VIDEO: ಕಣ್ಣೆದುರೇ ವಿಮಾನ ಪತನ.. 18 ಮಂದಿ ಭಸ್ಮ.. ಬದುಕಿ ಬಂದ ಪೈಲಟ್​​

author-image
AS Harshith
Updated On
12 ಭೀಕರ ವಿಮಾನ ಪತನ.. ನೇಪಾಳಕ್ಕಿದೆ ಕರಾಳ ದುರಂತಗಳ ಇತಿಹಾಸ; ಎಷ್ಟು ಸಾವು? ಕಾರಣವೇನು?
Advertisment
  • ತ್ರಿಭುವನ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರ್ಘಟನೆ
  • ರನ್​ವೇಯಿಂದ ಕೆಳಕ್ಕೆ ಜಾರಿದ ಸಿಆರ್​ಜಿ 200 ವಿಮಾನ
  • ಬದುಕಿ ಬಂದ ಪೈಲಟ್​ನ ಫೋಟೋ ಇಲ್ಲಿದೆ ನೋಡಿ

ನೆರೆಯ ನೇಪಾಳಕ್ಕಿಂದು ಕರಾಳ ದಿನ. ಕಠ್ಮಂಡುವಿನಲ್ಲಿ ವಿಮಾನ ಪತನಗೊಂಡು ಅದರೊಳಗಿದ್ದ 19 ಮಂದಿಯ ಪೈಕಿ 18 ಜನರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್​ ಪೈಲಟ್​ ತನ್ನ ಜೀವ ಉಳಿಸಿಕೊಳ್ಳುವ ಮೂಲಕ ಆಸ್ಪತ್ರೆ ಸೇರಿದ್ದಾನೆ.

ತ್ರಿಭುವನ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 50 ಪ್ರಯಾಣಿಕರು ಕುಳಿತುಕೊಳ್ಳುವ ಸಿಆರ್​ಜಿ 200 ವಿಮಾನವು ಟೇಕಾಫ್​ ಆಗುವ ವೇಳೆ ಎಡವಿದೆ. ಬಾನೆತ್ತರಕ್ಕೆ ಹಾರಬೇಕಾಗಿದ್ದ ವಿಮಾನ ರನ್​ವೇಯಿಂದ ಜಾರಿ ನೆಲಕಪ್ಪಳಿಸಿದೆ. ನೆಲಕ್ಕೆ ಬಿದ್ದಿದ್ದೇ ತಡ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡು ವಿಮಾನವನ್ನೇ ಭಸ್ಮ ಮಾಡಿದೆ.


">July 24, 2024

ಸೌರ್ಯ ಏರ್​​ಲೈನ್ಸ್​ ಈ ದುರ್ಘಟನೆ ಸಾಕ್ಷಿಯಾಗಿದೆ. ಇಬ್ಬರು ಸಿಬ್ಬಂದಿಯನ್ನು ಮತ್ತು 17 ಜನರನ್ನು ಹೊತ್ತು ಸಾಗುತ್ತಾ ಫೋಖರಾಗೆ ತೆರಳಬೇಕಾಗಿತ್ತು. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಟೇಕಾಫ್​ ಆಗಿತ್ತು. ಆದರೆ ಆಕಾಶದೆತ್ತರಕ್ಕೆ ಹಾರದೆ ರನ್​​ವೇಯಿಂದ ನೇರವಾಗಿ ಕೆಳಕ್ಕೆ ಜಾರಿದೆ.


">July 24, 2024

ಬದುಕಿದ ಬಂದ ಪೈಲಟ್

ವಿಮಾನದಲ್ಲಿ ಪೈಲಟ್​​ ಓರ್ವನನ್ನು ಬಿಟ್ಟು ಉಳಿದವರೆಲ್ಲರು ಬೆಂಕಿಯ ಕೆನ್ನಾಗಿಗೆಗೆ ಸುಟ್ಟು ಭಸ್ಮವಾಗಿದ್ದಾರೆ. ಸದ್ಯ ಬದುಕಿರುವ ಪೈಲಟ್​ಗೆ ಮಾತ್ರ ಕರಾಳತೆಯ ಬಗ್ಗೆ ತಿಳಿದಿದೆ. ಆದರಲ್ಲೂ ಆತ ಹೇಗೆ ಬದುಕಿ ಬಂದ ಎಂಬ ಬಗ್ಗೆಯೂ ಅನೇಕರಿಗೆ ಕುತೂಹಲವಿದೆ. ಸದ್ಯ ಪೈಲಟ್​ ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ನಡೆಯುತ್ತಿದೆ.

ಅತ್ಯಂತ ಅಪಾಯಕಾರಿ ನಿಲ್ದಾಣ

ತ್ರಿಭುವನ್​ ಅಂತ್ರರಾಷ್ಟ್ರೀಯ ನಿಲ್ದಾಣದ ಸುತ್ತ ಆಳವಾದ ಕಮರಿ ಮತ್ತು ಕಣಿವೆಗಳಿಂದ ಕೂಡಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 2023 ನೇಪಾಳದ ಪೋಖರಾದಲ್ಲಿ ಇಂತಹದೇ ಘಟನೆ ನಡೆದಿತ್ತು. ವಿಮಾನವೊಂದು ಪತನಗೊಂಡು 72 ಜನರು ಸಾವನ್ನಪ್ಪಿದ್ದರು.

ಇದಲ್ಲದೆ, 1992ರಲ್ಲಿ ಪಾಕಿಸ್ತಾನ ಇಂಟರ್​ನ್ಯಾಷನಲ್​ ಏರ್​​ಲೈನ್ಸ್​ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಸಮೀಪಿಸುವಾಗ ಅಪಘಾತಕ್ಕೀಡಾಗಿತ್ತು. ಅಂದು 167 ಜನರು ಸಾವನ್ನಪ್ಪಿದ್ದರು. ಇದು ನೇಪಾಳದ ಅತಿ ಭೀಕರ ವಿಮಾನ ಅಪಘಾತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment