‘ಸರ್​ಪ್ರೈಸ್​ ಕೊಟ್ಟಿದ್ರು’.. ಮಗನ ಜತೆ ವಿಡಿಯೋ ಕಾಲ್​ನಲ್ಲಿ ಇರುವಾಗಲೇ ವಿಮಾನ ಪತನ.. ತಂದೆ ಕಣ್ಣೀರು

author-image
Veena Gangani
Updated On
‘ಸರ್​ಪ್ರೈಸ್​ ಕೊಟ್ಟಿದ್ರು’.. ಮಗನ ಜತೆ ವಿಡಿಯೋ ಕಾಲ್​ನಲ್ಲಿ ಇರುವಾಗಲೇ ವಿಮಾನ ಪತನ.. ತಂದೆ ಕಣ್ಣೀರು
Advertisment
  • ಏರ್ ಇಂಡಿಯಾ ಘೋರ ದುರಂತದಲ್ಲಿ ಪ್ರಾಣಬಿಟ್ಟ 270 ಮಂದಿ
  • ಮಗ ಹಾಗೂ ಸೊಸೆಯನ್ನು ಕಳೆದಕೊಂಡ ಕುಟುಂಬ ಕಣ್ಣೀರು
  • ನ್ಯೂಸ್​ಫಸ್ಟ್​ನೊಂದಿಗೆ ಮಗ ಹಾಗೂ ಸೊಸೆ ಬಗ್ಗೆ ಏನಂದ್ರು?

ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್​ ರಮೇಶ್ ಮಾತ್ರ ಬದುಕಿ ಬಂದಿದ್ದಾರೆ.

ಇದನ್ನೂ ಓದಿ:ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?

publive-image

ಇನ್ನೂ, ಈ ದುರಂತದಲ್ಲಿ ಲಂಡನ್‌ನಲ್ಲಿದ್ದ ಮಗ ಹಾಗೂ ಸೊಸೆಯನ್ನು ಕಳೆದುಕೊಂಡು ಕುಟುಂಬ ಕಣ್ಣೀರು ಹಾಕುತ್ತಿದೆ. ಹೌದು, ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಅನೀಲ್​ ಪಟೇಲ್ ಅವರ ಪುತ್ರ ಹರ್ಷಿತ್ ಹಾಗೂ ಅವರ ಪತ್ನಿ ಪೂಜಾ ನಿಧನರಾಗಿದ್ದಾನೆ. ಡಿಎನ್ಎ ಮಾದರಿ ನೀಡಿರುವ ಪಟೇಲ್ ಆಸ್ಪತ್ರೆಯಲ್ಲಿ ಮಗ-ಸೊಸೆಯ ಶವಗಳ ಹಸ್ತಾಂತರಕ್ಕೆ ಕಾಯುತ್ತಿದ್ದಾರೆ.


ಇದೇ ವೇಳೆ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ಅವರು, ಎರಡು ವರ್ಷಗಳ ಬಳಿಕ ನನಗೆ ಹೇಳದೇ ಭಾರತಕ್ಕೆ ಬಂದು ಸರ್​ಪ್ರೈಸ್​ ಕೊಟ್ಟಿದ್ದರು. ಹರ್ಷಿತ್ ಪಟೇಲ್ ಲಂಡನ್​ನಲ್ಲಿ ಇಂಜಿನಿಯರ್ ಆಗಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಪತ್ನಿ ಪೂಜಾ ಪಟೇಲ್ ಪ್ರಗ್ನೆನ್ಸಿ ಮಿಸ್ ಕ್ಯಾರಿಯೇಜ್ ಆಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಅಹಮದಾಬಾದ್​ಗೆ ಹತ್ತು ದಿನದ ಹಿಂದೆ ಬಂದಿದ್ದರು. ನನ್ನೊಂದಿಗೆ ಸಂತಸದಿಂದ ಕಾಲ ಕಳೆದ ಬಳಿಕ ಮತ್ತೆ ಜೂನ್ 12ರಂದು ಗುರುವಾರ ಲಂಡನ್​ಗೆ ಹೋಗುವಾಗ ನಾವೆಲ್ಲಾ ಏರ್ ಪೋರ್ಟ್​ಗೆ ಡ್ರಾಪ್ ಮಾಡಿ ಬಂದಿದ್ದೇವು. ಬಳಿಕ ಮಗ ಹಾಗೂ ಸೊಸೆ ವಿಮಾನದಲ್ಲಿ ಕುಳಿತಾಗ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅದೇ ಕೊನೆಯ ವಿಡಿಯೋ ಕಾಲ್. ಆ ಒಂದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment