Advertisment

Plane accident: ಆಕಾಶದಲ್ಲೇ ಅಪಘಾತ.. ಹೆಲಿಕಾಪ್ಟರ್​​ಗೆ ಡಿಕ್ಕಿಯಾಗಿ ನದಿಗೆ ಬಿದ್ದ 60 ಪ್ರಯಾಣಿಕರಿದ್ದ ವಿಮಾನ..

author-image
Ganesh
Updated On
Plane accident: ಆಕಾಶದಲ್ಲೇ ಅಪಘಾತ.. ಹೆಲಿಕಾಪ್ಟರ್​​ಗೆ ಡಿಕ್ಕಿಯಾಗಿ ನದಿಗೆ ಬಿದ್ದ 60 ಪ್ರಯಾಣಿಕರಿದ್ದ ವಿಮಾನ..
Advertisment
  • ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದ ಬಳಿ ದುರ್ಘಟನೆ
  • ವಿಮಾನದಲ್ಲಿರುವ ಪ್ರಯಾಣಿಕರ ರಕ್ಷಣಾಕಾರ್ಯ ಶುರು
  • ಅನೇಕ ಮಂದಿ ಜೀವ ಕಳೆದುಕೊಂಡಿರುವ ಆತಂಕ

ಅಮೆರಿಕದ ವಾಷಿಂಗ್ಟನ್ ಡಿಸಿ ಬಳಿಯ ರೇಗನ್ ವಾಷಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಪಿಎಸ್‌ಎ ಏರ್‌ಲೈನ್ಸ್‌ನ (PSA Airlines) ಪ್ರಯಾಣಿಕರ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ( Army helicopter) ಆಕಾಶದಲ್ಲಿ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

Advertisment

ವಿಮಾನಯಾನ ಮೂಲಗಳ ಪ್ರಕಾರ, ವಿಮಾನದಲ್ಲಿ 60 ಪ್ರಯಾಣಿಕರಿದ್ದರು. ಪಿಎಸ್ಎ ಏರ್​ಲೈನ್ಸ್ ಅಮೆರಿಕನ್ ಏರ್​ಲೈನ್ಸ್​ನ ಅಂಗ ಸಂಸ್ಥೆಯಾಗಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ 65 ಆಸನಗಳಿದ್ದವು.

ಇನ್ನೂ ಓದಿ: CCL; ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರ್ ಯಾರಿಗೆ ಚಾನ್ಸ್​.. ಟ್ರೋಫಿಗೆ ಗುರಿ ಇಟ್ಟ ಕಿಚ್ಚನ ಹೊಸ ಹುರುಪು

ಅಪಘಾತದ ನಂತರ ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ. ಯಾವುದೇ ವಿಮಾನಗಳು ಕೂಡ ಲ್ಯಾಂಡ್ ಆಗುತ್ತಿಲ್ಲ. ಅಮೆರಿಕದ ಸೆನೆಟರ್ ಟೆಡ್ ಕ್ರೂಜ್ ಟ್ವೀಟ್ ಮಾಡಿ.. ಅಪಘಾತದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ.

Advertisment

ಘಟನೆಯ ಕುರಿತು ಅಮೆರಿಕನ್ ಏರ್‌ಲೈನ್ಸ್ ಹೇಳಿಕೆ ನೀಡಿದ್ದು, ಪಿಎಸ್‌ಎ ನಡೆಸುತ್ತಿದ್ದ ಅಮೆರಿಕನ್ ಈಗಲ್ ಫ್ಲೈಟ್ 5342 (Eagle flight 5342) ಅಪಘಾತಕ್ಕೀಡಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದಿದೆ.

Advertisment

ಸದ್ಯದ ಪರಿಸ್ಥಿತಿ ಹೇಗಿದೆ?

ಘಟನೆಯ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ನದಿಯಲ್ಲಿ ಬಿದ್ದ ವಿಮಾನದ ಅವಶೇಷಗಳನ್ನು ಶೋಧಿಸಲಾಗುತ್ತಿದೆ. ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment