‘ತಂಡೇಲ್’ ತಂಡಕ್ಕೆ ಬಿಗ್​ ಶಾಕ್; ರಿಲೀಸ್​ ಆದ 2 ದಿನಕ್ಕೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರದರ್ಶನ!

author-image
Veena Gangani
Updated On
‘ತಂಡೇಲ್’ ತಂಡಕ್ಕೆ ಬಿಗ್​ ಶಾಕ್; ರಿಲೀಸ್​ ಆದ 2 ದಿನಕ್ಕೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರದರ್ಶನ!
Advertisment
  • ರಿಲೀಸ್​ ಆದ ಮೊದಲ ದಿನವೇ ಬಾಕ್ಸ್ ಆಫೀಸ್ ರೆಕಾರ್ಡ್
  • ಫೆಬ್ರವರಿ 7ರಂದು ಬಿಡುಗಡೆಯಾಗಿದ್ದ ತಂಡೇಲ್ ಸಿನಿಮಾ
  • ಪ್ರೇಕ್ಷಕರನ್ನು ಸೆಳೆದಿದ್ದ ಸಿನಿಮಾ ತಂಡೇಲ್ ಲೀಕ್ ಆಗಿದ್ದು ಹೇಗೆ?

ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಂಡೇಲ್’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಫೆಬ್ರವರಿ 7 ರಂದು ಬಿಡುಗಡೆಯಾದ ತಂಡೇಲ್ ಮೊದಲ ದಿನವೇ 21.27 ಕೋಟಿ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ರೆಕಾರ್ಡ್ ಸೃಷ್ಟಿಸಿತ್ತು. ಭಾರತದಾದ್ಯಂತ ಭರ್ಜರಿ ಪ್ರೇಕ್ಷಕರನ್ನು ಸೆಳೆದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ರಮ್ಯಾ ಬಳಿ ಪ್ರೀತಿಯ ಮಗಳಿಗಾಗಿ ದುನಿಯಾ ವಿಜಿ ಕೇಳಿಕೊಂಡಿದ್ದು ಏನು ಗೊತ್ತಾ..? Video

ಆದ್ರೆ, ಬಿಡುಗಡೆಯಾದ 2 ದಿನಕ್ಕೆ ತಂಡೇಲ್ ಸಿನಿಮಾ ತಂಡಕ್ಕೆ ಬಿಗ್​ ಶಾಕ್​ ಒಂದು ಎದುರಾಗಿದೆ. ಹೌದು, ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತಂಡೇಲ್ ಸಿನಿಮಾ ಇದೇ ಶುಕ್ರವಾರದಂದು (ಫೆ 7) ತೆರೆಗೆ ಬಂದಿತ್ತು. ಮೀನುಗಾರನ ಪ್ರೇಮ ಹಾಗೂ ದೇಶಭಕ್ತಿಯ ಕಥೆ ಹೊಂದಿರುವ ಈ ಸಿನಿಮಾವನ್ನು ನಿರ್ದೇಶಕ ಚಂದು ಮೊಂಡೆಟಿ ನಿರ್ಮಿಸಿದ್ದರು.


">February 10, 2025

ಸಿನಿಮಾ ರಿಲೀಸ್​ 5ನೇ ದಿನಕ್ಕೆ ತಂಡೇಲ್ ಸಿನಿಮಾವನ್ನು ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರದರ್ಶನ ನೀಡಿದ್ದಾರೆ. ಹೌದು, ಆಂಧ್ರ ಪ್ರದೇಶದ APSRTC ಸರ್ಕಾರಿ ಬಸ್‌ನಲ್ಲಿ ಸ್ಟ್ರೀಮ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಎಪಿಎಸ್‌ಆರ್‌ಟಿಸಿ ಅಧ್ಯಕ್ಷ ಕೆ ನಾರಾಯಣ ರಾವ್, ಕಾರ್ಪೊರೇಷನ್ ಬಸ್‌ನಲ್ಲಿ ಸಿನಿಮಾ ಪ್ರದರ್ಶಿಸಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಅನುಮತಿ ಇಲ್ಲದೇ ತಂಡೇಲ್ ಸಿನಿಮಾ ಯಾರಾದರೂ ಪ್ರಸಾರ ಮಾಡಿದರೆ ಅಥವಾ ವೀಕ್ಷಿಸಿದರೆ ಅವರ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ಮಾಪಕ ಬನ್ನಿ ವಾಸ್ ಅವರು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment