newsfirstkannada.com

×

ಇಂದಿನಿಂದ ಪಿತೃಪಕ್ಷ, ಪೂರ್ವಜರಿಗೆ ನಮನ ಸಲ್ಲಿಸಲು ನೇಮ ನಿಷ್ಠೆಗಳೇನು?

Share :

Published September 17, 2024 at 8:48am

    ಇಂದಿನಿಂದ ಶುರುವಾಗಲಿರುವ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗಲಿದೆ

    ಪಿತೃಪಕ್ಷದ ಸಮಯ, ಮಹತ್ವಗಳೇನು. ಪೂರ್ವಜರಿಗೆ ನಮನ ಸಲ್ಲಿಸವುದು ಹೇಗೆ?

    ಪಿತೃಪಕ್ಷಕ್ಕೂ ಮಹಾಭಾರತದ ಕರ್ಣನಿಗೂ ಇದೆ ಒಂದು ಸಂಬಂಧ, ಏನದು ಗೊತ್ತಾ?

ಹಿಂದೂ ಕ್ಯಾಲೆಂಡರ್ ಅನ್ವಯ 16 ದಿನಗಳ ಕಾಲ ಪೂರ್ವಜರಿಗೆ ಗೌರವ ಹಾಗೂ ಅಶ್ರುತರ್ಪಣ ಸಲ್ಲಿಸುವ ಪ್ರಮುಖ ಪಕ್ಷವಾದ ಪಿತೃಪಕ್ಷ ಇಂದಿನಿಂದ ಆರಂಭಗೊಂಡಿದೆ. ಈ 16 ದಿನಗಳ ಸಮಯದಲ್ಲಿ ಮನೆಯ ಪೂರ್ವಜರಿಗೆ ಶ್ರಾದ್ಧ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಹಾಗೂ ಮನೆತನದ ಮೇಲೆ ಅವರ ಆಶೀರ್ವಾದ ಇರುವಂತೆ ಕೋರಿಕೊಳ್ಳಲಾಗುತ್ತದೆ.

2024ರ ಪಿತೃಪಕ್ಷ ಇಂದಿನಿಂದ ಆರಂಭವಾಗಿ ಅಕ್ಟೋಬರ್ 2ಕ್ಕೆ ಮುಗಿಯುತ್ತದೆ. ಇದನ್ನು ಸರ್ವಪಿತೃ ಅಮವಾಸೆ ಹಾಗೂ ಮಹಾಲಯ ಅಮವಾಸೆ ಎಂದೂ ಕೂಡ ಕರೆಯಲಾಗುತ್ತದೆ.

ಪಿತೃಪಕ್ಷದ 2024ರ ದಿನಾಂಕ ಮತ್ತು ಸಮಯ ಹೇಗಿದೆ ಅನ್ನೋದನ್ನ ನೋಡುವುದಾದ್ರೆ

ಪ್ರತಿಪಾದ ತಿಥಿ ಆರಂಭ ಮತ್ತು ಮುಕ್ತಾಯ

  • 2024ರ ಪಿತೃಪಕ್ಷದ ಪ್ರತಿಪಾದ ತಿಥಿ 2024 18 ರಂದು ಬೆಳಗ್ಗೆ 8.04 ರಿಂದ ಆರಂಭವಾಗಲಿದೆ ಎಂದೂ ಹಿಂದೂ ಕ್ಯಾಲೆಂಡರ್​ಗಳು ಹೇಳುತ್ತಿವೆ
  • ಅದೇ ರೀತಿ ಸೆಪ್ಟಂಬರ್ 19 ಮುಂಜಾನೆ 4.19ಕ್ಕೆ ಪ್ರತಿಪಾದ ತಿಥಿ ಮುಕ್ತಾಯಗೊಳ್ಳಲಿದೆ
  • ಕುತುಪ ಮುಹೂರ್ತ: ಇನ್ನು ಕುತುಪ ಮುಹೂರ್ತ ಬೆಳಗ್ಗೆ 11:16 ರಿಂದ ಆರಂಭವಾಗಿ ಮಧ್ಯಾಹ್ನ 12.05ರವರೆಗೆ ಇರಲಿದೆ.
  • ರೌಹಿನ್ ಮುಹೂರ್ತ: ಮಧ್ಯಾಹ್ನ 12.05 ರಿಂದ 12.54ರವರೆಗೆ ಇರಲಿದೆ
  • ಅಪರಾಹ್ನ ಕಾಲ: ಮಧ್ಯಾಹ್ನ 12.54 ರಿಂದ ಮಧ್ಯಾಹ್ನ 3.20ರವರೆಗೆ ಇರಲಿದೆ

ಜನರು ಅಗಲಿ ಹೋದ ತಮ್ಮ ಪೂರ್ವಜರನ್ನು ನೆನೆಯುವ ಹಾಗೂ ಅವರಿಗೆ ಗೌರವ ಸಲ್ಲಿಸುವ ಪ್ರಕ್ರಿಯೆಯೇ ಈ ಪಿತೃಪಕ್ಷವಾಗಿದೆ. ತರ್ಪಣ, ಪಿಂಡದಾನ, ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ, ಬಡವರಿಗೆ ದಾನ ನೀಡುವುದು ಸೇರಿ ಹಲವು ಪುಣ್ಯ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಈ ಸಮಯದಲ್ಲಿ ಜನರು ಮದುವೆ ಮುಂಜಿವೆಯಂತಹ ಶುಭ ಸಮಾರಂಭಗಳಿಗೆ ಹೋಗುವುದರಿಂದ ದೂರ ಇರುತ್ತಾರೆ. ಅದು ಮಾತ್ರವಲ್ಲದೇ ಈ ಸಮಯದಲ್ಲಿ ಅಂತಹ ಶುಭಕಾರ್ಯಗಳಿಗೆ ಮುಹೂರ್ತವೂ ಕೂಡ ಇರುವುದಿಲ್ಲ.

ಪಿತೃಪಕ್ಷದ ಪೌರಾಣಿಕ ಹಿನ್ನೆಲೆ ಏನು?
ಹಿಂದೂಗಳು ಆಚರಿಸುವ ಈ ಪಿತೃಪಕ್ಷಕ್ಕೆ ಅನೇಕ ಪೌರಾಣಿಕ ಹಿನ್ನೆಲೆಗಳಿವೆ. ಇದಕ್ಕೂ ಮಹಾಭಾರತಕ್ಕೂ ಒಂದು ನಂಟಿದೆ. ಮಹಾಭಾರತದ ಯುದ್ಧದ ನಂತರ ಕರ್ಣನ ಆತ್ಮಕ್ಕೆ ಸಕಲ ಮರ್ಯಾದೆಗಳು ಸಿಗುತ್ತವೆ. ಎಲ್ಲ ರೀತಿಯ ಐಶ್ವರ್ಯಗಳು ದೊರೆಯುತ್ತವೆ ಆದ್ರೆ ದಾನಶೂರ ಕರ್ಣನಿಗೆ ತಿನ್ನಲು ಊಟ ಮಾತ್ರ ಸಿಗುವುದಿಲ್ಲ. ಇದರ ಬಗ್ಗೆ ಆತನು ಪ್ರಶ್ನಿಸಿದಾಗ, ನೀನು ಭೂಮಿಯಲ್ಲಿರುವಾಗ ಅನೇಕ ರೀತಿಯ ದಾನದರ್ಮಗಳನ್ನು ಮಾಡಿದ್ದೀಯಾ. ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳನ್ನಷ್ಟೇ ಏಕೆ ನೀನು ನಿನ್ನ ಕವಚ, ಕರ್ಣ ಕುಂಡಲಗಳನ್ನೇ ತೆಗೆದು ನೀನು ದಾನ ಮಾಡಿದ್ದೀಯಾ. ಆದ್ರೆ ನಿನ್ನ ದಾನದಲ್ಲಿ ಎಂದಿಗೂ ಯಾರಿಗೂ ನೀನು ಅನ್ನದಾನವನ್ನು ಮಾಡಲಿಲ್ಲ. ನಿನ್ನ ಪೂರ್ವಜರು ಅನ್ನ ಸಂತರ್ಪಣೆಯನ್ನೇ ಕಾಣಲಿಲ್ಲ ಹೀಗಾಗಿಯೇ ನಿನಗೆ ಈ ದುಸ್ಥಿತಿ ಬಂದಿದೆ ಎಂದು ಹೇಳಲಾಗುತ್ತದೆ. ಇದರಿಂದ ಭಗವಂತನಲ್ಲಿ ಮತ್ತೆ ಭೂಮಿಗೆ ಕಳುಹಿಸುವಂತೆ ಅನುಮತಿ ಕೋರುತ್ತಾನೆ ಕರ್ಣ. ಅದರ ಪ್ರಕಾರವಾಗಿ ಭೂಮಿಗೆ ಬಂದು ತನ್ನ ಪೂರ್ವಜರಿಗೆ ಪಿಂಡ ಪ್ರಧಾನ ಮಾಡಿ ಶ್ರಾದ್ಧ ಸಲ್ಲಿಸಿ ಹೊರಡುತ್ತಾನೆ ಕರ್ಣ. ಅಂದಿನಿಂದ ಇಂದಿನವರೆಗೂ ಈ ಒಂದು ಪದ್ಧತಿ ನಡೆದುಕೊಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಪಿತೃಪಕ್ಷ, ಪೂರ್ವಜರಿಗೆ ನಮನ ಸಲ್ಲಿಸಲು ನೇಮ ನಿಷ್ಠೆಗಳೇನು?

https://newsfirstlive.com/wp-content/uploads/2024/09/PITRU-PAKSHA-STARTED.jpg

Load More