/newsfirstlive-kannada/media/post_attachments/wp-content/uploads/2025/05/ksca-eletion-2.jpg)
ಇಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ಉಪಾಧ್ಯಕ್ಷ ಚುನಾವಣೆಯಲ್ಲಿ ಕೆಎಸ್​ಸಿಎ ಪಿಚ್​ ಕ್ಯೂರೇಟರ್​​​ ಕೆ.ಶ್ರೀರಾಮ್​ ಗೆಲುವು ಸಾಧಿಸಿದ್ದಾರೆ. ಉಮಾ ಮಹೇಶ್ವರ್​​ ವಿರುದ್ಧ 327 ಮತಗಳ ಅಂತರದಲ್ಲಿ ಶ್ರೀರಾಮ್​ ಜಯಗಳಿಸಿದ್ದಾರೆ. ಮುಂದಿನ 5ರಿಂದ 6 ತಿಂಗಳ ಅವಧಿಗೆ ಶ್ರೀರಾಮ್​ ಉಪಾಧ್ಯಕ್ಷ ಸ್ಥಾನದಲ್ಲಿರಲಿದ್ದಾರೆ. ಬಿ.ಕೆ ಸಂಪತ್​ ಕುಮಾರ್​​ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
/newsfirstlive-kannada/media/post_attachments/wp-content/uploads/2025/05/ksca-eletion.jpg)
ಚುನಾವಣೆಯಲ್ಲಿ ಒಟ್ಟು 705 ಮತಗಳು ಚಲಾವಣೆಯಾಗಿತ್ತು. ಈ ಪೈಕಿ ಕೆ. ಶ್ರೀರಾಮ್​​ 516 ಮತ ಪಡೆದುಕೊಂಡ್ರೆ, ಉಮಾ ಮಹೇಶ್ವರ್​​ 189 ಮತ ಪಡೆದುಕೊಂಡರು. ಉಮಾ ಮಹೇಶ್ವರ್​​ ಏಕಾಂಗಿಯಾಗಿ 189 ಮತಗಳನ್ನ ಪಡೆದುಕೊಂಡ ಬೆನ್ನಲ್ಲೇ, ಇದು ನವೆಂಬರ್​ನಲ್ಲಿ ನಡೆಯೋ ಮುಖ್ಯ ಚುನಾವಣೆಯ ಟ್ರೆಂಡ್​ ಸೆಟ್​ ಮಾಡಿದೆ ಎಂದು ಕೆಎಸ್​​​ಸಿಎ ವಲಯದಲ್ಲಿ ಚರ್ಚೆ ನಡೀತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us