/newsfirstlive-kannada/media/post_attachments/wp-content/uploads/2025/02/NO-SUNSET.jpg)
ಇಂಗ್ಲೆಂಡ್ನ್ನು ನಾವು ಸೂರ್ಯ ಮುಳುಗದ ನಾಡು ಎಂದು ಕರೆಯುತ್ತೇವೆ. ಏಕೆಂದರೆ ಜಗತ್ತಿನ ಬಹುತೇಕ ದೇಶಗಳ ಮೇಲೆ ಒಂದು ಕಾಲದಲ್ಲಿ ಬ್ರಿಟನ್ ತನ್ನ ಹಿಡಿತವನ್ನು ಸಾಧಿಸಿತ್ತು. ತನ್ನದೇ ಆಡಳಿತ ನಡೆಸಿತ್ತು. ಇಂಗ್ಲೆಂಡ್ನ ವಸಾತುಶಾಹಿಯ ಮುಕ್ತಿಗಾಗಿ ದೊಡ್ಡ ದೊಡ್ಡ ಸ್ವಾತಂತ್ರ್ಯ ಹೋರಾಟಗಳೇ ನಡೆದಿದ್ದವು. ಹೀಗಾಗಿ ಇದನ್ನು ಸೂರ್ಯ ಮುಳುಗದ ನಾಡು ಎಂದು ಕರೆಯಲಾಗಿತ್ತು. ಆದ್ರೆ ಇಂಗ್ಲೆಂಡ್ನಲ್ಲಿ ಸೂರ್ಯ ಮುಳುಗುತ್ತಾನೆ. ಅಲ್ಲಿ ನಿತ್ಯವು ಬೆಳಗು ಹಾಗೂ ಸಂಜೆಗಳ ದರ್ಶನವಾಗುತ್ತದೆ. ಆದ್ರೆ ಸೂರ್ಯ ಮುಳುಗದೇ ತಿಂಗಳುಗಟ್ಟಲೇ ರಾತ್ರಿಯನ್ನೇ ಕಾಣದ ಒಂದು ದೇಶಗಳು ಈ ಪ್ರಪಂಚದಲ್ಲಿವೆ. ಇಲ್ಲಿ ತಿಂಗಳಾನುಗಟ್ಟಲೇ ಸೂರ್ಯ ಮುಳುಗುವುದೇ ಇಲ್ಲ.
ಇದನ್ನೂ ಓದಿ:ನಾಸಾ ಗುಡ್‌ನ್ಯೂಸ್.. ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ವಾಪಸ್ ಬರುವ ಡೇಟ್ ಫಿಕ್ಸ್!
ನಮ್ಮ ಬೆಳಗಿನ ಸೊಬಗು ಅದ್ಭುತವಾಗಿರುತ್ತದೆ. ಬೆಳಗಿನ ಸೂರ್ಯೋದಯವಾಗುತ್ತಿದ್ದಂತೆ ಹಕ್ಕಿಗಳ ಚಿಲಿಪಿಲಿ, ಜನರು ತಮ್ಮ ಕೆಲಸಕ್ಕಾಗಿ ಸಿದ್ಧಗೊಳ್ಳುವುದು ಮತ್ತೆ ಸಾಯಂಕಾಲವಾದ ತಕ್ಷಣ ಪಕ್ಷಿಗಳು ತಮ್ಮ ಗೂಡಿಗೆ ವಾಪಸ್ ಆಗುವುದು ಇವೆಲ್ಲವನ್ನೂ ನಾವು ಕಂಡಿರುತ್ತೇವೆ. ಸೂರ್ಯನ ಬೆಳಕು ಈ ಭೂಮಿಗೆ ಎಷ್ಟು ಅವಶ್ಯಕತೆ ಇದೆ ಎಂಬುದು ಎಲ್ಲರಿಗೂ ಗೊತ್ತು, ಮನುಷ್ಯನಿಂದ ಹಿಡಿದು ಪ್ರಾಣಿ ಪಕ್ಷಿಗಳು ಹಾಗೂ ಸಸ್ಯಗಳಿಗೂ ಕೂಡ ಸೂರ್ಯನ ಬೆಳಕು ಬೇಕು. ನಮ್ಮಲ್ಲಿ 12 ಗಂಟೆಗಳ ಕಾಲ ದಿನದ ಕಾಲವಿದ್ದರೆ. ಬಾಕಿ ಗಂಟೆಗಳು ಕತ್ತಲಿನಿಂದ ತುಂಬುತ್ತವೆ. ಆಕಾಶದ ತುಂಬ ನಕ್ಷತ್ರ ಮೂಡುತ್ತವೆ. ಚಂದಿರನ ಬೆಳದಿಂಗಳು ತಂಪರೆಯುತ್ತದೆ. ಆದ್ರೆ ಈ ದೇಶಕ್ಕೆ ಆ ಭಾಗ್ಯವಿಲ್ಲ.
ಈ ದೇಶಗಳಲ್ಲಿ ಸೂರ್ಯನು ಮುಳುಗುವುದೇ ಇಲ್ಲ. ಯುರೋಪಿಯನ್ ದೇಶವಾದ ನಾರ್ವೆದಲ್ಲಿ ಸೂರ್ಯನು ಮುಳುಗುವುದೇ ಇಲ್ಲ ಇವರು. ಇವರು ರಾತ್ರಿಗಳನ್ನು ಕಾಣುವುದೇ ಅಪರೂಪ. ನಾರ್ವೆಯಲ್ಲಿ ಮೇಯಿಂದ ಜುಲೈನ ಕೊನೆಯವರೆಗೂ ಸೂರ್ಯ ಮುಳುಗುವುದೇ ಇಲ್ಲ. ಸದಾ ಇಲ್ಲಿ ಬೆಳಕು ಆವರಿಸಿಕೊಂಡಿರುತ್ತದೆ. ನಾರ್ವೆಯಲ್ಲಿ 10 ಏಪ್ರಿಲ್ನಿಂದ 23 ಆಗಸ್ಟ್ವರೆಗೂ ಸೂರ್ಯ ಆಗದಸದಲ್ಲಿ ಪ್ರಕಾಶಿಸುತ್ತಲೇ ಇರುತ್ತಾನೆ. ಇಲ್ಲಿ ಕೇವಲ 40 ನಿಮಿಷಗಳ ಕಾಲ ಮಾತ್ರ ರಾತ್ರಿಯನ್ನು ಕಾಣುತ್ತಾರೆ ಜನರು
ಇದನ್ನೂ ಓದಿ:2 ವರ್ಷ ಫ್ರಿಡ್ಜ್ನಲ್ಲಿಟ್ಟ ಸಾಂಬಾರ್ ತಿಂದು ಭಾವುಕಳಾದ ಮಹಿಳೆ; ಇದರ ಹಿಂದೆ ಇರೋದು ಕರುಳು ಹಿಂಡುವ ಕಥೆ!
ಇನ್ನು ಸ್ವಿಡನ್ನಲ್ಲಿಯೂ ಕೂಡ ಸೂರ್ಯ ಮುಳುಗಲು ಹಠ ಮಾಡುತ್ತಾನೆ. ಆಗಸ್ಟ್ನ ಕೊನೆಯವರೆಗೂ ಇಲ್ಲಿ ಸೂರ್ಯ ರಾತ್ರಿ ಹತ್ತು ಗಂಟೆಗೆ ಮುಳುಗುತ್ತಾನೆ. ಮುಂಜಾನೆ 4.30ಕ್ಕೆ ಮತ್ತೆ ಸೂರ್ಯೋದಯವಾಗುತ್ತದೆ. ಇನ್ನು ಕೆನಡಾದ ನೂನಾವ್ ಪ್ರದೇಶ ತನ್ನ ಸೌಂದರ್ಯಕ್ಕಾಗಿಯೇ ಜಗತ್ತನಲ್ಲಿ ಜನಪ್ರಸಿದ್ಧಿ ಪಡೆದಿದೆ.ಇಲ್ಲಿ ವರ್ಷದಲ್ಲಿ ಸುಮಾರು ಎರಡು ತಿಂಗಳು 24 ಗಂಟೆಗಳ ಕಾಲ ಹಗಲನ್ನೇ ನಾವು ಕಾಣಬಹುದು. ಇನ್ನು ಅಲಕ್ಸಾದಲ್ಲಿ ಮೇ ಕೊನೆಯಿಂದ ಜುಲೈ ಕೊನೆಯವರೆಗೂ ಸೂರ್ಯ ಮುಳುಗುವುದೇ ಇಲ್ಲ.
ಈ ಸಾಲಿಗೆ ಸೇರುವ ಮತ್ತೊಂದು ದೇಶವೆಂದರೆ ಅದು ಫಿನ್ಲ್ಯಾಂಡ್ ದ್ವೀಪದಲ್ಲಿಯೂ ಕೂಡ ಸೂರ್ಯ ಮುಳುಗದೇ ಅಲ್ಲಿಯ ಜನರನ್ನು ಕಾಡುತ್ತಾನೆ. ಇಲ್ಲಿಯ ಅನೇಕ ಪ್ರದೇಶಗಳಲ್ಲಿ ಸುಮಾರು 73 ದಿನಗಳ ಕಾಲ ಸೂರ್ಯ ಮುಳುಗುವುದೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ