/newsfirstlive-kannada/media/post_attachments/wp-content/uploads/2024/12/South-Korea-1.jpg)
ದಕ್ಷಿಣ ಕೊರಿಯಾದ (South Korea) ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Muan International Airport) ಭಾರೀ ದುರಂತ ಸಂಭವಿಸಿದೆ. 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದಿದೆ.
ದುರಂತದಲ್ಲಿ ಸುಮಾರು 28 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಜೆಜು ಏರ್ (Jeju Air Flight 2216 ) ವಿಮಾನವು ಥೈಲ್ಯಾಂಡ್‌ನಿಂದ ವಾಪಸ್ ಆಗುತ್ತಿದ್ದಾಗ ಅನಾಹುತ ಸಂಭವಿಸಿದೆ. ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿಯನ್ನು ನಂದಿಸಲಾಗಿದೆ.
ಇದನ್ನೂ ಓದಿ:Gold Case; ಅಗ್ರಹಾರ ಜೈಲು ಸೇರಿದ ಐಶ್ವರ್ಯ.. ಟೋಪಿ ಹಾಕಿದ್ದ ನಟ ಧರ್ಮೇಂದ್ರ ನಾಪತ್ತೆ
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಮುವಾನ್ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ಲ್ಯಾಂಡಿಂಗ್ ವೇಳೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಅಲ್ಲಿಯ ಕಾಲಮಾನದ ಪ್ರಕಾರ ಬೆಳಗ್ಗೆ 9.7ರ ಸುಮಾರಿಗೆ ಅಪಘಾತ ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ವಿಮಾನವು ಗಂಟೆಗೆ 280 ಕಿಲೋ ಮೀಟರ್ ವೇಗದಲ್ಲಿತ್ತು.
ಇದನ್ನೂ ಓದಿ:ಆರಂಭದದಲ್ಲಿ ಸೈಡ್ ಡಾನ್ಸರ್, ಈಗ 15 ಕೋಟಿ ಸಂಭಾವನೆ ಪಡೆಯುವ ನಟಿ.. ನಾವು ಹೇಳುತ್ತಿರುವುದು ಯಾರ ಬಗ್ಗೆ ಗೊತ್ತಾ?
⚡️DRAMATIC moment South Korean plane with reported 180+ passengers becomes a fireball and crashes at airport CAUGHT on cam pic.twitter.com/VdrdavEXgT
— RT (@RT_com) December 29, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ