋದರ ಅರವಿಂದ್ ಮಹರಾರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. 2017ರಲ್ಲಿ ನಡೆದ ಒಂದು ಕೊಲೆ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ಮತ್ತೊಮ್ಮೆ ಬಂಧಿಸಲಾಗಿತ್ತು.

publive-image

ಈತನ ತಂದೆಯೂ ಕೂಡ ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಬಂಧಿತನಾಗಿದ್ದು ಜೈಲಿನಲ್ಲಿಯೇ ಮೃತಪಟ್ಟ ಎಂಬ ವರದಿಗಳು ಕೂಡ ಆಗಿವೆ. ನೈನಿ ಠಾಣೆಯ ಹಿಸ್ಟರಿ ಶೀಟರ್ ಆಗಿರುವ ಈತನ ಸಹೋದರ ಎರಡು ವರ್ಷಗಳ ಹಿಂದೆ ಕೊಲೆಯಾಗಿ ಹೋಗಿದ್ದ ಎಂದು ಪೊಲೀಸ್ ಅಧಿಕಾರಿಗಳೊಬ್ಬರು ಹೇಳಿದ್ದಾರೆ

Advertisment

ಆದರೆ ಪಿಂಟು ಮಹರಾ ಕುಟುಂಬ ಈ ಹಿಂದೆ 2019ರಲ್ಲಿ ನಡೆದ ಮಹಾಕುಂಭದಲ್ಲಿಯೂ ಕೂಡ 130 ಹಡಗುಗಳಿಂದು ಭಕ್ತರಿಗೆ ಬೊಟ್​ಯಾನದ ಸೇವೆಯನ್ನು ನೀಡಿತ್ತು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment